ಒಳ ಮೀಸಲಾತಿ ವರ್ಗೀಕರಣ ಸೂತ್ರದಲ್ಲಿ ದೋಷ ಸರಿಪಡಿಸಲು ಶಿವಪ್ಪ ಆಗ್ರಹ…
ಶಿವಮೊಗ್ಗ : ಒಳ ಮೀಸಲಾತಿ ವರ್ಗೀಕರಣ ಸೂತ್ರದಲ್ಲಿ ದೋಷವಾಗಿದ್ದು, ಅದನ್ನು ಸರಿಪಡಿಸಬೇಕು ಎಂದು ಕರ್ನಾಟಕ ಮಾದಿಗ ಮತ್ತು ಉಪ ಜಾತಿಗಳ ಒಳ ಮೀಸಲಾತಿ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕ ಪಿ. ಶಿವಪ್ಪ ಸುದ್ದಿ ಗೋಷ್ಟಿಯಲ್ಲಿ ಒತ್ತಾಯಿಸಿದರು.
ರಾಜ್ಯ ಸರ್ಕಾರ ಒಳ ಮೀಸಲಾತಿಯನ್ನು ಜಾರಿ ಮಾಡಲು ಹೊರಟಿದೆ. ಸೆ. ೪ರ ನಾಳೆ ಇದಕ್ಕಾಗಿ ಸಚಿವ ಸಂಪುಟ ಸಭೆ ನಡೆಯಲಿದೆ. ಈ ಸಭೆಯಲ್ಲಿ ದೋಷಪೂರಿತವಾಗಿರುವ ನಿರ್ಧಾರವನ್ನು ಪುನರ್ ಪರಿಶೀಲನೆ ಮಾಡಿ ಎಲ್ಲ ೧೦೧ ಪರಿಶಿಷ್ಟ ಜತಿಗಳಿಗೆ ನ್ಯಾಯ ಸಿಗಬೇಕು. ೬, ೬, ೫ರ ವರ್ಗೀಕರಣ ಸೂತ್ರ ಸರಿ ಇಲ್ಲ. ಸರ್ಕಾರ ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಿಖರ ದತ್ತಾಂಶಗಳ ಆಧಾರ ದಲ್ಲಿ ಅಂತರ್ ಹಿಂದುಳಿದಿರುವಿಕೆ ಆಧಾರದಲ್ಲಿ ವರ್ಗೀಕರಣ ಮಾಡಬೇಕಾಗುತ್ತದೆ. ಸುಪ್ರೀ ಕೋರ್ಟ್ ತೀರ್ಪಿನ ಆಧಾರದಲ್ಲಿ ನ್ಯಾ. ನಾಗಮೋಹನ್ ದಾಸ್ ಅವರು ವರ್ಗೀಕರಣ ಸೂತ್ರದ ಮೂಲಕ ವರದಿ ಸಲ್ಲಿಸಿದ್ದರು. ಆದರೆ, ರಾಜ್ಯ ಸರ್ಕಾರ ಅದನ್ನು ಪರಿಗಣಿಸಿದೆ. ಸುಪ್ರೀಂ ಕೋರ್ಟ್‌ನ ಆದೇಶದ ಮೂಲ ಆಶಯವನ್ನೇ ಮಣ್ಣುಪಾಲು ಮಾಡಿದೆ. ಆಯೋಗದ ವರದಿ ಯನ್ನು ಜಾರಿ ಮಾಡಲು ಆಗದಿದ್ದರೆ ಆಯೋಗವನ್ನೇಕೆ ರಚಿಸಬೇಕು ಎಂದು ಪ್ರಶ್ನಿಸಿದ ಅವರು, ಸಚಿವ ಸಂಪುಟದ ರಾಜಕೀಯ ಪ್ರೇರಿತ ನಿರ್ಧಾರದಿಂದ ಸಾಮಾಜಿಕ ನ್ಯಾಯದ ಆಶಯ ಮೂಲೆಗುಂಪಾಗಿದೆ ಎಂದು ಆಕ್ರೋಶ ಹೊರಹಾಕಿದರು.
ರಾಜ್ಯ ಸರ್ಕಾರ ಪ್ರಬಲ ಜತಿಗಳ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಈ ರಾಜಕೀಯ ನಿರ್ಧಾರ ಕೈಗೊಂಡಿದೆ. ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಈ ಮೂರು ಜತಿಗಳ ಗೊಂದಲವನ್ನು ಪರಿಹರಿಸು ವಲ್ಲಿಯೂ ವಿಫಲವಾಗಿದೆ. ಈ ಗೊಂದಲವನ್ನು ಜೀವಂತವಾಗಿ ಉಳಿಸುವ ಹುನ್ನಾರ ಇದರಲ್ಲಿ ಅಡಗಿದೆ. ಅಲ್ಲದೇ ಅಲೆಮಾರಿ ಗಳಿಗೂ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.
ಗೊಂದಲಗಳು ಪರಿಹಾರ ವಾಗುವ ಮೊದಲೇ ಸರ್ಕಾರ ಯಾವುದೇ ನೇಮಕಾತಿ ಪ್ರಕ್ರಿಯೆ ಯನ್ನು ಆರಂಭಿಸಬಾರದು. ಇದರಿಂದ ದುರ್ಬಲ ಜತಿಗಳ ಅವಕಾಶ ಕಿತ್ತುಕೊಂಡಂತಾ ಗುತ್ತದೆ. ಪರಿಶಿಷ್ಟ ಜತಿಗಳ ವರ್ಗೀಕರಣ ಶಿಕ್ಷಣ ಉದ್ಯೋಗದ ಜೊತೆಗೆ ಪರಿಶಿಷ್ಟ ಜತಿಗಲ ಮೀಸಲು ನಿಧಿಗೂ ಅನ್ವಯ ಆಗಬೇಕು. ಆ ಮೂಲಕ ಅವಕಾಶ ವಂಚಿತ ಮಾದಿಗ ಮತ್ತು ಅದರ ಉಪ ಜತಿಗಳಿಗೆ ನ್ಯಾಯ ಸಿಗಬೇಕು ಎಂದರು.
ಒಕ್ಕೂಟದ ವಿವಿಧ ಘಟಕಗಳ ಪದಾಧಿಕಾರಿಗಳಾದ ಮೂರ್ತಿ ಸಿ., ಚಂದ್ರಪ್ಪ ಹೆಚ್.ಎನ್., ಶಿವಾಜಿ, ವಿಜಯೇಂದ್ರ, ಅಶೋಕ್ ಕುಮಾರ್, ಚಂದ್ರಪ್ಪ ಮುಂತಾದವರಿದ್ದರು.

