ಜಿಲ್ಲಾ ಸುದ್ದಿತಾಜಾ ಸುದ್ದಿ

ಫೆ.24ರಿಂದ ಶಿವಮೊಗ್ಗ ಮಾರಿ ಜಾತ್ರೆ…

Share Below Link

ಶಿವಮೊಗ್ಗ : ಇತಿಹಾಸ ಮತ್ತು ಪುರಾಣ ಪ್ರಸಿದ್ಧವಾದ ಕೋಟೆ ಶ್ರೀ ಮಾರಿಕಾಂಬ ಜತ್ರೆಯು ಫೆ.೨೪ ರಿಂದ ೨೮ರವರೆಗೆ ೫ ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ ಎಂದು ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿಯ ಅಧ್ಯಕ್ಷ ಎಸ್.ಕೆ. ಮರಿಯಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಅಮ್ಮನವರಿಗೆ ಬಂಗಾರದ ಮುಖವಾಡವನ್ನು ತಯಾರಿಸಲಾಗಿದೆ. ಸುಮಾರು ೧ಕೆ.ಜಿ. ೬೦೦ಗ್ರಾಂ ತೂಕದ ಅಮ್ಮನವರ ಮುಖವಾಡವನ್ನು ಈ ಬಾರಿ ಅಮ್ಮನವರಿಗೆ ತೊಡಿಸಲಾಗುವುದು. ಇದರ ಜೊತೆಗೆ ಸುಮಾರು ೧೬ ಕೆ.ಜಿ. ಬೆಳ್ಳಿಯ ಬಾಗಿಲನ್ನು ಗರ್ಭಗುಡಿ ಬಾಗಿಲಿಗೆ ಜೋಡಿಸಲಾಗುವುದು. ಇದು ಅಮ್ಮನವರನ್ನು ಕಣ್ತುಂಬಿಕೊಳ್ಳಲು ಕಾರಣವಾಗುತ್ತದೆ ಎಂದರಲ್ಲದೇ, ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನವು ಇತಿಹಾಸ ಪ್ರಸಿದ್ಧವಾಗಿದೆ. ಕೆಳದಿ ಶಿವಪ್ಪನಾಯಕ ಅರಸರ ಕಾಲದಿಂದಲೂ ಈ ಹಬ್ಬ ಪ್ರತೀ ಎರಡು ವರ್ಷಕ್ಕೊಮ್ಮೆ ಅತ್ಯಂತ ಸಡಗರ- ಸಂಭ್ರಮದಿಂದ ಭಾವೈಕ್ಯತೆ ಯಿಂದ ಎ ಸಮಾಜದ ಸಹಕಾರದೊಂದಿಗೆ ಆಚರಿಸುತ್ತಾ ಬಂದಿದ್ದು, ರಾಜ್ಯದಲ್ಲಿಯೇ ಅತ್ಯಂತ ಹೆಸರುವಾಸಿಯಾಗಿದೆ ಎಂದರು.
ಫೆ.೨೪ರಿಂದ ಮಾರಿಕಾಂಬಾ ಜಾತ್ರಾ ಮಹೋತ್ಸವ ಆರಂಭವಾಗಲಿದ್ದು, ಅಂದು ಬೆಳಿಗ್ಗೆ ೫ ಗಂಟೆಗೆ ಸಮಿತಿ ವತಿಯಿಂದ ಮಂಗಳವಾದ್ಯದೊಂದಿಗೆ ಬಿ.ಬಿ. ರಸ್ತೆಯಲ್ಲಿನ ಬ್ರಾಹ್ಮಣ ಸಮಾಜದ ನಾಡಿಗರ ಕುಟುಂಬದವರನ್ನು ಪೂಜೆಗೆ ಆಹ್ವಾನಿಸಲಾಗುತ್ತದೆ. ಆ ಸಮಾಜದ ಮುತ್ತೈದೆಯರು ಮಂಗಳ ದ್ರವ್ಯಾದಿ ಗಳೊಂದಿಗೆ ಮೆರವಣಿಗೆಯಲ್ಲಿ ಬಾಸಿಂಗದೊಡನೆ ಗಾಂಧಿಬಜರಿನ ತವರು ಮನೆಯಲ್ಲಿರುವ ಶ್ರೀ ಮಾರಿಕಾಂಬೆಗೆ ಉಡಿ ತುಂಬಿ ಪೂಜೆ ಸಲ್ಲಿಸುತ್ತಾರೆ. ಇದೇ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದವರು ವಿಸರ್ಜನಾ ಮೂರ್ತಿಗೆ ಮಾಂಗಲ್ಯಧಾರಣೆ ಮಾಡಿ, ಸಾರ್ವಜನಿಕವಾಗಿ ಪೂಜೆಯನ್ನು ಆರಂಭಿಸುತ್ತಾರೆ. ಮಂಗಳವಾರ ರಾತ್ರಿ ೯ ಗಂಟೆಯವರೆಗೂ ಲಕ್ಷಾಂತರ ಮುತ್ತೈದೆ ಯರು ಶ್ರೀ ಮಾರಿಕಾಂಬೆಗೆ ಮಡಿಲಕ್ಕಿ ನೀಡಿ, ಉಡಿತುಂಬಿ ಪೂಜೆ ಸಲ್ಲಿಸುತ್ತಾರೆ. ನಂತರ ಮಾರಿಕಾಂಬೆಯನ್ನು ರಥದಲ್ಲಿ ಕೂರಿಸಿ ಮೆರವಣಿಗೆಯನ್ನು ಉಪ್ಪಾರ ಸಮಾಜದವರು ಗದ್ದುಗೆಗೆ ತರುತ್ತಾರೆ. ಇದರ ಮಧ್ಯೆ ಗಂಗಾಪರಮೇಶ್ವರಿ ದೇವಸ್ಥಾನದಿಂದ ಗಂಗಾಮತ ಸಮಾಜದವರು ಗಂಗೆಪೂಜೆಯೊಂದಿಗೆ ಅಮ್ಮನವರನ್ನು ಮಂಗಳವಾದ್ಯ ದೊಂದಿಗೆ ಎದುರುಗೊಂಡು ಪೂಜೆ ಸಲ್ಲಿಸುತ್ತಾರೆ ಎಂದರು.
ಗಾಂಧಿಬಜರಿನಲ್ಲಿ ಅಮ್ಮನವರನ್ನು ಪ್ರತಿಷ್ಠಾಪನೆ ಮಾಡಿದಾಗ ಭಕ್ತಾಧಿಗಳಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದು ಕೊಳ್ಳಲಾಗಿದೆ. ಅಲ್ಲಿ ಜಗ ತುಂಬಾ ಕಡಿಮೆ ಇರುವುದರಿಂದ ನೂಕು- ನುಗ್ಗಲು ಆಗದಂತೆ ಎಚ್ಚರಿಕೆ ವಹಿಸಲಾ ಗುವುದು. ಅಂಗವಿಕಲರಿಗೆ, ವಯಸ್ಸಾದ ವರಿಗೆ ವಿಶೇಷ ಮಾರ್ಗವನ್ನು ಕಲ್ಪಿಸ ಲಾಗುವುದು. ಭಕ್ತಾಧಿಗಳಿಗೆ ಮಡಿಲಕ್ಕಿ, ಸೀರೆ ತೆಗೆದುಕೊಳ್ಳಲು ವ್ಯವಸ್ಥಿತವಾಗಿ ಅವಕಾಶ ಕಲ್ಪಿಸಲಾಗುವುದು. ಎ ಕಡೆ ಸಿಸಿ ಟಿ.ವಿಯನ್ನು ಅಳವಡಿಸಲಾಗುವುದು ಎಂದರು.
ಬುಧವಾರ ಬೆಳಿಗ್ಗೆ ೪ಗಂಟೆಗೆ ಹರಿಜನ ಸಮಾಜದವರು ಅಂದರೆ ವಿದ್ಯಾನಗರದ ಕರ್ಲಟ್ಟಿ ಬಾಂಧವರು ಬೇವಿನುಡಿಗೆಯೊಂದಿಗೆ ಆಗಮಿಸಿ, ಮಾರಿಕಾಂಬೆಗೆ ಪೂಜೆ ಸಲ್ಲಿಸಿದ ನಂತರ ಅಮ್ಮನವರನ್ನು ಗದ್ದುಗೆಯಲ್ಲಿ ಕೂರಿಸ ಲಾಗುತ್ತದೆ. ನಂತರ ಕುರುಬ ಸಮಾಜದ ಚೌಡಿಕೆ ಕುಟುಂಬದವರು ದೇವಿಗೆ ನೈವೇದ್ಯಮಾಡಿ ಪೂಜೆ ಸಲ್ಲಿಸುತ್ತಾರೆ. ಅಂದು ಬೆಳಿಗ್ಗೆ ೬ ರಿಂದ ರಾತ್ರಿ ೧೦.೩೦ರ ವರೆಗೂ ವಾಲ್ಮೀಕಿ, ಉಪ್ಪಾರ, ಮಡಿವಾಳ ಸಮಾಜದವರು ಪೂಜೆ ಸಲ್ಲಿಸುತ್ತಾರೆ. ಈ ಪೂಜೆಯು ಸರದಿ ಯಂತೆ ನಾಲ್ಕು ದಿನಗಳ ಕಾಲವೂ ನಡೆಯುತ್ತದೆ ಎಂದರು.
ಫೆ.೨೮ರ ರಾತ್ರಿ ೭ಗಂಟೆಗೆ ಶ್ರೀ ಮಾರಿಕಾಂಬೆಯ ಉತ್ಸವ ವಿವಿಧ ಜನಪದ ಕಲಾತಂಡಗಳ ಮೆರಗಿ ನೊಂದಿಗೆ ಲಕ್ಷಾಂತರ ಜನರ ಮತ್ತು ಭಕ್ತರ ಅತ್ಯಂತ ಸಂಭ್ರಮದಿಂದ ವನಪ್ರವೇಶಕ್ಕೆ ಕಳಿಸಿಕೊಡುವ ಮೂಲಕ ಎರಡು ವರ್ಷಕ್ಕೊಮ್ಮೆ ನಡೆಯುವ ಜತ್ರೆಗೆ ತೆರೆ ಎಳೆಯಲಾಗುತ್ತದೆ. ಮಡಿವಾಳ ಸಮಾಜದವರು ಅಮ್ಮನ ವರನ್ನು ಮಧ್ಯರಾತ್ರಿ ವನಕ್ಕೆ ತೆಗೆದು ಕೊಂಡು ಹೋಗಿ ಅಂತಿಮವಾಗಿ ಸಮಾಜದ ಸಂಪ್ರದಾಯದಂತೆ ಶಾಸ್ತ್ರವನ್ನು ನಡೆಸಿ, ಪೂಜೆ ಸಲ್ಲಿಸಿ ವನದಿಂದ ಹಿಂದಿರುಗುತ್ತಾರೆ ಎಂದು ಹಬ್ಬದ ವಿಶೇಷತೆಗಳನ್ನು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಮತ್ತಷ್ಟು ವಿವರಣೆ ನೀಡಿ, ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಈ ಹಬ್ಬವನ್ನು ಆಚರಿಸಲಾಗುತ್ತದೆ. ಹಬ್ಬದ ಹಿನ್ನಲೆಯಲ್ಲಿ ಫೆ.೨೪ರಿಂದ ೨೭ರ ವರೆಗೆ ಈ ಬಾರಿ ಗಾಂಧಿಬಜರಿನ ರಾಮಣ್ಣ ಶ್ರೇಷ್ಠಿ ಪಾರ್ಕಿನಲ್ಲಿ ಪ್ರತಿದಿನ ಸಂಜೆ ೫ರಿಂದ ೯.೩೦ರವರೆಗೂ ಸಾಂಸ್ಕತಿಕ ಕಾರ್ಯಕ್ರಮಗಳು ನಡೆಯ ಲಿವೆ. ಫೆ.೨೪ರಂದು ಶಿವಮೊಗ್ಗದ ಝೇಂಕಾರ್ ಮೇಲೋಡೀಸ್‌ನಿಂದ ಸುಗಮ ಸಂಗೀತ, ಫೆ.೨೫ರಂದು ಮನು ಕಲಾಕೇಂದ್ರದವರಿಂದ ಭರತನಾಟ್ಯ, ಶಾಂತ ಆನಂದ್ ಅವರಿಂದ ಸುಗಮ ಸಂಗೀತ, ೨೬ರಂದು ಕೂಡ ಶ್ವೇತಾ ಪ್ರಕಾಶ್ ಮತ್ತು ನಾಗರತ್ನ ಸಂಗಡಿಗರಿಂದ ಕಾರ್ಯಕ್ರಮ ವಿಶೇಷವಾಗಿ ಫೆ.೨೭ ರಂದು ಸುರೇಖಾ ಹೆಗಡೆ, ಶಶಿಕಿರಣ್ ಹಾಗೂ ದೂರದರ್ಶನ ಕಲಾವಿದರಿಂದ ಸವಿನೆನಪು ಎಂಬ ಹಳೆಯ ಚಿತ್ರಗೀತೆಗಳ ಕಾರ್ಯಕ್ರಮ ನಡೆಯಲಿದೆ ಎಂದರು.
ಇದಾದ ಮೇಲೆ ಮಾರಿಕಾಂಬ ಜತ್ರೆಯ ಪ್ರಯುಕ್ತ ಮಾ.೬ರಿಂದ ಮಾ.೮ರವರೆಗೆ ನೆಹರೂ ಕ್ರೀಡಾಂಗಣ ದಲ್ಲಿ ಪ್ರತಿದಿನ ಮಧ್ಯಾಹ್ನ ೩ ಗಂಟೆ ಯಿಂದ ಕುಸ್ತಿ ಪಂದ್ಯಾವಳಿಗಳು ನಡೆಯಲಿವೆ. ಈ ಪಂದ್ಯಾವಳಿ ರಾಷ್ಟ್ರಮಟ್ಟzಗಿದ್ದು, ರಾಜ್ಯ ಮತ್ತು ರಾಷ್ಟ್ರಮಟ್ಟದ ಪೈಲ್ವಾನರುಗಳು ಇದರಲ್ಲಿ ಭಾಗವಹಿಸಲಿzರೆ. ಇದಕ್ಕಾಗಿ ಕುಸ್ತಿ ಸಮಿತಿ ರಚಿಸಲಾಗಿದೆ. ಅವರು ಈ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಾರೆ ಎಂದರು.
ಯಾವ ಭಕ್ತಾದಿಗಳಿಗೂ ಸರತಿಸಾಲಿನಲ್ಲಿ ನಿಲ್ಲುವಾಗ ಬಿಸಿಲಿನಿಂದ ಬಳಲುಬಾರದು ಎಂಬ ಕಾರಣಕ್ಕಾಗಿ ಶಿವಪ್ಪನಾಯಕ ಮಹದ್ವಾರದಿಂದ ಮತ್ತು ಕರ್ನಾಟಕ ಸಂಘದ ಬಳಿಯಿಂದ ಜರ್ಮನ್ ಟೆಂಟ್ ಹಾಕಲಾಗುವುದು. ಶಾಮೀಯಾನ ಕೂಡ ಹಾಕಲಾಗುತ್ತದೆ. ಇದರ ಜೊತೆಗೆ ಗಾಂಧಿಬಜರಿನ ಮಹಾದ್ವಾರದಲ್ಲಿ ಸುಮಾರು ೨೨ ಅಡಿ ಎತ್ತರದ ಕಾಳಿ ದೇವಿಯ ಮೂರ್ತಿ ಯನ್ನು ಅಲಂಕರಿಸಿ ನಿರ್ಮಿಸಲಾಗು ವುದು. ಜೊತೆಗೆ ಇಡೀ ನಗರದ ಎ ಬಡಾವಣೆಗಳಲ್ಲಿಯೂ ವಿದ್ಯುತ್ ಅಲಂಕಾರವನ್ನು ಮಾಡಲಾಗುವುದು. ಅಲ್ಲದೆ ಸಂಸ್ಕಾರಕ್ಕೆ ತೊಂದರೆಯಾಗದಂತೆ ನಗರದೆಡೆ ಸಂಘ-ಸಂಸ್ಥೆಗಳು, ಫ್ಲೆಕ್ಸಿಯನ್ನು ಹಾಕಬಹುದಾಗಿದ್ದು, ಮಹಾನಗರ ಪಾಲಿಕೆಯವರು ಯಾವ ಕಾರಣಕ್ಕೂ ಈ ಫ್ಲೆಕ್ಸಿಯನ್ನು ತೆಗೆಯ ಬಾರದು ಎಂದು ಈಗಾಗಲೇ ಮನವಿ ಮಾಡಿzವೆ. ಅವರು ಕೂಡ ಒಪ್ಪಿ ಕೊಂಡಿzರೆ ಎಂದು ಸಮಿತಿಯವರು ತಿಳಿಸಿದರು.
ಸಮಿತಿಯ ಪ್ರಮುಖರಾದ ಎನ್. ಉಮಾಪತಿ, ಎಂ.ಕೆ. ಸುರೇಶ್ ಕುಮಾರ್, ಹೆಚ್.ವಿ. ತಿಮ್ಮಪ್ಪ, ಎಸ್. ಹನುಮಂತಪ್ಪ, ಡಿ.ಎಂ. ರಾಮಯ್ಯ, ಎಸ್.ಸಿ. ಲೋಕೇಶ್, ಸೀತಾರಾಮ್‌ನಾಯಕ್, ಎ.ಹೆಚ್. ಸುನೀಲ್, ಟಿ.ಎಸ್. ಚಂದ್ರಶೇಖರ್, ಪೂಜ ಸತ್ಯನಾರಾಯಣ್, ಪಿ.ಸಿ. ಲಿಂಗರಾಜ್, ಎಸ್.ಜಿ. ಪ್ರಭಾಕರ್, ಎನ್. ಶ್ರೀಧರಮೂರ್ತಿ ನವುಲೆ, ಎಲ್. ಚಂದ್ರಶೇಖರ್, ವಿ.ರಾಜು, ಹೆಚ್.ಬಿ. ಪ್ರಕಾಶ್, ಹೆಚ್.ಟಿ. ವಾಸುದೇವ್, ಎಸ್.ಜಿ. ತುಕ್ಕೋಜಿರಾವ್, ಎನ್. ಶ್ರೀಧರ್ ನಾಡಿಗ್, ಎಸ್. ಶಿವು, ಎಸ್.ಸುಧೀರ್, ಸೋಮಶೇಖರ್ ನಾಡಿಗ್, ಹರೀಶ್‌ಲಾಲ್, ಕೆ.ವಿ. ಅಣ್ಣಪ್ಪ, ಮಂಜುನಾಥ್‌ಬಾಬು ಸೇರಿದಂತೆ ಹಲವರಿದ್ದರು.

Leave a Reply

Your email address will not be published. Required fields are marked *