ನ.೨ರ ನಾಳೆಯಿಂದ ನ.೩೦ರವರೆಗೆ ಶರಣರು ಕಂಡ ಶಿವ ಪ್ರವಚನಾ ಮಾಲೆ…
ಹೊನ್ನಾಳಿ: ಹೊನ್ನಾಳಿ ಈಶ್ವರೀಯ ವಿಶ್ವ ವಿದ್ಯಾನಿಲಯದಿಂದ ನ.೨ ರಿಂದ ೩೦ರವರೆಗೆ ಶರಣರು ಕಂಡಶಿವ ಎಂಬ ಪ್ರವಚನ ಮಾಲೆಯು ನಡೆಯಲಿದೆ ಎಂದು ಹೊನ್ನಾಳಿ ಬ್ರಹ್ಮಕುಮಾರಿ ಸಂಚಾಲಕಿ ಜ್ಯೋತಿ ತಿಳಸಿರುವರು.
ಈಶ್ವರಿ ವಿಶ್ವವಿದ್ಯಾನಿಲಯದಲ್ಲಿ ಪ್ರವಚನ ಮಾಲೆ ಸಮಾರಂಭದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನ. ೨ರ ನಾಳೆ ಸಂಜೆ ೬ ಗಂಟೆಗೆ ಪಟ್ಟಣದ ದುರ್ಗಮ್ಮ ದೇವಸ್ಥಾನದ ಹಿಂಬಾಗ ಉದ್ಘಾಟನಾ ಸಮಾರಂಭ ನಡೆಯಲಿದೆ. ಹುಬ್ಬಳಿಯ ರಾಜಯೋಗಿ ಬ್ರಹ್ಮಕುಮಾರ ಡಾ. ಬಸವರಾಜಋಷಿಗಳು ಇವರಿಂದ ೭೧ನೇ ಪ್ರವಚನ ಕಾರ್ಯಕ್ರಮ ಇಲ್ಲಿ ನಡೆಯಲಿದ್ದು. ಆರಂಭದ ೧೫ ದಿನಗಳಲ್ಲಿ ಇವರು ಪ್ರವಚನದಲ್ಲಿ ಪಾಲ್ಗೊಳ್ಳಲಿರುವರು ಎಂದರು.
ಕಾರ್ಯಕ್ರಮದ ದಿನ ಹೊನ್ನಾಳಿ ಕೇಂದ್ರದಿಂದ ಸಮಾರಂಭದ ವೇದಿಕೆವರೆಗೆ ಶಿವಲಿಂಗದ ಮೆರವಣಿಗೆಯೊಂದಿಗೆ ಕಾರ್ಯಕ್ರಮದ ಜಾಗೃತಿ ಮೂಡಿಸಲಾಗುವುದು. ಪ್ರತಿದಿನ ಸಂಜೆ ಸಮಾರಂಭದಲ್ಲಿ ಮಹಿಳೆಯರು, ವೈದ್ಯಕೀಯ ಕ್ಷೇತ್ರ, ಶಿಕ್ಷಣಕ್ಷೇತ್ರ ಸೇರಿದಂತೆ ಇತರರಿಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ನ.೨ರ ಗುರುವಾರ ಸಂಜೆ ೬ ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದ ಸಾನಿಧ್ಯವನ್ನು ಚನ್ನಮಲ್ಲಿಕಾರ್ಜುನ ಸ್ವಾಮೀಜಿಗಳು ವಹಿಸಲಿದ್ದು, ಅತಿಥಿಗಳಾಗಿ ಶಾಸಕ ಶಾಂತನಗೌಡ, ಮಾಜಿ ಶಾಸಕ ರೇಣುಕಾಚಾರ್ಯ, ಪುರಸಭೆ ಸದಸ್ಯರಾದ ಸುಮಾ ಮಂಜುನಾಥ, ಪಿಎಸ್ ಸುನೀಲಕುಮಾರ, ಹೆಚ್‌ಎ ಉಮಾಪತಿ, ಕೆಂಚಪ್ಪ, ಮಹೇಶ್ವರಪ್ಪ, ಬಾಬು, ಹರ್ಷ ಕಾಮತ್, ವಿನಯಕುಮಾರ, ನವೀನಕುಮಾರ, ಕೆಜಿ ನಿಂಗಪ್ಪ ಭಾಗವಹಿಸಲಿzರೆ ಎಂದರು.
ಪೂರ್ವಬಾವಿ ಸಭೆಯಲ್ಲಿ ಕೆಜಿ ನಿಂಗಪ್ಪ, ಹೆಚ್‌ಎ ಉಮಾಪತಿ, ವಿವಿಧ ಈಶ್ವರೀಯ ವಿದ್ಯಾಲಯದ ಅಕ್ಕಂದಿರಾದ ಕಲ್ಯಾಣದುರ್ಗಾ ಕಮಲಾಕ್ಷಿ, ವೈಎನ್‌ಎಸ್ ಕೋಟೆಯ ರಾಜಶ್ರೀ, ದಾಂಡೇಲಿ ಗೀತಾ, ಕುಷ್ಟಗಿ ಲತಾ, ತುಮ್ಮಿನಕಟ್ಟಿ ಮದುಕೇಶ್ವರಿ, ಕೂಡ್ಲಗಿ ಶಶಿಕಲಾ, ಹೊನ್ನಾಳಿ ನೀಲಮ್ಮ, ಸುಮಂಗಲ ಇನ್ನಿತರರಿದ್ದರು.