ಶಿವಮೊಗ್ಗ: ತಣ್ಣಗಾಗದ ಮೀಸಲಾತಿ ಕಿಚ್ಚು..
ಶಿವಮೊಗ್ಗ : ಒಳ ಮೀಸಲಾತಿ ಜರಿ ಸಂಬಂಧ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿರು ವುದನ್ನ ವಿರೋಧಿಸಿ ಬುಗಿಲೆದ್ಧ ಅಸಮಾಧಾನ ಇಂದು ಸಹ ಶಿವ ಮೊಗ್ಗದಲ್ಲಿ ಮುಂದು ವರೆದಿದೆ.
ಶಿವಮೊಗ್ಗ ತಾಲೂಕಿನ ಲಕ್ಷ್ಮೀಪುರ ತಾಂಡದಲ್ಲಿ ಪ್ರತಿ ಭಟನೆ ನಡೆಸಲಾಗಿದ್ದು, .ರಾಷ್ಟ್ರೀ ಯ ಹೆzರಿ ತಡೆದು, ಟೈರ್- ಅಡಿಕೆ ಕಬ್ವಿನ ಸೋಗೆ ಸುಟ್ಟು ಪ್ರತಿಭಟನೆ ನಡೆಸಲಾಯಿತು.
ಶಿವಮೊಗ್ಗ- ತೀರ್ಥಹಳ್ಳಿ -ಉಡುಪಿ- ಮಂಗಳೂರು ರಾಷ್ಟ್ರೀಯ ಹೆzರಿ ತಡೆದು, ಪ್ರತಿಭಟನಾಕಾರರ ಆಕ್ರೋಶ ವ್ಯಕ್ತಪಡಿಸಿzರೆ. ಇದರಿಂದ ಮಾಜಿ ಸಿಎಂ ಬಿಎಸ್ ವೈ ತವರು ಜಿ ಶಿವಮೊಗ್ಗದಲ್ಲಿ ಬಂಜರ ಸಮುದಾಯದ ಆಕ್ರೋಶ ಆರದಂತಾಗಿದೆ.
ಬಂಜರ ಸಮುದಾಯದ ಪ್ರತಿಭಟನೆಯಿಂದ ವಾಹನಗಳು ಸಾಲುಗಟ್ಟಿವೆ. ಲಕ್ಷ್ಮೀಪುರ ತಾಂಡ, ಹೊಸಹಳ್ಳಿ, ಮಂಡೆನಕೊಪ್ಪ ತಾಂಡದವರಿಂದ ಪ್ರತಿಭಟನೆ ನಡೆದಿದೆ. ಒಳ ಮೀಸಲಾತಿ ಆದೇಶ ವಾಪಸು ಪಡೆಯಲು ಸರ್ಕಾರಕ್ಕೆ ಬಂಜರ ಸಮೂದಾಯ ಆಗ್ರಹ.
ಪ್ರತಿಭಟನಾಕಾರರ ಮನವೊಲಿಸಿ, ವಾಹನ ಸಂಚಾರಕ್ಕೆ ತುಂಗಾನಗರ ಪೊಲೀಸರು ಅವಕಾಶ ಕಲ್ಪಿಸಿಕೊಟ್ಟ ದೃಶ್ಯಗಳು ಲಭಿಸಿದೆ.