ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಚುನಾವಣೆ : ಸಜ್ಜಾದ ತಾಲೂಕು ಆಡಳಿತ…

Share Below Link

ಶಿವಮೊಗ್ಗ : ಮೇ ೧೦ರಂದು ನಡೆಯಲಿರುವ ೧೧೧-ಶಿವಮೊಗ್ಗ ಗ್ರಾಮಾಂತರ ಪರಿಶಿಷ್ಟ ಜತಿ ಮೀಸಲು ಕ್ಷೇತ್ರದ ವಿಧಾನಸಭಾ ಚುನಾವಣೆಗೆ ಶಿವಮೊಗ್ಗ ತಾಲೂ ಕು ಆಡಳಿತ ಸಕಲ ಸಿದ್ಧತೆ ಕೈಗೊಂ ಡಿದೆ ಎಂದು ಶಿವಮೊಗ್ಗ ಗ್ರಾಮಾ ಂತರ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಸೂಡಾ ಆಯುಕ್ತ ಕೊಟ್ರೆ ಶ್ ಹೆಚ್. ಅವರು ಹೇಳಿದರು.
ಅವರು ಇಂದು ತಾಲೂಕು ಚುನಾವಣಾ ಕಚೇರಿ ಕಾರ್ಯಾಲಯದಲ್ಲಿ ವಿಧಾನಸಭಾ ಚುನಾವಣಾ ಪೂರ್ವಸಿದ್ಧತೆಗಳ ಕುರಿತು ಮಾಧ್ಯಮಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು. ೨೦೨೩ರ ಜ.೫ರಂದು ಪ್ರಕಟ ಗೊಂಡ ಅಂತಿಮ ಕರಡು ಪಟ್ಟಿ ಯಲ್ಲಿ ಗುರುತಿಸಲಾಗಿರುವಂತೆ ೧,೦೩,೫೩೪ ಪುರುಷರು, ೧,೦೪, ೫೨೫ ಮಹಿಳೆಯರು, ಇತರೆ ಮೂರು ಮಂದಿ ಸೇರಿದಂತೆ ಒಟ್ಟು ೨,೦೮,೦೬೨ಮತದಾರರು ಪ್ರಸಕ್ತ ಚುನಾವಣೆಯಲ್ಲಿ ಮತದಾನ ಮಾಡಲಿzರೆ ಎಂದ ಅವರು, ೨೩೯೮ವಿಕಲಚೇತನರನ್ನು ಹಾಗೂ ೩೩೦೧ ೮೦+ ವಯೋಮಿತಿಯ ಮತದಾರರನ್ನು ಗುರುತಿಸಲಾಗಿದೆ ಎಂದರು.
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಹರಿಗೆ, ಮಲ ವಗೊಪ್ಪ, ಸೂಳೆಬೈಲು, ಭದ್ರಾ ವತಿ ತಾಲೂಕಿನ ಹೊಳೆಹೊನ್ನೂರು (ಭಾಗಶಃ), ಆನವೇರಿ ಮತ್ತು ಕಲ್ಲಿಹಾಳ, ಶಿವಮೊಗ್ಗ ತಾಲೂಕು ವ್ಯಾಪ್ತಿಯ ೩೭ ಮತ್ತು ಭದ್ರಾವತಿ ತಾಲೂಕಿನ ೧೭ಪಂಚಾಯಿತಿಗಳು ಸೇರಿದಂತೆ ಒಟ್ಟು ೫೪ ಗ್ರಾಮ ಪಂಚಾಯತಿಗಳು ಒಳಗೊಂಡಿವೆ. ಅಲ್ಲದೇ ಹೊಸದಾಗಿ ರಚನೆ ಗೊಂಡ ಹೊಳೆಹೊನ್ನೂರು ಪ.ಪಂ,ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಗೊಳಪಡಲಿವೆ ಎಂದ ಅವರು, ಶಿವಮೊಗ್ಗ ತಾಲೂ ಕಿನಲ್ಲಿ ೧೭೧ ಮತ್ತು ಭದ್ರಾವತಿ ತಾಲೂಕಿನಲ್ಲಿ ೭೬ ಸೇರಿದಂತೆ ಒಟ್ಟು ೨೪೭ಮತಗಟ್ಟೆಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಅವುಗಳ ಪೈಕಿ ೨೬ಸೂಕ್ಷ್ಮ ಮತ್ತು ೩೯ ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರು ತಿಸಲಾಗಿದ್ದು, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆ ಸಲು ಅಗತ್ಯ ಕ್ರಮ ವಹಿಸಲಾ ಗುವುದು ಎಂದವರು ತಿಳಿಸಿzರೆ.
ಏ.೧೩ರಂದು ಚುನಾವಣಾ ಅಧಿಸೂಚನೆ ಪ್ರಕಟಗೊಳ್ಳಲಿದ್ದು, ಅಂದಿನಿಂದ ಏ.೨೦ರವರೆಗೆ (ರಜ ದಿನಗಳನ್ನು ಹೊರತುಪಡಿಸಿ) ಬೆಳಿಗ್ಗೆ ೧೧ರಿಂದ ಮಧ್ಯಾಹ್ನ ೩ಗಂಟೆಯವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಏ.೨೧ರಂದು ಉಮೇದುವಾರರು ಸಲ್ಲಿಸಿದ ನಾಮಪತ್ರಗಳನ್ನು ಪರಿಶೀಲನೆ ನಡೆಸಲಾಗುವುದು. ಏ.೨೪ರಂದು ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾ ಗಿರುತ್ತದೆ. ಮೇ ೧೦ರಂದು ಚುನಾವಣೆ ನಡೆಯಲಿದ್ದು, ಮೇ ೧೩ರಂದು ನಗರದ ಸಹ್ಯಾದ್ರಿ ಕಲಾ ಪದವಿ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ. ಆಯ್ಕೆ ಬಯಸುವ ಉಮೇದುವಾರರು ತಮ್ಮ ನಾಮಪತ್ರಗಳನ್ನು ಸಲ್ಲಿಸಲು ಶಿವಮೊಗ್ಗ ತಾಲೂಕು ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದ ವರು ತಿಳಿಸಿzರೆ.
ಈ ಚುನಾವಣೆಯಲ್ಲಿ ಅಕ್ರಮ ಗಳು ನಡೆಯದಂತೆ ನಿಯಂತ್ರಣ ಕ್ರಮ ಕೈಗೊಳ್ಳುವ ಹಿನ್ನೆಲೆಯಲ್ಲಿ ಮೂರು ಪಾಳಿಯಲ್ಲಿ ಕಾರ್ಯನಿ ರ್ವಹಿಸಲು ಎಸ್.ಎಸ್.ಟಿ. ೫ತಂಡಗಳನ್ನು ರಚಿಸಲಾಗಿದ್ದು, ಅಂತರ ಜಿ ಗಡಿಯಲ್ಲಿ ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. ಅಲ್ಲದೇ ಎಫ್.ಎಸ್.ಟಿ. ೫ತಂಡ, ೦೮ ವಿಡಿಯೋ ಸರ್ವೇಲೆನ್ಸ್ ತಂಡ, ಮಾದರಿ ನೀತಿ ಸಂಹಿತೆ ೦೧ತಂಡ,

ಲೆಕ್ಕ ಪತ್ರ ವೀಕ್ಷಕರ ೦೧ ತಂಡ ಹಾಗೂ ಅವರಿಗೆ ಸಹಾ ಯಕರಾಗಿ ಲೆಕ್ಕವೀಕ್ಷಕರ ೦೧ತಂಡ ವನ್ನು ರಚಿಸಲಾಗಿದೆ. ೨೫ಸೆಕ್ಟರ್ ಅಧಿಕಾರಿಗಳ ಸೇವೆಯನ್ನು ಬಳಸಿ ಕೊಳ್ಳ ಲಾಗುತ್ತಿದೆ ಎಂದು ತಿಳಿಸಿzರೆ.
ಕ್ಷೇತ್ರದ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಉಲ್ಲಂಘನೆಯ ಯಾವು ದೇ ಪ್ರಕರಣಗಳ ಕುರಿತು ಮಾಹಿತಿ ನೀಡಲು ಹಾಗೂ ಸಾರ್ವಜನಿಕ ರಿಂದ ದೂರುಗಳನ್ನು ಪಡೆಯಲು ದಿನದ ೨೪ಗಂಟೆಗಳು ಸಕ್ರಿಯ ವಾಗಿರುವಂತೆ ೦೮೧೮೨- ೨೦೦ ೫೦೮ ಸಹಾಯವಾಣಿ ಕೇಂದ್ರವನ್ನು ಆರಂಭಿಸಲಾಗಿದ್ದು, ಸಾರ್ವಜನಿ ಕರು ಕರೆ ಮಾಡಿ ದೂರುಗಳನ್ನು ದಾಖಲಿಸಬ ಹುದಾಗಿದೆ ಅಲ್ಲದೇ ಸಿವಿಜಲ್ ಆಪ್ ನಲ್ಲಿಯೂ ದೂರುಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿzರೆ.
ಪತ್ರಿಕಾಗೋಷ್ಟಿಯಲ್ಲಿ ಸಹಾಯಕ ಚುನಾವಣಾಧಿಕಾರಿ ಪರಶುರಾಮ ಸತ್ತಿಗೇರಿ, ಸಿ.ಡಿ.ಪಿ. ಒ. ಚಂದ್ರಪ್ಪ, ಅರುಣ್ ಮುಂತಾ ದವರು ಉಪಸ್ಥಿತರಿದ್ದರು.