ಶಿವಮೊಗ್ಗ: ಕಾರ್ಮಿಕ ದಸರಾ ಸೇರ್ಪಡೆಗೆ ಆಗ್ರಹ
ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ಹಮ್ಮಿಕೊಳ್ಳಲಾಗಿರುವ ದಸರಾ ಉತ್ಸವದಲ್ಲಿ ಕಾರ್ಮಿಕ ದಸರಾ ಸೇರ್ಪಡೆ ಮಾಡುವಂತೆ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದೆ.
೨೦೨೫ನೇ ಸಾಲಿನಲ್ಲಿ ಪಾಲಿಕೆ ವತಿಯಿಂದ ನಡೆಯುವ ದಸರಾ ಉತ್ಸವದಲ್ಲಿ ವಿವಿಧ ವಿಭಾಗಗಳ ದಸರಾವನ್ನು ಆಚರಿಸುತ್ತಿದ್ದು, ಜನಜೀವನದ ಒಳಗೆ ಹಾಸುಹೊಕ್ಕಾಗಿರುವ ಕಾರ್ಮಿಕ ಸಮೂಹವಾಗಿರುವ ಪೌರ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಮೋಟಾರು ಸಾರಿಗೆ ಸಂಬಂಧಿಸಿದ ಕಾರ್ಮಿಕರು ಅಂಬೇಡ್ಕರ್ ಸಹಾಯಹಸ್ತ ಯೋಜನೆಯಡಿಯಲ್ಲಿ ಬರತಕ್ಕದಂತಹ ಕಾರ್ಮಿಕರನ್ನು ಒಳಗೊಂಡಂತೆ ಕಾರ್ಮಿಕರ ದಸರಾ ಉತ್ಸವ ಆಚರಿಸಬೇಕಾಗಿ ಮನವಿಯಲ್ಲಿ ವಿನಂತಿಸಲಾಗಿದೆ.
ಈ ಸಂದರ್ಭದಲ್ಲಿ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಕುಪೇಂದ್ರ ಆಯನೂರು, ರಾಜಧ್ಯಕ್ಷ ಪ್ರದೀಪ್ ಹೊನ್ನಪ್ಪ, ಪ್ರಧಾನ ಕಾರ್ಯದರ್ಶಿ ಇಂದು ಬಿ. ಗೌಡ, ಪ್ರಮುಖರಾದ ಚೇತನ್ ಲಕ್ಕಪ್ಪ, ಪ್ರದೀಪ್ ಕವಾಡ್, ಪ್ರಕಾಶ್ ಚಾಮುಂಡಿಪುರ, ವೈ. ಚಂದ್ರಶೇಖರ್, ದೀಪಾ ರಮೇಶ್, ಸುನಿತಾ ಇದ್ದರು.


