ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಶಿವಮೊಗ್ಗ : ಯೋಗೀಶ್‌ಗೆ ಕಾಂಗ್ರೆಸ್ ಟಿಕೆಟ್…

Share Below Link

ಶಿವಮೊಗ್ಗ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಇಂದು ೪೩ ಅಭ್ಯರ್ಥಿಗಳ ೩ನೇ ಪಟ್ಟಿ ಬಿಡುಗಡೆ ಮಾಡಿದೆ. ಶಿವಮೊಗ್ಗ ವಿಧಾನ ಸಭಾ ಕ್ಷೇತ್ರದಿಂದ ಶಿವಮೊಗ್ಗ ಮಹಾನಗರ ಪಾಲಿಕೆ ಕಾರ್ಪೊರೇ ಟರ್ ಹಾಗೂ ಮಾಜಿ ಶಾಸಕ ಹೆಚ್.ಎಂ. ಚಂದ್ರಶೇಖರಪ್ಪ ಅವರ ಪುತ್ರ ಹೆಚ್.ಸಿ. ಯೋಗೀಶ್ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ.
ಶಿವಮೊಗ್ಗ ಕ್ಷೇತ್ರದಿಂದ ಬಹು ತೇಕರು ಟಿಕೆಟ್ ಆಕಾಂಕ್ಷಿಗಳಾಗಿ ದ್ದರು. ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್, ಎಸ್.ಕೆ. ಮರಿಯಪ್ಪ, ಎಸ್.ಪಿ. ದಿನೇಶ್, ಎಲ್. ಸತ್ಯ ನಾರಾಯಣರಾವ್, ಹೆಚ್.ಎಸ್. ಸುಂದರೇಶ್ ಸೇರಿದಂತೆ ಹಲವರು ಅರ್ಜಿ ಸಲ್ಲಿಸಿದ್ದರು. ಈಗ ಎಲ್ಲದಕ್ಕೂ ಬ್ರೇಕ್ ಬಿದ್ದಿದ್ದು, ಯೋಗೀಶ್ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ಆಗಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ಮೀಸಲು ಕ್ಷೇತ್ರದಿಂದ ಮಾಜಿ ಶಾಸಕ ದಿ| ಕರಿಯಣ್ಣ ಅವರ ಪುತ್ರ ಡಾ. ಶ್ರೀನಿವಾಸ ಕರಿಯಣ್ಣ ಅವರಿಗೆ ಈ ಬಾರಿಯೂ ಕಾಂಗ್ರೆಸ್ ಮಣೆ ಹಾಕಿದೆ. ಶಿಕಾರಿಪುರ ಕ್ಷೇತ್ರದಿಂದ ಜಿ.ಬಿ. ಮಾಲ ತೇಶ್ (ಗೋಣಿ) ಮಾಲತೇಶ್ ಅವರಿಗೆ ಟಿಕೆಟ್ ಘೋಷಣೆ ಆಗಿದೆ.ಈ ಹಿಂದೆ ಭದ್ರಾವತಿ ಯಿಂದ ಬಿ.ಕೆ. ಸಂಗಮೇಶ್ವರ್, ಸೊರಬದಿಂದ ಮಧು ಬಂಗಾರಪ್ಪ, ಸಾಗರದಿಂದ ಬೇಳೂರು ಗೋಪಾ ಲಕೃಷ್ಣ, ತೀರ್ಥಹಳ್ಳಿಯಿಂದ ಕಿಮ್ಮನೆ ರತ್ನಾಕರ್ ಅವರಿಗೆ ಟಿಕೆಟ್ ಘೋಷಣೆ ಆಗಿತ್ತು. ಈ ನಡುವೆ ಆಯನೂರು ಮಂಜುನಾಥ್ ಕಾಂಗ್ರೆಸ್‌ನಿಂದ ಸ್ಪರ್ಧಿ ಸಲಿದ್ದಾರೆ ಎಂದು ಹೇಳಲಾಗಿತ್ತು. ಇದಕ್ಕೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ವಿರೋಧ ವ್ಯಕ್ತಪಡಿಸಿ ತಮ್ಮಲ್ಲೇ ಒಬ್ಬರಿಗೆ ಟಿಕೆಟ್ ನೀಡಬೇಕೆಂದು ಮನವಿ ಮಾಡಿದ್ದರು. ಈ ಮನವಿಗೆ ಕೆಪಿಸಿಸಿ ತಲೆಬಾಗಿದೆ ಎನ್ನಲಾಗಿದೆ.
ಶಿವಮೊಗ್ಗ ನಗರ, ಗ್ರಾಮಾಂತರ, ಶಿಕಾರಿಪುರ ವಿಧಾನಸಭಾಕ್ಷೇತ್ರ ಗಳು ಜಿದ್ದಾ ಜಿದ್ದಿನ ಕಣಗಳಾಗುವ ಎಲ್ಲಾ ಸಾಧ್ಯತೆಗಳಿವೆ. ಶಿವಮೊಗ್ಗ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಘೋಷಣೆ ಶೀಘ್ರವೇ ಆಗಲಿದ್ದು, ಈಶ್ವರಪ್ಪನವರ ಪುತ್ರ ಕೆ.ಇ. ಕಾಂತೇಶ್ ಹೆಸರು ಪ್ರಮು ಖವಾಗಿ ಕೇಳಿ ಬರುತ್ತಿದೆ. ಇವರ ಕುಟುಂಬಕ್ಕೆ ಟಿಕೆಟ್ ನೀಡದಿದ್ದಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಬ್ರಾಹ್ಮಣ ಅಭ್ಯರ್ಥಿಗೆ ಟಿಕೆಟ್ ನೀಡುವುದು ನಿಚ್ಚಳ ಎನ್ನಲಾಗಿದೆ.
ಈ ಪೈಕಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಎಸ್.ದತ್ತಾತ್ರಿ ಹಾಗೂ ಹರಿಕೃಷ್ಣ ಹೆಸರುಗಳು ಕೇಳಿ ಬರುತ್ತಿವೆ. ಬಿಜೆಪಿ ಅಭ್ಯರ್ಥಿ ಹೆಸರು ಪೈನಲ್ ಆಗುತ್ತಿದ್ದಂತೆ ಚುನಾವಣೆಯ ಕಾವು ಮತ್ತಷ್ಟು ಏರತೊಡಗಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದ ಸದರಿ ಪಕ್ಷಗಳ ನಾಯಕರುಗಳು ಕೆಲ ಸ್ಥಳೀಯ ಪತ್ರಿಕೆಗಳಲ್ಲಿ ಕಾಸು ಕೊಟ್ಟು ತಮ್ಮ ಪರವಾಗಿ ಸುದ್ದಿಗಳನ್ನು ಪ್ರಕಟಿಸಿಕೊಂಡಿದ್ದು ನೀರಿನಲ್ಲಿ ಹೊಮ ಮಾಡಿದಂತಾಗಿದೆ.