ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಶಿಕಾರಿಪುರ: ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲೆಗೆ ಶತಮಾನೋತ್ಸವದ ಸಂಭ್ರಮ…

Share Below Link

ಶಿಕಾರಿಪುರ : ಪಟ್ಟಣದ ಹಳೆಯ ಸರ್ಕಾರಿ ಬಾಲಕಿಯರ ಶಾಲೆ ಎಂಬ ಹಿರಿಮೆ ಹೊಂದಿರುವ ಹಳಿಯೂರು ತೇರುಬೀದಿಯಲ್ಲಿನ ಸರ್ಕಾರಿ ಕಿರಿಯ ಬಾಲಕಿಯರ ಪ್ರಾಥಮಿಕ ಶಾಲೆ ಇದೀಗ ಶತಮಾನೋತ್ಸವದ ಸಂಭ್ರಮ ದಲ್ಲಿದ್ದು, ಲಕ್ಷಾಂತರ ಪ್ರತಿಭಾನ್ವಿತ ರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಜ.೧೧ರ ಭಾನುವಾರ ಅತ್ಯಂತ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾ ಗಿದೆ ಎಂದು ಶಾಲಾ ಶತಮಾನೋತ್ಸವ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಪುರಸಭಾ ಮಾಜಿ ಅಧ್ಯಕ್ಷ ವಸಂತಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಿಟೀಷ್ ಸರ್ಕಾರದ ಆಡಳಿತದಲ್ಲಿ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತ ರಾಗದಂತೆ ಪಟ್ಟಣದ ಹಳಿಯೂರು ತೇರುಬೀದಿಯಲ್ಲಿ ೧೯೦೮ರಲ್ಲಿ ಆರಂಭವಾದ ಸರ್ಕಾರಿ ಕಿರಿಯ ಪ್ರಾಥಮಿಕ ಬಾಲಕಿಯರ ಶಾಲೆ ಅತ್ಯಂತ ಹಳೆಯ ಹೆಣ್ಣು ಮಕ್ಕಳ ಶಾಲೆ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದು, ಲಕ್ಷಾಂತರ ಪ್ರತಿಭಾನ್ವಿತರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಶಾಲೆಯ ಬಗ್ಗೆ ನಿಖರ ದಾಖಲೆಯನ್ನು ಸಂಗ್ರಹಿಸಿ ಇದೀಗ ಶತಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಮೂಲಭೂತ ಸೌಲಭ್ಯದ ಕೊರತೆ ಎದುರಿಸುತ್ತಿದ್ದ ಶಾಲೆಗೆ ಹಳೆ ವಿದ್ಯಾರ್ಥಿಗಳ ಸಹಿತ ಸ್ಥಳೀಯ ದಾನಿಗಳ ಸಹಕಾರದಿಂದ ಅಲ್ಪಾವಧಿಯಲ್ಲಿಯೇ ಖಾಸಗಿ ಶಾಲೆಗೆ ಸರಿಸಮಾನವಾದ ಮೇಜು ಕುರ್ಚಿ ಟೇಬಲ್ ಪೀಠೋಪಕರಣ ಸುಸಜ್ಜಿತ ಆಟದ ವಸ್ತು, ಮೈದಾನ, ಶೌಚಾಲಯ ಜತೆಗೆ ಉದ್ಯಮಿ ಎಂ.ಪಿ. ಕುಮಾರ್ ನೆರವಿನಿಂದ ಅಡುಗೆ ಕೋಣೆ ನಿರ್ಮಾಣ ಗೊಂಡು ಪೋಷಕರ ಅಪೇಕ್ಷೆ ಗನುಗುಣವಾಗಿ ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಸಂಸದ ಬಿ.ವೈ. ರಾಘವೇಂದ್ರ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿzರೆ ಅಧ್ಯಕ್ಷತೆಯನ್ನು ಶಾಸಕ ವಿಜಯೇಂದ್ರ ವಹಿಸಲಿದ್ದಾರೆ ಎಂದರು.
ಮಾಜಿ ಶಾಸಕ ಶಾಂತವೀರಪ್ಪ ಗೌಡ, ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗರಾಜಗೌಡ, ಡಿಡಿಪಿಐ ಮಂಜುನಾಥ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ, ಬಿಇಒ ಲೋಕೇಶಪ್ಪ, ಶತಮಾನೋತ್ಸವ ಸಮಿತಿ ಅಧ್ಯಕ್ಷೆ ಬಿ.ವೈ ಅರುಣಾದೇವಿ ಸಹಿತ ಜನಪ್ರತಿನಿಧಿಗಳು ಗಣ್ಯರು ಪಾಲ್ಗೊಳ್ಳಲಿzರೆ ಎಂದರು.
ಸಲಹಾ ಸಮಿತಿ ಸಂಚಾಲಕ ಎಂ.ಬಿ ಚನ್ನವೀರಪ್ಪ ಮಾತನಾಡಿ, ಶಾಲಾ ಶತಮಾನೋತ್ಸವ ಕಾರ್ಯಕ್ರಮಕ್ಕೆ ಸಂಸದ ರಾಘವೇಂದ್ರ ಅತ್ಯಂತ ವಿಶೇಷ ಕಾಳಜಿ ವಹಿಸಿ ಪ್ರೋತ್ಸಾಹಿಸಿದ್ದು ಈ ದಿಸೆಯಲ್ಲಿ ಅಭಿನಂದಿಸುವುದಾಗಿ ತಿಳಿಸಿ ನಾಡಿನ ಉದ್ದಗಲಕ್ಕೂ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಶಾಲೆಯ ಹಳೆ ವಿದ್ಯಾರ್ಥಿಗಳ ಪ್ರೋತ್ಸಾಹ ಅವಿಸ್ಮರಣೀಯವಾಗಿದ್ದು ಅದ್ದೂರಿ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಸಹ ಶಿಕ್ಷಕಿ ಲಕ್ಷ್ಮೀ ಸುಣಗಾರ್ ಮಾತನಾಡಿ,ಪ್ರಸಕ್ತ ಸಾಲಿನಲ್ಲಿ ಆಂಗ್ಲ ಮಾದ್ಯಮ ಆರಂಭಿಸಲು ಎಲ್ಲ ಸಿದ್ದತೆ ಕೈಗೊಳ್ಳಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ದಾಖಲಿಸಿ ನುರಿತ ಶಿಕ್ಷಕರ ಸೇವೆಯ ಸದ್ಬಳಕೆಗೆ ಮನವಿ ಮಾಡಿದರು.
ಸಲಹಾ ಸಮಿತಿ ಸದಸ್ಯ ಮಂಜುನಾಥ್ (ರಾಜಲಕ್ಷ್ಮಿ), ಎಸ್.ಕೆ ಮಂಜುನಾಥ್ ಸಿಂಗ್, ಮಂಜಪ್ಪ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಸಂಗೀತ ಕುಮಾರನಾಯ್ಕ, ಪ್ರದೀಪ್ ದೀಕ್ಷಿತ್, ಸುರೇಂದ್ರಗೌಡ, ಹರೀಶ್ಚಂದ್ರ ಮತ್ತಿತರರು ಉಪಸ್ಥಿತರಿದ್ದರು.