ಆರೋಗ್ಯಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಜೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿಗೆ ಶಿಫ್ಟ್: ಆನೆ ದಾಳಿಗೊಳಗಾಗಿದ್ದ ಡಾ| ವಿನಯ್ ಸ್ಥಿತಿ ಗಂಭೀರ…

Share Below Link

ಶಿವಮೊಗ್ಗ: ಕಳೆದ ಮೂರು ದಿನಗಳ ಹಿಂದೆ ಚನ್ನಗಿರಿಯಲ್ಲಿ ಕಾಡಾನೆ ಸೆರೆಯ ಆಪರೇಶನ್ ವೇಳೆ ಸಕ್ರೆಬೈಲು ಆನೆ ಬಿಡಾರದ ಪಶು ವೈದ್ಯ ಡಾ. ವಿನಯ ಅವರ ಮೇಲೆ ಆನೆ ದಾಳಿ ಮಾಡಿತ್ತು. ಈ ದಾಳಿಯಲ್ಲಿ ವೈದ್ಯರ ಬೆನ್ನು ವೂಳೆಗೆ ಬಲವಾಗಿ ಪೆಟ್ಟು ಬಿದ್ದಿತ್ತು. ಬಳಿಕ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಸೇರಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದ ಪಶವೈದ್ಯ ಡಾ. ವಿನಯ ಸ್ಥಿತಿ ಗಂಭೀರವಾದ ಹಿನ್ನೆಯಲ್ಲಿ ಶಿವಮೊಗ್ಗ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲಾಡಳಿತವು ವೈದ್ಯ ವಿನಯ ಅವರನ್ನು ಬೆಂಗಳೂರಿನ ಮಣಿ ಪಾಲ್‌ಗೆ ಶೀಫ್ಟ್ ಮಾಡಲು ಮುಂದಾಗಿದ್ದರು.
ಅದರಂತೆ ರಾತ್ರಿಯೇ ಮಣಿಪಾಲ್ ವೈದ್ಯ ರ ಮತ್ತು ಮೆಡಿಕಲ್ ಟೀಮ್‌ನ್ನು ವೈದ್ಯರು ದಾಖಲಾಗಿದ್ದ ಖಾಸಗಿ ಆಸ್ಪತ್ರೆಗೆ ಕರೆಯಿಸಿ. ಬಳಿಕ ವೈದ್ಯರನ್ನು ಬೆಂಗಳೂರಿಗೆ ಅಂಬ್ಯುಲೇನ್ಸ್ ಮೂಲಕ ಕರೆದಕೊಂಡು ಹೋಗಲು ವ್ಯವಸ್ಥೆ ಮಾಡಿಕೊಂಡಿತ್ತು. ಈ ವೇಳೆ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಅವರು ಡಾ. ವಿನಯ ಅವರಿಗೆ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿ ದ್ದು, ವೈದ್ಯರನ್ನು ಶಿವಮೊಗ್ಗದಿಂದ ಬೆಂಗಳೂ ರಿನ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ವಿಶೇಷ ಅಂಬುಲೆನ್ಸ್‌ನ ಜೊತೆಗೆ ಬೆಂಗಳೂರು ಮಣಿಪಾಲ್ ಆಸ್ಪತ್ರೆಯ ರೆಸ್ಕ್ಯೂ ಟೀಂ ಅವರನ್ನ ಬೆಳಗ್ಗೆ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಿಂದ ಕರೆದೊಯ್ದಿದ್ದು, ಅಂದುಕೊಂಡಂತೆ ಆದರೆ ೫-೬ ಗಂಟೆಯ ಅವಧಿಯೊಳಗೆ ಡಾ.ವಿನಯ್‌ರನ್ನು ಬೆಂಗ ಳೂರಿಗೆ ಶಿಫ್ಟ್ ಮಾಡಲಾಗಿದೆ.
ನಿನ್ನೆ ರಾತ್ರಿಯೇ ಡಾ.ವಿನಯ್ ಅವರನ್ನು ಬೆಂಗಳೂರಿಗೆ ಶಿಫ್ಟ್ ಮಾಡಬೇಕಿತ್ತು. ಆದರೆ ಅವರಿಗೆ ಎಕ್ಮೋ ಸಪೋರ್ಟ್ ನೀಡಬೇಕಿತ್ತು ಸಪೋರ್ಟ್ ನೀಡಲೆಂದು ನಿನ್ನೆ (ಏ.೧೨) ರಾತ್ರಿ ಹತ್ತು ಗಂಟೆ ಸುಮಾರಿಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಿಂದ ಹತ್ತು ಜನರ ತಂಡ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ಬಂದಿಳಿದಿತ್ತು. ಹಾರ್ಟ್ ಹಾಗೂ ಲಂಗ್ಸ್‌ನ ಸಪೋರ್ಟ್‌ಗಾಗಿ ಈ ಎಕ್ಮೋ ಸಪೋರ್ಟ್ ನೀಡಲಾಗುತ್ತದೆ. ಇದರಿಂದ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿ ರುತ್ತದೆ ಎಂದು ಡಾ.ವಿನಯ್‌ರ ಸ್ನೇಹಿತ ಡಾ.ಗೌತಮ್ ತಿಳಿಸಿದ್ದಾರೆ.
ಇನ್ನೂ ಎಕ್ಮೋ ಸಪೋರ್ಟ್‌ನ್ನ ಅಳವಡಿ ಸಿದ ಬಳಿಕ ನಾಲ್ಕು ಗಂಟೆಗಳ ಕಾಲ ಅಬ್ಸರ್ ವೇಷನ್ ಮಾಡಲಾಯಿತು. ಆ ನಂತರ ಡಾ. ವಿನಯ್‌ರ ಶಿಫ್ಟಿಂಗ್‌ಗೆ ಸಿದ್ಧತೆ ಮಾಡಿಕೊಳ್ಳ ಲಾಯ್ತು. ಎರಡು ವಿಶೇಷ ಅಂಬುಲೆನ್ಸ್‌ಗಳು ಆಗಮಿಸಿದ್ದು, ಈ ಪೈಕಿ ಒಂದರಲ್ಲಿ ಡಾ.ವಿನಯ್‌ರನ್ನು ಕರದೊಯ್ಯಲಾಗಿದೆ. ಕಳೆದ ೧೦ ವರ್ಷಗಳಿಂದ ಡಾ. ವಿನಯ ಸಕ್ರೆಬೈಲಿ ನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಗಾಗಲೇ ಶಿವಮೊಗ್ಗ, ದಾವಣಗೆರೆ, ಉತ್ತರ ಕನ್ನಡ, ಬೆಳಗಾವಿ, ಹಾಸನ ಮುಂತಾದ ಜಿಲ್ಲೆಯಲ್ಲಿ ಡಾ. ವಿನಯ ನೇತೃತ್ವದಲ್ಲಿ ಕಾಡಾಣೆಗಳ ಸೆರೆ ಹಿಡಿಯುವ ಆಪರೇಶನ್‌ಗಳು ಯಶಸ್ವಿಯಾಗಿ ನಡೆದಿದ್ದವು.
ಹತ್ತಾರು ಕಾಡಾನೆ ಸೆರೆ ಹಿಡಿಯುವ ಆಪರೇಶನ್‌ನಲ್ಲಿ ಡಾ. ವಿನಯ್ ಅವರು ಮೂಂಚೂಣಿ ಯಲ್ಲಿರುತ್ತಿದ್ದರು. ಕಾಡಾನೆಗಳು ಹತ್ತಿರದಿಂದ ಕಂಡು ಬಂದ ತಕ್ಷಣ ಅದಕ್ಕೆ ಅರವಳಿಕೆ ಚುಚ್ಚುಮದ್ದು ನೀಡಲಾಗುತ್ತದೆ. ಬಳಿಕ ಅವುಗಳನ್ನು ತೆಗೆದುಕೊಂಡು ಹೋಗ ಲಾಗುತ್ತದೆ. ಇಂತಹ ಅನೇಕ ಕಾಡಾನೆಗಳ ಆಪರೇಶನ್ ಸಕ್ಸಸ್ ಆಗಿದ್ದವು. ಆದರೆ ಮೊನ್ನೆ ಏಕಾಏಕಿ ಮೊದಲು ಕಾಡಾನೆಯು ವಿನಯ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯ ಗೊಳಿಸಿದ್ದು ಮಾತ್ರ ನೋವಿನ ಸಂಗತಿಯಾ ಗಿತ್ತು. ಮಗನ ಈ ಸ್ಥಿತಿಯಲ್ಲಿ ಕಂಡ ತಾಯಿಯು ಕಣ್ಣೀರು ಹಾಕುತ್ತಿದ್ದರು. ಮಗ ಮತ್ತೆ ಜೀವಂತ ವಾಗಿ ಬದುಕಿ ಬಂದರೆ ಅಷ್ಟೇ ಸಾಕು ಎಂದು ತಮ್ಮ ನೋವು ತೋಡಿ ಕೊಂಡರು. ಮಲೆನಾ ಡಿನಲ್ಲಿ ನೂರಾರು ಆನೆಗಳ ಅರೋಗ್ಯ ಕಾಪಾ ಡಿದ ಪಶು ವೈದ್ಯ ಡಾ.ವಿನಯ ಸ್ಥಿತಿ ಗಂಭೀರ ವಾಗಿದೆ. ಜೀರೋ ಟ್ರಾಫಿಕ್ ಮೂಲಕ ವೈದ್ಯರು ಸೇಫ್ ಆಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ತಲುಪಿದ್ದಾರೆ. ಮಣಿಪಾಲ್‌ನಲ್ಲಿ ಉತ್ತಮ ಚಿಕಿತ್ಸೆ ಸಿಕ್ಕು ಮತ್ತೆ ಅವರು ಗುಣಮುಖವಾಗಲಿ ಎನ್ನುವುದು ಮಲೆನಾಡಿಗರ ಹಾರೈಕೆಯಾಗಿದೆ.