ಮಾದಕ ವಸ್ತುಗಳ ತಡಗೆ ಶಾಶ್ವತಿ ಮಹಿಳಾ ವೇದಿಕೆ ಆಗ್ರಹ…
ಶಿವಮೊಗ್ಗ : ಗಾಂಜ ಸೇರಿದಂತೆ ಮಾದಕ ವಸ್ತುಗಳ ತಡೆಗೆ ಅಗತ್ಯಕ್ರಮ ಕೈಗೊಳ್ಳಬೇಕು ಎಂದು ಶಾಶ್ವತಿ ಮಹಿಳಾ ವೇದಿಕೆಯ ಅಧ್ಯಕ್ಷೆ ಶಾಂತಾ ಸುರೇಂದ್ರ ಅವರ ನೇತೃತ್ವ ದಲ್ಲಿ ವೇದಿಕೆಯ ಸದಸ್ಯರು ಇಂದು ಜಿ ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಜಿಯಲ್ಲಿ ಇತ್ತೀಚೆಗೆ ಗಾಂಜ ಹಾವಳಿಗೆ ಹೆಚ್ಚಾಗುತ್ತಿದೆ. ಶಾಲೆಯ ಮಕ್ಕಳ ಕೈಗೆ ಸುಲಭವಾಗಿ ಸಿಗುವುದರಿಂದ ಮಾದಕ ಸೇವನೆಗೆ ಮಕ್ಕಳು ಬಲಿಯಾಗುತ್ತಿzರೆ. ಮಕ್ಕಳ ಕ್ಷೇಮವೇ ಜನರ ಕ್ಷೇಮ ವಾಗಿದೆ. ಆದ್ದರಿಂದ ಈ ಬಗ್ಗೆ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು. ಶಾಲೆಗಳ ಹತ್ತಿರ ಇರುವ ಖಾಲಿ ಜಗಗಳಲ್ಲಿ ಇಸ್ಪೀಟ್ ಸೇರಿದಂತೆ ಯಾವುದೇ ಜೂಜಟಕ್ಕೆ ಅವಕಾಶ ಕೊಡಬಾರದು ಮತ್ತು ಅಲ್ಲಿ ಗಾಂಜ ಕೂಡ ಮಾರಾಟ ವಾಗುತ್ತಿರುತ್ತದೆ. ಅದನ್ನು ತಡೆಯಬೇಕು. ಗಾಂಜ ಮಾರಾಟ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಇತ್ತೀಚೆಗೆ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಆದ್ದರಿಂದ ಕೂಡಲೇ ಕಠಿಣಕ್ರಮ ಕೈಗೊಂಡು ಮಕ್ಕಳ ಭವಿಷ್ಯದ ಮೇಲೆ ದುಷ್ಪರಿಣಾಮ ಆಗದಂತೆ ನೋಡಿಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ವೇದಿಕೆಯ ಪ್ರಮುಖರಾದ ಶಿಲ್ಪಾ ಸತೀಶ್, ಶಾಂತಕ್ಕ, ಚಂದ್ರಮತಿ ಹೆಗಡೆ, ಪುಷ್ಪಾ, ದೀಪಾ ಮಂಜುನಾಥ್, ಸಂಗೀತ, ಪ್ರೇಮಾ, ಕಲಾ, ಮಂಜುಳಾ, ಗೀತೆ, ಉಮಾ, ಶಾರದಾ, ದೀಪಾ ಸೋಮಶೇಖರ, ಮಾಲಾ, ಸುಗಂಧಿನಿ, ರೇಣುಕಮ್ಮ, ಜಯಂತಿ, ಲೀಲಾ, ಲಲಿತಾ, ಮೀನಾ, ಸುಮಾ, ದೀಪ, ಚೈತ್ರ, ಶೋಭಾ, ಸುಮ ಸಾಯಿನಾಥ್, ಮಂಜುಳಮ್ಮ, ಸುಜತ ಇದ್ದರು.


