ಜಿಲ್ಲಾ ಸುದ್ದಿತಾಜಾ ಸುದ್ದಿ

ಸಾಮಾಜಿಕ ಕ್ರಾಂತಿಯೊಂದಿಗೆ ಅಕ್ಷರ ಕ್ರಾಂತಿ ಮೂಲಕ ಸಮಾಜಕ್ಕೆ ಮಹತ್ತರ ಕೊಡುಗೆ ನೀಡಿದ ಶರಣರು…

Share Below Link

ಶಿಕಾರಿಪುರ : ಜಾತಿ ಮತ ಬೇಧವಿಲ್ಲದೆ ಸರ್ವರ ಹಿತಕ್ಕಾಗಿ ಸಮರ್ಪಿಸಿಕೊಂಡ ಶರಣರು ಸಾಮಾಜಿಕ ಕ್ರಾಂತಿಯ ಜತೆಗೆ ಅಕ್ಷರ ಕ್ರಾಂತಿ,ಆರ್ಥಿಕ ಕ್ರಾಂತಿ ಮೂಲಕ ಸಮಾಜಕ್ಕೆ ಬಹು ದೊಡ್ಡ ಕೊಡುಗೆ ಯನ್ನು ಸಲ್ಲಿಸಿದ್ದಾರೆ ಎಂದು ಇಲ್ಲಿನ ತಹಸೀಲ್ದಾರ್ ಜಿ.ಎಸ್ ಶಂಕ್ರಪ್ಪ ತಿಳಿಸಿದರು.
ಪಟ್ಟಣದ ತಾ.ಪಂ ಸಭಾಂಗಣ ದಲ್ಲಿ ತಾಲೂಕು ಆಡಳಿತ, ತಾ.ಪಂ, ಪುರಸಭೆ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾ.ಹಡಪದ ಅಪ್ಪಣ್ಣ ಸಮಾಜ ವತಿಯಿಂದ ನಡೆದ ಶ್ರೀ ಹಡಪದ ಅಪ್ಪಣ್ಣ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಸಮಾಜ ನಿರ್ಮಾಣ ಪ್ರತಿಯೊಬ್ಬ ಶಿವಶರಣರ ಆದ್ಯತೆಯಾಗಿದ್ದು,ಸಮಾಜದಲ್ಲಿನ ಪ್ರತಿಯೊಬ್ಬರಲ್ಲಿ ಶಾಂತಿ ಸೌಹಾರ್ಧತೆ, ಭ್ರಾತೃತ್ವ ಮೂಡಿಸಿ ಬಡವ ಶ್ರೀಮಂತ ಮೇಲ್ಪರ್ಗ ಕೆಳವರ್ಗ ಎಂಬ ತಾರತಮ್ಯ, ಬೇಧವನ್ನು ಹೋಗಲಾಡಿಸಲು ಶ್ರಮಿಸಿದ್ದಾರೆ ಎಂದು ತಿಳಿಸಿದ ಅವರು, ೧೨ ನೇ ಶತಮಾನದಲ್ಲಿ ವಿಪರೀತವಾಗಿದ್ದ ಜಾತಿ ತಾರತಮ್ಯ ಕಂದಾಚಾರ ಮೂಡನಂಬಿಕೆ ಹೋಗಲಾಡಿಸಿ ಪ್ರತಿಯೊಬ್ಬರಲ್ಲಿ ಸಾಮರಸ್ಯ ಮೂಡಿಸಲು ಶರಣರ ಕೊಡುಗೆ ಮಹತ್ವವಾಗಿದೆ ಎಂದರು.
ಹಡಪದ ಅಪ್ಪಣ್ಣರವರ ಜೀವ ನಚರಿತ್ರೆ ಬಗ್ಗೆ ಸರ್ಕಾರಿ ಬಾಲಿಕಾ ಪದವಿಪೂರ್ವ ಕಾಲೇಜಿನ ಉಪ ನ್ಯಾಸಕ ಕೆ.ಎಚ್ ಪುಟ್ಟಪ್ಪ ಮಾತ ನಾಡಿ,ಬಸವಣ್ಣ ಹಾಗೂ ಅಪ್ಪಣ್ಣ ಸಮಕಾಲೀನರಾಗಿ ಇಬ್ಬರೂ ಬಾಗೇವಾಡಿಯಲ್ಲಿ ಜನಿಸಿ ಸಾಮಾ ಜಿಕ ಕ್ರಾಂತಿಯ ಹರಿಕಾರರಾಗಿ ಗುರುತಿಸಿಕೊಂಡಿದ್ದಾರೆ ಅನುಭವ ಮಂಟಪದಲ್ಲಿ ಬಸವಣ್ಣನವರ ಅತ್ಯಂತ ಆಪತಿರಾಗಿ ಗುರುತಿಸಿ ಕೊಂಡಿದ್ದ ಅಪ್ಪಣ್ಣನವರು ಶ್ರೇಷ್ಠ ವಚನ ರಚಿಸಿ ಸಮಾಜಕ್ಕೆ ಬೆಳಕಾ ಗಿದ್ದರು ದಮನಿತರ ದ್ವನಿಯಾಗಿದ್ದ ಅಪ್ಪಣ್ಣ ವೈಚಾರಿಕತೆಯ ವಚನಗ ಳನ್ನು ರಚಿಸಿ ಸಮಾಜದಲ್ಲಿನ ಅಂಕುಡೊಂಕು ಹೋಗಲಾಡಿಸಲು ಯತ್ನಿಸಿದ್ದಾರೆ ಎಂದು ತಿಳಿಸಿದ ಅವರು ನಿಜಸುಖಿ ಅಪ್ಪಣ್ಣ ಎಂದು ಗುರುತಿಸಿಕೊಂಡಿದ್ದ ಅವರು ಲೌಕಿ ಕ ಹಾಗೂ ಅಲೌಕಿಕ ಬದುಕಿನಲ್ಲಿ ಅಪಾರ eನ, ತಿಳುವಳಿಕೆಯನ್ನು ಹೊಂದಿದ್ದರು ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ತಾ.ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷ ವೀರಭದ್ರಪ್ಪ ಅಡಗಂಟಿ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಗ್ರೇಡ್ ೨ ತಹಸೀಲ್ದಾರ್ ವಿಶ್ವನಾಥ್ ಮರಡಿ,ಸಹಾಯಕ ಕೃಷಿ ನಿರ್ದೇಶಕ ಕಿರಣ್‌ಕುಮಾರ್ ಹರ್ತಿ, ರಾಜೇಶ್, ಸಮಾಜ ಕಲ್ಯಾಣಾಧಿಕಾರಿ ಮಲ್ಲೇಶಪ್ಪ,ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಉಮೇಶ್, ಪುರಸಭೆ ಪ್ರಭಂದಕ ರಾಜಕುಮಾರ್ ಮತ್ತಿತ್ತರರು ಉಪಸ್ಥಿತರಿದ್ದರು.