ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಶಕ್ತಿ ಯೋಜನೆ: ಬಸ್ ನಿಲ್ದಾಣದಲ್ಲಿ ಪ್ರಯಾಣಿಕರೊಂದಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್ ಚರ್ಚೆ

Share Below Link

ಶಿವಮೊಗ್ಗ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯ ಅನುಷ್ಠಾನಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಇಂದು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪ್ರಯಾಣಿಕ ರೊಂದಿಗೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಎಲ್ಲಾ ಮಹಿಳೆಯರು ಕೂಡ ಸರ್ಕಾರದ ಈ ಯೋಜನೆಗೆ ಹರ್ಷ ವ್ಯಕ್ತಪಡಿಸಿ ದ್ದಲ್ಲದೆ ನಮಗೆ ತುಂಬಾ ಅನುಕೂ ಲವಾಗಿದೆ. ಈ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸ ಬೇಡಿ. ಮುಂರುವ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿರಿಸಿ ಈ ಯೋಜನೆ ಜಾರಿಗೊಳಿಸದೆ ನಿರಂ ತರವಾಗಿರಲೆಂದು ಆಗ್ರಹಿಸಿದರು.
ಪುರುಷ ಪ್ರಯಾಣಿಕರು ಯೋಜನೆ ಏನೋ ಸರಿ ಇದೆ ಆದರೆ ಕೆಲವೊಂದು ಬಹು ಬೇಡಿಕೆಯ ಮಾರ್ಗಗಗಲ್ಲಿ ವಿಪರೀತ ರಶ್ ಇರುತ್ತದೆ. ಸಂಜೆ ೪ರ ನಂತರ ೬ರವರೆಗೆ ಶಾಲಾಕಾಲೇಜು ಮಕ್ಕಳಿಗೆ ಜಗವಿರುವುದಿಲ್ಲ. ಆ ಸಮಯದಲ್ಲಿ ಹೆಚ್ಚುವರಿ ಬಸ್ ಓಡಿಸುವಂತೆ ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಎಸ್. ಸುಂದರೇಶ್ ಕೆ.ಎಸ್.ಆರ್. ಟಿ.ಸಿ ಸಂಚಾಲನಾ ಅಧಿಕಾರಿ ದಿನೇಶ್ ಅವರಿಗೆ ನಾಗರಿಕರಿಗೆ ತೊಂದರೆ ಆಗದ ರೀತಿಯಲ್ಲಿ ಯಾವುದೇ ಅಪಸ್ವರ ಬರದಂತೆ ಯೋಜನೆ ಜರಿಗೊಳಿಸಿ ಎಂದು ಮನವಿ ಮಾಡಿದರು.
ಹಲವು ಬಸ್‌ಗಳಲ್ಲಿ ಹತ್ತಿ ಪ್ರಯಾಣಿಕರೊಂದಿಗೆ ಮಾತನಾಡಿದ ಅವರು, ಇದು ಕಾಂಗ್ರೆಸ್ ಸರ್ಕಾರದ ಯೋಜನೆ. ನಾಲ್ಕು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ನುಡಿದಂತೆ ನಡೆದಿದ್ದೇವೆ. ಕಾಂಗ್ರೆಸ್ ಪಕ್ಷ ಯಾವಾಗಲೂ ಬಡವರ ಪರವಾಗಿರುತ್ತದೆ ಎಂದರು.
ಬಿಜೆಪಿಯ ಸುಳ್ಳುಗಳನ್ನು ನಂಬ ಬೇಡಿ. ಅಪಪ್ರಚಾರ ಮಾಡುವುದೇ ಅವರ ಕೆಲಸ. ಬಡವರ ಪರ ಯೋಜನೆ ಗಳನ್ನು ತಂದ ಕಾಂಗ್ರೆಸ್ ಸರ್ಕಾರವನ್ನು ಸದಾ ಬೆಂಬಲಿಸಿ ಎಂದರು.
ಈ ಸಂದರ್ಭದಲ್ಲಿ ಯಮುನಾ ರಂಗೇಗೌಡ, ಚಂದ್ರಭೂಪಾಲ್, ಎನ್.ಡಿ. ಪ್ರವೀಣ್‌ಕುಮಾರ್, ಸ್ಟೆಲ್ಲಾ ಮಾರ್ಟಿನ್, ವಿಜಯಲಕ್ಷ್ಮಿ ಪಾಟೀಲ್, ಸುವರ್ಣಾ ನಾಗರಾಜ್, ಮೇಹಕ್ ಶರೀಫ್, ನಾಜೀಮಾ, ಪ್ರೇಮಾ ಶೆಟ್ಟಿ, ಅರ್ಚನಾ, ಡಿಟಿಒ ದಿನೇಶ್ ಸೇರಿದಂತೆ ಹಲವರಿದ್ದರು.