ಸೇವಾ ನ್ಯೂನ್ಯತೆ : ಗ್ರಾಹಕರಿಗೆ ಪರಿಹಾರ ನೀಡಲು ಆದೇಶ
ಶಿವಮೊಗ್ಗ : ಅಂಬಾ ಭವಾನಿ ಎಲೆಕ್ಟ್ರಿಕಲ್ಸ್, ಶಿವಮೊಗ್ಗ ಇವರ ವಿರುದ್ದ ಸೇವಾ ನ್ಯೂನ್ಯತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಅರ್ಜಿದಾರ ಕೆ.ಪಿ. ಶಾಂತಕುಮಾರ್ ಅವರಿಗೆ ಜಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರ ಪೀಠವು ಪರಿಹಾರ ಒದಗಿಸುವಂತೆ ಆದೇಶಿಸಿದೆ.
ಫಿರ್ಯಾದುದಾರರಾದ ಕೆ.ಪಿ. ಶಾಂತಕುಮಾರ್ ಹೊಸೂರು ಗ್ರಾಮದ ತಮ್ಮ ಜಮೀನಿನಲ್ಲಿ ಬೋರ್‌ವೆಲ್ ತೆಗೆಸಲು ಸಾಮಗ್ರಿ ಗಳನ್ನು ಖರೀದಿಸುವ ಉದ್ದೇಶದಿಂದ ಎದುರುದಾರ ಅಂಬಾ ಭವಾನಿ ಎಲೆಕ್ಟ್ರಿಕಲ್ಸ್‌ಗೆ ದಿ: ೧೦-೦೬-೨೦೨೦ ರಂದು ರೂ.೨ ಲಕ್ಷ ಗಳ ಚೆಕ್‌ನ್ನು ಮುಂಗಡವಾಗಿ ಪಾವತಿಸಿರುತ್ತಾರೆ. ಚೆಕ್ಕನ್ನು ದಿ: ೧೧-೦೬-೨೦೨೦ ರಂದು ಎದುರುದಾರರು ನಗದೀಕರಿಸಿ ಕೊಂಡಿದ್ದರೂ ಸಹ ಸರಕು ಒದಗಿಸಿರುವುದಿಲ್ಲ. ಆದ ಕಾರಣ ಪ್ರಕರಣ ದಾಖಲಿಸಿರುತ್ತಾರೆ.
ಎದುರುದಾರರು ಆಯೋಗದ ಮುಂದೆ ಹಾಜರಾಗಿ ಫಿರ್ಯಾದಿ ದಾರರು ತಮಗೆ ಅಪರಿಚಿತರಾ ಗಿದ್ದು, ಸರಕು ಖರೀದಿಗಾಗಿ ತಮ್ಮನ್ನು ಸಂಪರ್ಕಿಸಿರುವುದಿಲ್ಲ. ಮತ್ತು ಯಾವುದೇ ಚೆಕ್ಕನ್ನು ಸಹ ನೀಡಿರುವುದಿಲ್ಲ. ಡಾ.ಮೂರ್ತಿ ಎಂಬ ವ್ಯಕ್ತಿಯು ಸದರಿ ಚೆಕ್ಕನ್ನು ನೀಡಿದ್ದು, ಆ ವ್ಯಕ್ತಿ ಮುಖಾಂತರವೇ ಸಾಮಗ್ರಿಗಳನ್ನು ಸರಬರಾಜು ಮಾಡಲಾಗಿರುತ್ತದೆ ಎಂದು ಹೇಳಿರುತ್ತಾರೆ. ಆದರೆ ಸದರಿ ಇನ್ವಾಯ್ಸ್‌ಗಳಲ್ಲಿ ಎಲ್ಲಿಯೂ ಸಹ ಎಲೆಕ್ಟ್ರಿಕ್ ಸಾಮಗ್ರಿಗಳನ್ನು ಸ್ವೀಕರಿಸಿದ ಡಾ|ಮೂರ್ತಿ ಸಹಿ ಕಂಡು ಬಂದಿರುವುದಿಲ್ಲ ಮತ್ತು ಅವಕಾಶ ನೀಡಿದಾಗ್ಯೂ ಎದುರುದಾರರು ಡಾ|ಮೂರ್ತಿಯವರ ಸಾಕ್ಷ್ಯ ವಿಚಾರಣೆಯನ್ನು ಆಯೋಗದ ಮುಂದೆ ಮಾಡಿರುವುದಿಲ್ಲ ಹಾಗೂ ಫಿರ್ಯಾದಿದಾರರು ಕಳುಹಿಸಿದ ಲೀಗಲ್ ನೋಟಿಸಿಗೆ ಸೂಕ್ತ ಪ್ರತಿ ಉತ್ತರವನ್ನು ನೀಡಿರುವುದಿಲ್ಲ. ಈ ಎಲ್ಲ ಕಾರಣಗಳಿಂದ ಎದುರುದಾರರು ಸೇವಾನ್ಯೂನ್ಯತೆ ಎಸಗಿzರೆಂದು ಕಂಡು ಬಂದಿದ್ದು ಈ ಪ್ರಕರಣವನ್ನು ಭಾಗಶಃ ಪುರಸ್ಕರಿಸಲಾಗಿರುತ್ತದೆ.
ಎದುರುದಾರರು ಚೆಕ್ ಮೊತ್ತ ರೂ.೨ ಲಕ್ಷ ಗಳನ್ನು ಶೇ.೯ ಬಡ್ಡಿ ಸಮೇತ ಫಿರ್ಯಾದುದಾರರಿಗೆ ಪಾವತಿಸತಕ್ಕದ್ದು ಮತ್ತು ಉಂಟಾದ ಮಾನಸಿಕ ಹಿಂದೆ ಹಾಗೂ ಇತರೆ ಹಾನಿಗಳಿಗೆ ಸಂಬಂಧಿಸಿದಂತೆ ಪರಿಹಾರವಾಗಿ ರೂ.೧೦,೦೦೦ ಹಾಗೂ ವ್ಯಾಜ್ಯದ ಖರ್ಚುವೆಚ್ಚಗಳ ಬಾಬ್ತು ರೂ.೧೦,೦೦೦ಗಳನ್ನು ಪಾವತಿಸತಕ್ಕzಂದು ಜಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ. ಶಿವಣ್ಣ, ಸದಸ್ಯರಾದ ಸವಿತಾ ಬಿ ಪಟ್ಟಣಶೆಟ್ಟಿ ಮತ್ತು ಬಿ.ಡಿ.ಯೋಗಾನಂದ ಇವರು ಪೀಠವು ದಿ: ೬-೧೦-೨೦೨೩ ರಂದು ಆದೇಶಿಸಿದೆ ಎಂದು ಪ್ರಕಟಣೆ ತಿಳಿಸಿದೆ.