ಸೆ.೨೩: ಹೊನ್ನಾಳಿಯಲ್ಲಿ ಪಂಚಾಮಸಾಲಿ ಸಮಾಜದ ರಾಜ್ಯ ಕಾರ್ಯಕಾರಿಣಿ ಸಭೆ
ಹೊನ್ನಾಳಿ: ಪಂಚಮಸಾಲಿ ಸಮಾಜದ ರಾಜ್ಯ ಕಾರ್ಯಕಾರಿಣಿ ಹಾಗು ಸರ್ವ ಸದಸ್ಯರ ಸಭೆಯು ಸೆ.೨೩ರ ಶನಿವಾರದಂದು ಹಿರೇಕಲ್ಮಠದ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಬೆನಕನಹಳ್ಳಿ ವೀರಣ್ಣ ಹೇಳಿದರು.
ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ ಹೊನ್ನಾಳಿ ಹಾಗು ನ್ಯಾಮತಿ ಅವಳಿ ತಾಲೂಕು ಸಮಾಜದ ಮುಖಂಡರ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜದ ಗೌರವಾಧ್ಯಕ್ಷ ಡಾ.ರಾಜಕುಮಾರ್ ಅವರು ಮಾತನಾಡಿ, ಈ ಸಭೆಯಲ್ಲಿ ೧೫೦೦ ಸದಸ್ಯರು ಬರುವ ನಿರೀಕ್ಷೆಯಲ್ಲಿದ್ದು ರಾಜ್ಯ ಸಮಿತಿಯು ತಾಲೂಕು ಘಟಕದ ಮೇಲೆ ವಿಶ್ವಾಸ ವಿರಿಸಿ ಇಲ್ಲಿ ಹಮ್ಮಿಕೊಂಡಿದ್ದ ಈ ಸಭೆಗೆ ವಿವಿದ ಸಮೀತಿಯ ಪದಾಧಿಕಾರಿಗಳ ಒಮ್ಮತದೊಂದಿಗೆ ಜಿ ಸಮಿತಿ ಯೊಂದಿಗೆ ಚರ್ಚಿಸಿ ಸಮಾರಂಭ ಯಶಸ್ವಿಗೊಳಿಸೋಣ ಎಂದರು.
ರಾಜ್ಯ ಸ.ಕಾರ್ಯದರ್ಶಿ ದಾವಣಗೆರೆ ಲೋಕೇಶ್ ಅವರು ಮಾತನಾಡಿ, ರಾಜ್ಯ ಸಮೀತಿಯು ೧೯೯೮ ರಿಂದ ಈ ವರೆಗು ಸುಮಾರು ೨೫ ಸಭೆಗಳನ್ನು ವಿವಿಧ ಕ್ಷೇತ್ರದಲ್ಲಿ ರಾಜ್ಯ ಮಟ್ಟದ ಸಭೆ ನಡೆಸಿದ್ದು ೧೩೮೩೨ ಒಟ್ಟು ಸದಸ್ಯರಿದ್ದು ಸಭೆ ಯಲ್ಲಿ ಸದಸ್ಯತ್ವಹೊಂದಿದವರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು.
ಸಭೆಯಲ್ಲಿ ಭಾಗವಹಿಸುವ ಸದಸ್ಯರು ತಮ್ಮ ಸಲಹೆ ಸಹಕಾರ ಪ್ರಶ್ನೆಗಳೊಂದಿಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಸಭೆ ನಡೆಯಲಿದೆ. ಹೊನ್ನಾಳಿ ಹಾಗು ನ್ಯಾಮತಿ ಅವಳಿ ತಾಲೂಕಿನ ಸಮಾಜದ ಬಂಧುಗಳು ಈ ಕಾರ್ಯಕ್ರಮ ಯಶಸ್ವಿಗೊಳಿಸು ವಂತೆ ಮನವಿ ಮಾಡಿ ಜಿ ಸಮೀತಿಯು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಲಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಮಾಜದ ರಾಜ್ಯ ಉಪಾಧ್ಯಕ್ಷ ಪರಮೇಶ ಪಟ್ಟಣಶೆಟ್ಟಿ,ಜಿ ಸಮಿತಿಯ ನ್ಯಾಮತಿ ಪಂಚಣ್ಣ,ನ್ಯಾಮತಿ ತಾಲೂಕು ಚಂದ್ರಶೇಖರ ಪೂಜರ, ವಾಗೀಶ, ಮಹಿಳಾ ಅಧ್ಯಕ್ಷೆ ಶಿಲ್ಪಾ ರಾಜುಗೌಡ, ಪ್ರಮುಖರಾದ ಕುಂಕೊದ್ ಸೋಮಣ್ಣ, ಹಾಲೇಶ, ಯುವ ಘಟಕದ ಅಧ್ಯಕ್ಷ ಹಾಲೇಶ, ನಗರ ಘಟಕದ ಅಧ್ಯಕ್ಷ ಗಿರೀಶ ಸೇರಿದಂತೆ ಇನ್ನಿತರರಿದ್ದರು.