ಜಿಲ್ಲಾ ಸುದ್ದಿತಾಜಾ ಸುದ್ದಿ

ಸೆ.೧೬ : ಕಾಗೋಡು ತಿಮ್ಮಪ್ಪನವರ ಅಭಿನಂದನಾ ಸಮರ್ಪಣಾ ಸಮಾರಂಭ

Share Below Link

ಶಿವಮೊಗ್ಗ: ನಾಡು ಕಂಡ ಕಣ್ಮಣಿ ಶತಮಾನದ ಹೋರಾಟ ಗಾರರೂ ಹಿರಿಯ ಸಮಾಜವಾದಿ ಗಳೂ ಆದ ಕಾಗೋಡು ತಿಮ್ಮಪ್ಪ ನವರ ಅಭಿನಂದನಾ ಸಮರ್ಪಣಾ ಸಮಾರಂಭ ಸೆ.೧೬ರಂದು ಬೆಳಿಗ್ಗೆ ೧೦.೩೦ಕ್ಕೆ ಕುವೆಂಪು ರಂಗಮಂದಿರ ದಲ್ಲಿ ಪಕ್ಷಾತೀತವಾಗಿ ಜತ್ಯತೀತ ವಾಗಿ ಹಮ್ಮಿಕೊಳ್ಳಲಾಗಿದೆ ಎಂದು ಕಾಗೋಡು ತಿಮ್ಮಪ್ಪ ಅಭಿ ನಂದನಾ ಸಮಿತಿ ಅಧ್ಯಕ್ಷ ಆರ್.ಕೆ. ಸಿದ್ದರಾಮಣ್ಣ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಕಾಗೋಡು ತಿಮ್ಮಪ್ಪ ಅವರು ಈ ನಾಡು ಕಂಡ ಅಪರೂಪದ ವ್ಯಕ್ತಿ. ಶೋಷಿತರ ಪರವಾಗಿ ಹೋರಾಡಿದವರು. ಗೇಣಿದಾರರ ಪರವಾಗಿ ಬಗರ್‌ಹುಕುಂ ರೈತರ ಪರವಾಗಿ, ಮುಳುಗಡೆ ಸಂತ್ರಸ್ತರ ಪರವಾಗಿ ಹೋರಾಟ ಮಾಡಿದ ಅವರು ಒಂದು ಸಾಮಾಜಿಕ ಕ್ರಾಂತಿ ಯನ್ನೇ ಮಾಡಿದವರು. ದೇವ ರಾಜ ಅರಸುರವರ ಪ್ರತಿರೂಪವೇ ಆಗಿದ್ದ ಅವರಿಗೆ ದೇವರಾಜ ಅರಸು ಪ್ರಶಸ್ತಿ ಬಂದಿದ್ದು ಪ್ರಶಸ್ತಿಗೆ ಗೌರವ ತಂದುಕೊಟ್ಟಂತಾಗಿದೆ ಎಂದರು.
ಇಂತಹ ಮಹಾನ್ ವ್ಯಕ್ತಿಗೆ ಅಭಿನಂದನೆ ಸಮರ್ಪಣೆ ಮಾಡು ವುದು ನಮ್ಮೆಲ್ಲರ ಕರ್ತವ್ಯವೂ ಆಗಿದೆ. ಅಲ್ಲದೆ ಕಾಗೋಡು ತಿಮ್ಮಪ್ಪರನ್ನು ಎಲ್ಲಾ ಪಕ್ಷದ ಮುಖಂಡರು ಎಲ್ಲಾ ಜತಿಯ ಬಾಂಧವರು ಅತ್ಯಂತ ಪ್ರೀತಿಯಿಂದ ಮೆಚ್ಚಿಕೊಳ್ಳುತ್ತಾರೆ. ಈ ಹಿನ್ನೆಲೆ ಯಲ್ಲಿ ಅವರ ಅಭಿನಂದನಾ ಕಾರ್‍ಯ ಕ್ರಮವನ್ನು ಸಂಭ್ರಮ ಸಡಗರ ದಿಂದ ಆಚರಿಸಲಾಗುವುದು ಎಂದರು.
ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ. ಬಿ.ಎಲ್. ಶಂಕರ್ ಅಭಿನಂದನಾ ಭಾಷಣ ಮಾಡು ವರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಹಿರಿಯ ಪತ್ರಕರ್ತ ದಿನೇಶ್ ಅಮೀನ್‌ಮಟ್ಟು ಮುಖ್ಯ ಭಾಷಣ ಮಾಡುವರು. ಸಮಾರಂಭದಲ್ಲಿ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ, ಅಭಿನಂದನಾ ಸಮಿತಿ ಗೌರವಾಧ್ಯಕ್ಷ ಡಾ. ಜಿ.ಡಿ. ನಾರಾಯಣಪ್ಪ, ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು, ಜನಪ್ರತಿನಿಧಿಗಳು ವಿವಿಧ ಪಕ್ಷಗಳ ಜಿಲ್ಲಾಧ್ಯಕ್ಷರು, ಮುಖಂಡರು, ಮೇಯರ್ ಸೇರಿ ಹಲವು ಗಣ್ಯರು ಭಾಗವಹಿಸ ಲಿದ್ದಾರೆ ಎಂದರು.
ಸಮಿತಿಯ ಉಪಾಧ್ಯಕ್ಷ ವಿ. ರಾಜು ಮಾತನಾಡಿ, ಕಾಗೋಡು ತಿಮ್ಮಪ್ಪ ವಿವಿಧ ಇಲಾಖೆಯ ಸಚಿವರಾಗಿ ಅನುಭವ ಹೊಂದಿ ದ್ದಾರೆ. ಅದರಲ್ಲೂ ವಿಧಾನಸಭಾ ಅಧ್ಯಕ್ಷರಾಗಿ ನಾಡು ಮೆಚ್ಚುವಂತಹ ಕೆಲಸ ಮಾಡಿದ್ದಾರೆ. ಇತಿಹಾಸ ಕಂಡ ಅಪರೂಪದ ಸ್ಪೀಕರ್ ಎಂದು ಖ್ಯಾತಿ ಗಳಿಸಿದ್ದಾರೆ. ರೈತರ ಪರ, ಬಡವರ ಪರ ಹೋರಾ ಡುತ್ತಾ ಬಂದವರು. ಇತಿಹಾಸ ಪುರುಷರಾಗಿ ದಾಖಲಾಗಿದ್ದಾರೆ ಎಂದರು.
ಅಭಿನಂದನಾ ಸಮಿತಿಯ ಉಪಾಧ್ಯಕ್ಷ ತೀ.ನ. ಶ್ರೀನಿವಾಸ್ ಮಾತನಾಡಿ, ಭೂಮಾಲೀಕರ ವಿರುದ್ಧ ಹೋರಾಟ ಮಾಡಿದ ತಿಮ್ಮಪ್ಪನವರು ಭೂ ಸುಧಾರಣಾ ಕಾಯ್ದೆಯ ಯಶಸ್ಸಿಗೆ ಕಾರಣರಾ ದವರು ಎಂದರು.
ಪ್ರಮುಖರಾದ ಪಿ. ಪುಟ್ಟಯ್ಯ, ಪ್ರೊ. ಹೆಚ್. ರಾಚಪ್ಪ, ಪಿ.ಆರ್. ಗಿರಿಯಪ್ಪ, ಆರ್.ಟಿ. ನಾಗರಾಜ್, ಎಸ್.ಬಿ. ಅಶೋಕ್‌ಕುಮಾರ್, ಉಮೇಶ್, ಲೋಕೇಶ್, ಸುಮಿತ್ರ ಸೇರಿದಂತೆ ಹಲವರಿದ್ದರು.