ಸೆ. 6: ಮಡಿಕೆ ಚೀಲೂರಿನಲ್ಲಿ ಭಕ್ತಿ ಸಮರ್ಪಣೆ ಕಾರ್ಯಕ್ರಮ …
ಶಿವಮೊಗ್ಗ : ಶ್ರೀ ತರಳಬಾಳು ಜಗದ್ಗುರು ಶ್ರೀ ೧೧೦೮ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿ ಗಳವರ ೩೩ನೇ ಶ್ರದ್ಧಾಂಜಲಿ ಸಮಾರಂಭದ ದಾಸೋಹಕ್ಕೆ ಗ್ರಾಮಾಂತರ ಶ್ರೀ ತರಳಬಾಳು ಸೇವಾ ಸಮಿತಿ ವತಿಯಿಂದ ಸೆ. ೬ರಂದು ಬೆಳಗ್ಗೆ ೧೧ ಗಂಟೆಗೆ ಮಡಿಕೆಚೀಲೂರು ಗ್ರಾಮದಲ್ಲಿ ಅಕ್ಕಿ ಸಮರ್ಪಣೆಯ ಭಕ್ತಿ ಸಮರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಎಸ್.ಹೆಚ್. ಷಣ್ಮುಖಪ್ಪ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

೨೦೦೬ರಿಂದ ಪ್ರತಿ ವರ್ಷವೂ ಶ್ರೀಗಳ ಶ್ರದ್ಧಾಂಜಲಿ ಸಮಾರಂಭದ ದಾಸೋಹಕ್ಕೆ ಅಕ್ಕಿ ನೀಡುತ್ತಾ ಬಂದಿದ್ದೇವೆ. ಈ ಬಾರಿಯೂ ಕೂಡ ಸೆ. ೨೪ರಂದು ಸಿರಿಗೆರೆಯಲ್ಲಿ ನಡೆಯಲಿರುವ ಶ್ರದ್ಧಾಂಜಲಿ ಸಮಾರಂಭದ ದಾಸೋಹಕ್ಕೆ ೧೦೧ ಕ್ವಿಂಟಾಲ್ ಒಂದೇ ಬ್ರ್ಯಾಂಡ್ ನ ಅಕ್ಕಿಯನ್ನು ನೀಡಲಾಗುವುದು. ಈ ಹಿನ್ನೆಲೆ ಯಲ್ಲಿ ಇದರ ಸಮರ್ಪಣಾ ಕಾರ್ಯಕ್ರಮವನ್ನು ಮಡಿಕೆ ಚೀಲೂರಿನಲ್ಲಿ ಆಯೋಜಿಸಲಾ ಗಿದೆ. ಸುಮಾರು ೭೨ ಹಳ್ಳಿಗಳ ಭಕ್ತರು ಪಾಲ್ಗೊಳ್ಳುವರು ಎಂದರು.
ತರಳಬಾಳು ಜಗದ್ಗುರು ಬೃಹನ್ಮಠ ಸಿರಿಗೆರೆಯ ೧೧೦೮ ಡಾ. ಶಿವಾಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿರುವ ಈ ಕಾರ್ಯಕ್ರಮ ದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕಿ ಶಾರದಾ ಪೂರ್ಯಾನಾಯ್ಕ್, ಕೃಷಿ ವಿವಿ ಉಪಕುಲಪತಿ ಜಗದೀಶ್ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಲಿzರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಡಿ.ಎಸ್. ಮಲ್ಲಿಕಾರ್ಜುನಪ್ಪ, ಹೆಚ್.ಬಿ. ನಂದೀಶ್, ಹೆಚ್.ವಿ. ಅರುಣ್, ಬಿ.ಎನ್. ಯೋಗೀಶ್, ಎಸ್. ಮಲ್ಲಿಕಾರ್ಜುನ್, ಕೆ.ಪಿ. ಲೋಹಿತ್, ಅರುಣ್ ಮುಂತಾದವರು ಉಪಸ್ಥಿತರಿದ್ದರು.

