ಜಿಲ್ಲಾ ಸುದ್ದಿತಾಜಾ ಸುದ್ದಿಸಿನಿಮಾ

ಸೆ.೨೨: ಗೋಪಾಳ ದ್ರೌಪದಮ್ಮ ದೇವಳದಲ್ಲಿ ಆಧ್ಯಾತ್ಮ …

Share Below Link

ಶಿಚಮೊಗ್ಗ : ಅನು ಪ್ರೊಡಕ್ಷನ್ಸ್ ಬ್ಯಾನರಡಿ ಎಸ್. ಎಂ. ಪ್ರಜ್ವಲ್ ಶೆಟ್ಟಿ ನಿರ್ಮಿಸು ತ್ತಿರುವ `ಆಧ್ಯಾತ್ಮ’ ಹೆಸರಿನ ಚಿತ್ರದ ಮುಹೂರ್ತ ಕಾರ್ಯಕ್ರಮವು ಸೆ.೨೨ರಂದು ಬೆಳಗ್ಗೆ ೯ ಗಂಟೆಗೆ ಗೋಪಾಳದ ದ್ರೌಪದಮ್ಮ ದೇವ ಸ್ಥಾನದಲ್ಲಿ ನಡೆಯಲಿದೆ ಎಂದು ಚಿತ್ರದ ನಿರ್ದೇಶಕ ಎನ್. ಎಸ್ ರಾಣಾ ಸುದ್ದಿಗೋಷ್ಟಿಯಲ್ಲಿ ತಿಳಿಸಿ ದರು.


ಮೂಲತಃ ಶಿವಮೊಗ್ಗದವರೇ ಆದ ಪ್ರಜ್ವಲ್ ಶೆಟ್ಟಿ , ಅನು ಶೆಟ್ಟಿ ಸೇರಿದಂತೆ ಸಮಾನಮನಸ್ಕರು ಸೇರಿಈಚಿತ್ರ ನಿರ್ಮಾಣ ಮಾಡು ತ್ತಿದ್ದೇವೆ.ಕನ್ನಡದ ಸಿನಿಮಾ ಮಲೆ ನಾಡಿನ ದೃಶ್ಯ ವೈಭವದ ಒಂದೊ ಳ್ಳೆ ಯಚಿತ್ರ ಉಣ ಬಡಿಸುವ ಉದ್ದೇಶ ನಮ್ಮದಾಗಿದೆ ಎಂದ ಅವರು, ಇದೊಂದು ಹಾರರ್ ಕಥಾ ಹಂದರ ದ ಚಿತ್ರ. ಅನೇಕ ಕುತೂಹಲದ ಅಂಶಗಳು ಚಿತ್ರ ದಲ್ಲಿವೆ. ಚಿತ್ರದಲ್ಲಿ ಮುಖ್ಯ ಪಾತ್ರವೇ ಕಥೆಯಾಗಿದೆ. ಅದರ ಸುತ್ತ ಅನೇಕ ಪಾತ್ರಗಳು ಬರುತ್ತತೆ, ಎರಡು ಹಾಡು ಚಿತ್ರದ ಲ್ಲಿದ್ದು, ಮಂದಿಪ್ ಗೌಡ ಸಂಗೀತ ನಿರ್ದೇಶನ ಮಾಡುತ್ತಿzರೆ ಎಂದರು.
ಚಿತ್ರಕ್ಕೆ ಚಿತ್ರಕಥೆ ಬರೆದು, ಪ್ರಮುಖ ಪಾತ್ರದಲ್ಲಿ ಅಭಿನಯಿ ಸುತ್ತಿರುವ ಅನು ಶೆಟ್ಟಿ ಮಾತನಾಡಿ, ಸೆ. ೨೨ ರಂದು ಬೆಳಗ್ಗೆ ೯.೧೧ ಕ್ಕೆ ಗೋಪಾಳದ ದೌಪ್ರದಮ್ಮ ವೃತ್ತದ ದ್ರೌಪದಮ್ಮ ದೇವಸ್ಥಾನ ದಲ್ಲಿ ಮೂಹರ್ತ ಕಾರ್ಯಕ್ರಮ ನಡೆ ಯಲಿದ್ದು, ಮುಖ್ಯ ಅತಿಥಿಗಳಾಗಿ ಜಿ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸೇರಿದಂತೆ ಇನ್ನಿತರ ಪ್ರಮುಖರು ಪಾಲ್ಗೊಳ್ಳಲಿದ್ದಾ ರೆಂದರು.
ಸೆ.೨೨ರಿಂದಲೇ ಚಿತ್ರದ ಚಿತ್ರೀ ಕರಣ ಶುರುವಾಗಲಿದೆ. ಕುಂಸಿ, ಆಯನೂರು, ರಿಪ್ಪನ್ ಪೇಟೆ, ಬಾಳೆ ಹೊನ್ನೂರು, ಶಿವಮೊಗ್ಗ, ಭದ್ರಾವತಿ ರಸ್ತೆಗಳಲ್ಲಿ ಚಿತ್ರೀಕರಣ ನಡೆಯಲಿದೆ. ಶಿವಮೊಗ್ಗದಲ್ಲಿ ಚಿತ್ರದ ನಿರ್ಮಾಣಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ ಎಂದರು.
ನಿರ್ಮಾಪಕ ಎಸ್.ಎಂ. ಪ್ರಜ್ವಲ್ ಶೆಟ್ಟಿ, ಕಲಾವಿದರಾದ ಯಶಸ್ವಿನಿ, ಹರ್ಷಿತಾ, ಸೂರಿ, ದಾನಂ, ಪೊಲೀಸ್ ಚಂದು ಸತೀಶ್, ಚಿರಂಜೀವಿ ಬಾಬು ಮತ್ತಿತರರು ಇದ್ದರು.