ಜಿಲ್ಲಾ ಸುದ್ದಿತಾಜಾ ಸುದ್ದಿ

ಸೆ.೧೫: ಸೌಹಾರ್ದವೇ ಹಬ್ಬ ನಡಿಗೆ ಮತ್ತು ಶಾಂತಿ ಸಭೆ …

Share Below Link

ಶಿವಮೊಗ್ಗ: ಮುಂಬರುವ ಗಣಪತಿ ಮತ್ತು ಈದ್‌ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ ಶಿವಮೊಗ್ಗ ದಲ್ಲಿ ಶಾಂತಿ ಕಾಪಾಡುವ ಹಿನ್ನೆಲೆ ಯಲ್ಲಿ ನಮ್ಮ ನಡಿಗೆ ಶಾಂತಿಯ ಕಡೆಗೆ ಸಮಿತಿ ವತಿಯಿಂದ ಸೆ.೧೫ ರಂದು ಸಂಜೆ ೪ರಿಂದ ೬ ಗಂm ಯವರೆಗೆ ಸಿಮ್ಸ್ ಮೆಡಿಕಲ್ ಕಾಲೇಜಿನಿಂದ ಸೈನ್ಸ್ ಮೈದಾನ ದವರೆಗೆ ಸೌಹಾರ್ದವೇ ಹಬ್ಬ ನಡಿಗೆಯನ್ನು ಮತ್ತು ಶಾಂತಿ ಸಭೆ ಆಯೋಜಿಸಲಾಗಿದೆ ಎಂದು ಸಮಿತಿಯ ಸಂಚಾಲಕ ಕೆ.ಪಿ. ಶ್ರೀಪಾಲ್ ಅವರು ಸುದ್ದಿಗೋಷ್ಟಿ ಯಲ್ಲಿ ಹೇಳಿದರು.
ಗಣಪತಿ ಮತ್ತು ಈದ್ ಮಿಲಾದ್ ಹಬ್ಬಗಳು ಒಟ್ಟೊಟ್ಟಿಗೆ ಬಂದಿವೆ. ಊರಿನ ಎಲ್ಲಾ ಧರ್ಮ ದ ಬಂಧುಗಳು ಈ ಹಬ್ಬಗಳನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸ ಬೇಕಾಗಿದೆ. ಈ ಹಿನ್ನೆಲೆ ಯಲ್ಲಿ ಸೌಹಾರ್ದವೇ ಹಬ್ಬ ಎಂಬ ಹೆಸರಿನಲ್ಲಿ ಈ ನಡಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಮೆಗ್ಗಾನ್ ಆಸ್ಪತ್ರೆಯ ಅಂಗಳದಿಂದ ಸೈನ್ಸ್ ಮೈದಾನದವರೆಗೆ ನಡೆಯುವ ಈ ಹಬ್ಬದಲ್ಲಿ ಸುಮಾರು ೧೦ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದ ಅವರು, ವಿವಿಧ ರಾಜಕೀಯ ಪಕ್ಷಗಳ – ಧಾರ್ಮಿಕ ಮುಖಂಡರು ಪಾಲ್ಗೊಳ್ಳುತ್ತಾರೆ ಎಂದರು.
ರೈತಮುಖಂಡ ಹೆಚ್.ಆರ್. ಬಸವರಾಜಪ್ಪ ಮಾತನಾಡಿ, ಸಂವಿಧಾನದಲ್ಲಿ ಎಲ್ಲಾ ಜತಿ, ಧರ್ಮಗಳು ಒಂದೇ. ಈ ನಾಡಿ ನಲ್ಲಿ ಎಲ್ಲಾ ಧರ್ಮದವರು ಒಟ್ಟಾಗಿ ಬಾಳಬೇಕಾಗಿದೆ. ಶಿವ ಮೊಗ್ಗದಲ್ಲಿ ಶಾಂತಿ ನೆಲೆಸಬೇಕಾ ಗಿದೆ. ನಿರುಮ್ಮಳವಾಗಿ ಎರಡೂ ಧರ್ಮದವರು ಒಂದೇ ದಿನ ಬರು ವ ಹಬ್ಬವನ್ನು ಸೌಹಾರ್ದತೆಯಿಂದ ನಡೆಸಬೇಕಾಗಿದೆ ಎಂದರು.
ಧರ್ಮಗುರು ಅಬ್ದುಲ್ ಲತೀಫ್‌ಸಅದಿ ಮಾತನಾಡಿ, ಈದ್‌ಮಿಲಾದ್ ಗಣಪತಿಹಬ್ಬ ದಲ್ಲಿ ಮೆರವಣಿಗೆಯೇ ಪ್ರದಾನ ವಾಗಿರುತ್ತದೆ. ಈ ಎರಡೂ ಮೆರ ವಣಿಗೆಗಳು ಮಾದರಿಯಾಗಿರಲಿ ಎಂದರು.
ಪ್ರಮುಖರಾದ ಗುರು ಮೂರ್ತಿ, ಫಾ. ಕ್ಲಿಫರ್ಡ್‌ರೋ ಷನ್‌ಪಿಂಟೋ, ಕಿರಣ್‌ಕು ಮಾರ್, ಕೃಷ್ಣಮೂರ್ತಿ, ವಸೀಫ್, ಸುರೇಶ್, ಮಲ್ಲಿಕಾರ್ಜುನ, ಜಗದೀಶ್, ಸಯ್ಯದ್ ಸುಹೇಲ್, ಲಿಯಾಕತ್, ಮಹಮ್ಮದ್ ಹುಸೇನ್ ಸೇರಿದಂತೆ ಹಲವರಿ ದ್ದರು.