ಸೆ.೧೩: ಒಕ್ಕಲಿಗರ ಯುವ ಸಮಾವೇಶ
ಶಿವಮೊಗ್ಗ: ಜಿ ಒಕ್ಕಲಿಗರ ಯುವ ವೇದಿಕೆ ವತಿಯಿಂದ ಸೆ.೧೩ರ ಬೆಳಿಗ್ಗೆ ೧೦ ಗಂಟೆಗೆ ಶ್ರೀ ಆದಿ ಚುಂಚನಗಿರಿ ಸಮುದಾಯ ಭವನದಲ್ಲಿ ಒಕ್ಕಲಿಗರ ಯುವ ಸಮಾವೇಶ ಹಾಗೂ ಡಿಸಿಎಂ ಡಿಕೆ ಶಿ ಅವರಿಗೆ ಅಭಿನಂದನಾ ಸಮಾ ರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಜಿಧ್ಯಕ್ಷ ಕೆ. ಚೇತನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತ ನಾಡಿ, ಸಮಾವೇಶದಲ್ಲಿ ಎಸ್‌ಎಸ್ ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಸಮು ದಾಯದ ಪ್ರತಿಭಾವಂತ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ, ಆರ್ಥಿ ಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಸಾಧಕರಿಗೆ ಸನ್ಮಾನ ಹಾಗೂ ಒಕ್ಕಲಿಗ ಸಮುದಾಯದ ವಿಶೇಷ ಚೇತನರಿಗೆ ವ್ಹೀಲ್ ಚೇರ್, ವಾಕರ್, ವಾಕ್‌ಸ್ಟಿಕ್ ವಿತರಿಸಲಾ ಗುವುದು ಎಂದರು.
ಸಮುದಾಯದ ಸುಮಾರು ೧೨೫ ಪ್ರತಿಭಾವಂತ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು. ಇವರಲ್ಲಿ ಆರ್ಥಿಕವಾಗಿ ಅತ್ಯಂತ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ೫ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುವುದು. ಸಮುದಾ ಯದ ಸುಮಾರು ೩೦ ವಿಶೇಷ ಚೇತನರಿಗೆ ವ್ಹೀಲ್ ಚೇರ್, ವಾಕರ್, ವಾಕ್‌ಸ್ಟಿಕ್ ವಿತರಿಸಲಾ ಗುವುದು ಎಂದರು.
ಸಮಾವೇಶದ ಸಾನಿಧ್ಯವನ್ನು ಜಗದ್ಗುರು ಶ್ರೀ ಡಾ.ನಿರ್ಮಲಾ ನಂದನಾಥ ಮಹಾ ಸ್ವಾಮೀಜಿ, ಶ್ರೀ ಪ್ರಸನ್ನನಾಥ ಸ್ವಾಮೀಜಿ ವಹಿಸ ಲಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸ ಲಿzರೆ. ಮುಖ್ಯ ಅತಿಥಿಯಾಗಿ ಶಾಸಕರಾದ ಆರಗ eನೇಂದ್ರ, ಎಸ್.ಎಲ್. ಭೋಜೇಗೌಡ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತಯ್ಯ, ನಿರ್ದೇಶಕರಾದ ಉಮಾಪತಿ, ಶ್ರೀನಿವಾಸ ಗೌಡ, ಸಿರಿಬೈಲು ಧರ್ಮೇಶ್, ಜಿಧ್ಯಕ್ಷ ಆದಿಮೂರ್ತಿ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಜಿ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್ ಸುಂದರೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಆರ್.ಎಂ. ಮಂಜುನಾಥ ಗೌಡ, ದುಗ್ಗಪ್ಪ ಗೌಡ, ಯೋಗೇಶ್ ಗೌಡ, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಆರ್. ವಿಜಯಕುಮಾರ್, ಜಿ ಕಸಾಪ ಅಧ್ಯಕ್ಷ ಡಿ. ಮಂಜುನಾಥ್, ಉದ್ಯಮಿ ಕಿಮ್ಮನೆ ಜಯರಾಮ್, ಪಾಲಿಕೆ ಸದಸ್ಯರಾದ ಸುವರ್ಣಾ ಶಂಕರ್, ಯಮುನಾ ರಂಗೇಗೌಡ ಹಾಗೂ ಇನ್ನಿತರರು ಭಾಗವಹಿಸಲಿ zರೆ ಎಂದರು.
ಸಮಾವೇಶದಲ್ಲಿ ಸಮುದಾ ಯದ ಬಾಂಧವರು, ಯುವಕ, ಯುವತಿಯರು, ವಿದ್ಯಾರ್ಥಿಗಳು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಬಿ.ಎ. ರಮೇಶ್ ಹೆಗಡೆ, ಉಪಾ ಧ್ಯಕ್ಷ ಗುರುರಾಜ ಗೌಡ, ಪ್ರಧಾನ ಕಾರ್ಯದರ್ಶಿ ರಘುಗೌಡ, ಸಹ ಕಾರ್ಯದರ್ಶಿ ಪ್ರಜ್ವಲ್ ಗೌಡ, ಖಜಂಚಿ ಸುನಿಲ್ ಗೌಡ, ನಿರ್ದೇ ಶಕ ಅರುಣ್ ಗೌಡ, ಹರ್ಷಿತ್ ಗೌಡ ಸೇರಿದಂತೆ ಇದ್ದರು.