ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ಸೆ.೧೩: ಅಮೃತ ಅನ್ನದಾಸೋಹಕ್ಕೆ ಚಾಲನೆ…

Share Below Link

ಶಿವಮೊಗ್ಗ : ಹಸಿದವರ ಹೊಟ್ಟೆ ತುಂಬಿಸುವ ಅಮೃತ ಅನ್ನದಾಸೋಹ ಯೋಜನೆ ಸೆ.೧೩ ರಿಂದ ಆರಂಭಗೊಳ್ಳಲಿದೆ ಎಂದು ಅಮೃತ ಅನ್ನದಾಸೋಹ ಪ್ರತಿಷ್ಠಾನದ ಅಧ್ಯಕ್ಷ ಸತೀಶ್ ಕುಮಾರ್ ಶೆಟ್ಟಿ ಅವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.


ಸೆ.೧೩ರಂದು ಬೆಳಗ್ಗೆ ೧೧.೩೦ ಕ್ಕೆ ಶಿವಮೊಗ್ಗ ನಗರದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಗುವುದು ವಿಧಾನ ಪರಿಷತ್ ಸದಸ್ಯ ಧನಂಜಯ ಸರ್ಜಿ ಕಾರ್ಯಕ್ರಮ ಉದ್ಘಾಟಿಸಲಿದು, ಮೆಗ್ಗಾನ್ ಆಸ್ಪತ್ರೆಯ ವೈದ್ಯಕೀಯ ಅಧಿಕ ಡಾ. ತಿಮ್ಮಪ್ಪ ಹಾಗೂ ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತ್ ಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿzರೆ. ಸಮಾರಂಭದಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ಟಿ.ಆರ್. ಸತ್ಯನಾರಾಯಣ, ಖಜಂಜಿ ಮುರುಳಿ ಉಪಸ್ಥಿತರಿರಲಿzರೆ ಎಂದರು.
ಹಸಿದವರಿಗೆ ಹೊಟ್ಟೆ ತುಂಬಿಸುವ ಯೋಜನೆ ಇದಾಗಿದ್ದು ಮೆಗ್ಗಾನ್ ಆಸ್ಪತ್ರೆಗೆ ಪ್ರತಿನಿತ್ಯ ೧೦,೦೦೦ಕ್ಕೂ ಅಧಿಕ ರೋಗಿಗಳು ಹಾಗೂ ಅವರ ಅವಲಂಬಿತರು ಬರುತ್ತಾರೆ ಆಸ್ಪತ್ರೆಯಲ್ಲಿ ಒಳ ರೋಗಿಗಳಾಗಿ ಚಿಕಿತ್ಸೆ ಪಡೆಯುವ ವರಿಗೆ ಆಸ್ಪತ್ರೆಯಿಂದಲೇ ಊಟ ಉಪಹಾರವನ್ನು ನೀಡಲಾಗುತ್ತಿದೆ. ಹೊರರೋಗಿಗಳಾಗಿ ಬರುವವರಿಗೆ ಇದರ ಅವಶ್ಯಕತೆ ಇದ್ದು, ಈ ಹಿನ್ನೆಲೆ ಯಲ್ಲಿ ಉಚಿತ ಅನ್ನದಾಸೋಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಆರಂಭಿಕ ಹಂತವಾಗಿ ಬುಧವಾರ ಮತ್ತು ಶುಕ್ರವಾರ ವಾರದಲ್ಲಿ ಎರಡು ದಿನಗಳ ೨೦೦ ರಿಂದ ೨೫೦ ಜನರಿಗೆ ಈ ದಾಸೋಹ ಏರ್ಪಡಿಸಲಾಗುವುದು. ತದನಂತರದಲ್ಲಿ ಈ ಸಂಖ್ಯೆಯನ್ನು ಹಾಗೂ ದಿನಗಳನ್ನು ಹೆಚ್ಚಿಸಲಾಗು ವುದು ಎಂದು ಹೇಳಿದರು.
ಒಂದು ದಿನಕ್ಕೆ ೫೦೦೦ ರೂ.ಗಳ ವೆಚ್ಚ ತಗಲಿದೆ ದಾನಿಗಳ ನೆರವೆನಿಂದ ಈ ಕಾರ್ಯವನ್ನ ಹಮ್ಮಿ ಕೊಳ್ಳಲಾಗಿದೆ. ಬೆಂಗಳೂರಿನಂತಹ ಮಹಾನಗರದಲ್ಲಿ ಇದರ ಬಗ್ಗೆ ಅಧ್ಯಯನ ನಡೆಸಿ ಇಲ್ಲಿ ಇದನ್ನು ಅನುಷ್ಠಾನಗೊಳಿಸಲು ಯೋಜನೆ ರೂಪಿಸಲಾಗಿದೆ ಹಲವರು ಇದಕ್ಕೆ ಈಗಾಗಲೇ ಕೈಜೋಡಿಸಿzರೆ ಆಸಕ್ತಿ ಇರುವವರು ನಮ್ಮ ಕಾರ್ಯಕ್ಕೆ ಬೆಂಬಲ ಸೂಚಿಸಬಹುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಪ್ರಭಾಕರ್, ದಿನೇಶ್, ನೇತ್ರಾವತಿ, ಕಲ್ಯಾಣ ಇನ್ನಿತರರಿದ್ದರು.

Leave a Reply

Your email address will not be published. Required fields are marked *