ಸೆ.೧೦: ಜಮೀನಿನ ಪಹಣಿ ರದ್ದು ವಿರೋಧಿಸಿ ಸತ್ಯಾಗ್ರಹ
ಶಿವಮೊಗ್ಗ(ಹೊಸನಾವಿಕ): ಭದ್ರಾವತಿ ತಾಲ್ಲೂಕು ಹೊಳೆಹೊನ್ನೂರು ಹೋಬಳಿಯ ಯಡೆಹಳ್ಳಿ ಸರ್ವೆ ನಂ. ೬೬ರಲ್ಲಿ ೩೪ ಕುಟುಂಬದವರಿಗೆ ತಲಾ ಎರಡು ಎಕರೆಯಂತೆ ಮಂಜೂರಾದ ಜಮೀನಿನ ಪಹಣಿಯನ್ನು ರದ್ದು ಮಾಡಿರುವುದನ್ನು ವಿರೋಧಿಸಿ ಸೆ.೧೦ರಂದು ಸೊರಬ ತಾಲ್ಲೂಕಿನ ಬಂಗಾರಪ್ಪನವರ ಸಮಾಧಿ ಸ್ಥಳದ ಮುಂದೆ ಸತ್ಯಾಗ್ರಹ ನಡೆಸಲಾ ಗುವುದು ಎಂದು ಮಾನವ ಹಕ್ಕು ಗಳ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಎನ್.ರಾಜು ಹೇಳಿದರು.
ಅವರು ಇಂದು ಸುದ್ಧಿಗೋಷ್ಠಿ ಯಲ್ಲಿ ಮಾತನಾಡಿ, ಯಡೆ ಹಳ್ಳಿಯ ರೈತರ ಜಮೀನಿನ ಪಹ ಣಿಯನ್ನು ರದ್ದುಮಾಡಿರುವುದನ್ನು ವಿರೋಧಿಸಿ ಈಗಾಗಲೇ ಹಲವು ಬಾರಿ ಹೋರಾಟ ಮಾಡಲಾಗಿದೆ. ಜಿ ಉಸ್ತುವಾರಿ ಸಚಿವರಿಗೂ ಮನವಿ ನೀಡಲಾಗಿದೆ. ಆದರೆ ಅವರು ನಮ್ಮ ಸಮಸ್ಯೆಯನ್ನು ಪರಿಗಣಿಸಿಲ್ಲ ಎಂದು ದೂರಿದರು.
ಕಾಗೂಡು ತಿಮ್ಮಪ್ಪನವರು ನಮ್ಮ ಹೋರಾಟವನ್ನು ಬೆಂಬಲಿಸಿ ರೈತರ ಜಮೀನಿಗೆ ಪಹಣಿ ರದ್ದು ಮಾಡಬೇಡಿ ಎಂದು ಮುಖ್ಯ ಮಂತ್ರಿಗಳಿಗೆ ಪತ್ರ ಬರೆದಿದ್ದರು. ಆದರೂ ಕೂಡ ಸರ್ಕಾರ ಈ ಬಗ್ಗೆ ಗಮನಹರಿಸಿಲ್ಲ. ಆದ್ದರಿಂದ ಸೆ.೧೦ರಂದು ಸಾಗರದಲ್ಲಿರುವ ಕಾಗೋಡು ತಿಮ್ಮಪ್ಪನವರ ನಿವಾಸಕ್ಕೆ ಭೇಟಿ ನೀಡಿ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸಿ ರೈತರ ಸಮಸ್ಯೆಯನ್ನು ಅವರ ಗಮನಕ್ಕೆ ತರುತ್ತೇವೆ. ನಂತರ ಸೊರಬ ತಾಲ್ಲೂಕಿಗೆ ತೆರಳಿ ಬಂಗಾರಪ್ಪ ನವರ ಸಮಾದಿ ಸ್ಥಳದಲ್ಲಿ ನಮ್ಮ ಹೋರಾಟವನ್ನು ಮುಂದುವರೆ ಸುತ್ತೇವೆ ಎಂದರು.
ಅ.೨೬ರಂದು ಎ ಸರ್ಕಾರಿ ಕಚೇರಿ ಮತ್ತು ಶಾಲಾ ಕಾಲೇಜು ಗಳಲ್ಲಿ ಮುಖ್ಯಮಂತ್ರಿಯಾಗಿದ್ದ ದಿ.ಎಸ್.ಬಂಗಾರಪ್ಪನವರ ಜನ್ಮ ದಿನಾಚರಣೆಯನ್ನು ಆಚರಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳ ಬೇಕು ಎಂದು ಒತ್ತಾಯಿಸಿದರು.
ಮಾನವ ಹಕ್ಕುಗಳ ಹೋ ರಾಟ ಸಮಿತಿಯ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ಮಲೆ ನಾಡು ರೈತ ಹೋರಾಟ ಸಮಿತಿ ಯ ಸಂಚಾಲಕ ತಿ.ನಾ. ಶ್ರೀನಿ ವಾಸ್ ತಿಳಿಸಿದರು.
ಗೋಷ್ಠಿಯಲ್ಲಿ ಪ್ರಮುಖ ರಾದ ಎಂ.ಬಿ.ಕೃಷ್ಣಪ್ಪ, ವೀರೇಶ್, ಸಂಗಮ್ಮ, ಲಲಿತಮ್ಮ, ಸುವರ್ಣಮ್ಮ. ಮುಂತಾದವರು ಉಪಸ್ಥಿತರಿದ್ದರು.