ಸೆ.೧: ರಾಜ್ಯಮಟ್ಟದ ಕಬಡ್ಡಿ ಟೂರ್ನಿ…
ಶಿಕಾರಿಪುರ : ೫೦ನೇ ವರ್ಷದ ಗಣೇಶೋತ್ಸವದ ನಿಮಿತ್ತ ಸೆ.೧ರಂದು ಬಳೂರು ಗ್ರಾಮದ ಶ್ರೀ ಸೇವಾಲಾಲ್ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಯುವಕರ ಕಬಡ್ಡಿ ಪಂದ್ಯಾವಳಿ ಹಾಗೂ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿ ಸಲಾಗಿದೆ ಎಂದು ಗಣೇಶೋತ್ಸವ ಸಮಿತಿ ಅಧ್ಯಕ್ಷ ಹಾಗೂ ತಾ.ಪಂ ಮಾಜಿ ಸದಸ್ಯ ಬಿ.ಕೆ ಲಕ್ಷ್ಮಣನಾಯ್ಕ ಇಚ್ಚಾನಾಯ್ಕ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಶ್ರೀ ವಿನಾಯಕ ಸೇವಾ ಸಮಿತಿ (ರಿ) ಬಳೂರು, ಜಿ ಆರೋಗ್ಯ ಇಲಾಖೆ, ಸಾರ್ವಜನಿಕ ಆಸ್ಪತ್ರೆ ಶಿಕಾರಿಪುರ, ಪ್ರಾಥಮಿಕ ಆರೋಗ್ಯ ಕೇಂದ್ರ ಕಾಗಿನಲ್ಲಿ, ಗ್ರಾಪಂ ಜಕ್ಕಿನಕೊಪ್ಪ ಇವರ ಸಹಕಾರದಲ್ಲಿ ೫೦ನೇ ವರ್ಷದ ಗಣೇಶೋತ್ಸವದ ಅಂಗವಾಗಿ ದಿ. ಮೈತ್ರಾದೇವಿ ಅವರ ಸ್ಮರಣಾರ್ಥ ರಾಜ್ಯ ಮಟ್ಟದ ಯುವಕರ ಕಬಡ್ಡಿ ಪಂದ್ಯಾವಳಿ ಹಾಗೂ ಬೃಹತ್ ಆರೋಗ್ಯ ತಪಾ ಸಣಾ ಶಿಬಿರವನ್ನು ಗ್ರಾಮದ ಶ್ರೀ ಸೇವಾಲಾಲ್ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದು ಸತತ ೨ ದಿನ ನಡೆಯುವ ಕಬಡ್ಡಿ ಟೂರ್ನಿ ಜತೆಯಲ್ಲಿ ಸಾರ್ವಜನಿಕರಿಗೆ ಬೃಹತ್ ಉಚಿತ ಆರೋಗ್ಯ ತಪಾ ಸಣಾ ಶಿಬಿರವನ್ನು ಸಹ ಆಯೋಜಿ ಸಲಾಗಿದೆ ಎಂದು ತಿಳಿಸಿದರು.
ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ಪ್ರಥಮ ಬಹುಮಾನ ರೂ.೨೫,೦೦೦, ದ್ವೀತಿಯ ರೂ. ೨೦,೦೦೦, ತೃತೀಯ ರೂ. ೧೫,೦೦೦ ನಗದು ಬಹುಮಾನ ನೀಡಲಾಗುವುದು. ಸಾಲೂರಿನ ಮರಿಯಮ್ಮ ಮಹಾಮಠದ ಶ್ರೀ ಶ್ರೀ ಸೇನಾ ಭಗತ್ ಮಹಾ ರಾಜ್ ಸಾನಿಧ್ಯ ವಹಿಸಲಿದ್ದು, ಕ್ರೀಡಾ ಕೂಟಕ್ಕೆ ಸಂಸದ ರಾಘವೇಂದ್ರ ಚಾಲನೆ ನೀಡಲಿzರೆ.
ಆರೋಗ್ಯ ತಪಾಸಣ ಶಿಬಿರ ವನ್ನು ಶಾಸಕ ಬಿ.ವೈ ವಿಜಯೇಂದ್ರ ಉದ್ಘಾಟಿಸಲಿದ್ದು ವಿಶೇಷ ಆಹ್ವಾನಿತ ರಾಗಿ ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್ ಗುರುಮೂರ್ತಿ ಗ್ರಾಮದ ಮುಖಂಡರು ಪ್ರತಿನಿಧಿಗಳು ಸಾಕ್ಷೀಕರಿಸಲಿ zರೆ ಎಂದು ತಿಳಿಸಿದರು.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಳ್ಳುವ ಜತೆಗೆ ಕಬಡ್ಡಿ ಪಂದ್ಯಾವಳಿಯಲ್ಲಿ ಹೆಚ್ಚು ತಂಡ ಪಾಲ್ಗೊಂಡು ಗ್ರಾಮೀಣ ಕ್ರೀಡೆ ನಶಿಸದಂತೆ ಮುಂದಿನ ಪೀಳಿಗೆಗೆ ತಲುಪಿಸಲು ಕಾಳಜಿ ಪ್ರದರ್ಶಿಸುವಂತೆ ಅವರು ಮನವಿ ಮಾಡಿದ ಅವರು ಹೆಚ್ಚಿನ ಮಾಹಿತಿಗಾಗಿ ಮೊ.೯೧೧೩೦೪೬೩ ೧೮ ಕ್ಕೆ ಸಂಪರ್ಕಿಸುವಂತೆ ತಿಳಿಸಿದರು.
ಗೋಷ್ಠಿಯಲ್ಲಿ ಬಂಜರ ನೌಕರರ ಒಕ್ಕೂಟದ ಮಾಜಿ ಅಧ್ಯಕ್ಷ ನಾಗರಾಜ್ ನಾಯ್ಕ,ವಿಜಯೇಂದ್ರ ಎನ್,ಮಂಜನಾಯ್ಕ, ಡಿ, ರವಿ ಕುಮಾರ್ ಆರ್,ಸಂತೋಷ್ ಎಸ್,ಮಂಜುನಾಥ್ ಆರ್. ಮಂಜ ನಾಯ್ಕ ಕೆ, ವಿಶ್ವನಾಥ್ ಬಿ.ಎಲ್, ರವಿಕುಮಾರ್ ಕೆ, ಪ್ರಕಾಶ್ ಹೆಚ್, ಪೋಮ್ಯಾನಾಯ್ಕ ವಿ ಮತ್ತಿತರರು ಹಾಜರಿದ್ದರು.


