ಎನ್‌ಎಸ್‌ಎಸ್ ಶಿಬಿರದಲ್ಲಿ ಹಿರಿಯ ದಂಪತಿಗಳಿಗೆ ಸನ್ಮಾನ
ಶಿವಮೊಗ್ಗ: ಆಚಾರ್‍ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ವತಿಯಿಂದ ಇತ್ತೀಚೆಗೆ ಸೋಮಿನಕೊಪ್ಪದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಊರಿನ ಹಿರಿಯ ದಂಪತಿಗಳನ್ನು ಸನ್ಮಾನಿಸಲಾಯಿತು.
ಶಿಬಿರದಲ್ಲಿ ಗ್ರಾಮದ ಪ್ರಮುಖರು ಎನ್‌ಎಸ್‌ಎಸ್ ವಿದ್ಯಾರ್ಥಿಗಳು, ಅಧಿಕಾರಿಗಳು, ವಿವಿಧ ಕಾಲೇಜುಗಳ ಅಧ್ಯಾಪಕರು ಭಾಗವಹಿಸಿದ್ದರು.
ವ್ಯಕ್ತಿತ್ವ ವಿಕಸನ, ಮಾಹಿತಿ ಕಾರ್ಯಕ್ರಮ, ರಂಗಭೂಮಿ ತರಬೇತಿ, ಸ್ವಚ್ಛತೆ, ಸೇವೆ, ಸಾಂಸ್ಕತಿಕ ಕಾರ್ಯಕ್ರಮಗಳು ನಡೆದವು. ಯುವ ಜನರಲ್ಲಿ ಉದ್ಯಮ ಶೀಲತೆ ಬಗ್ಗೆ ಮಾಹಿತಿ ಶ್ರಮದಾನ ಸ್ವಚ್ಛತೆ, ಆರೋಗ್ಯ ತಪಾಸಣೆಗಳು ಕೂಡ ನಡೆದವು.
೭ದಿನಗಳ ಕಾಲ ಹಮ್ಮಿಕೊಂಡಿದ್ದ ಈ ಶಿಬಿರದ ಕೊನೆಯ ದಿನದಲ್ಲಿ ವಿಶೇಷವಾಗಿ ಹಿರಿಯ ದಂಪತಿಗಳನ್ನು ಸನ್ಮಾನಿಸಲಾಯಿತು.
ಎನ್‌ಎಸ್‌ಎಸ್ ಅಧಿಕಾರಿ ಗಳಾದ ಪ್ರೊ| ಕೆ.ಎಂ.ನಾಗರಾಜ್, ಪ್ರೊ|ಎಸ್.ಜಗದೀಶ್, ಪ್ರೊ| ಎನ್.ಮಂಜುನಾಥ್, ಪ್ರಾಂಶುಪಾಲೆ ಪ್ರೊ| ಮಮತಾ ಪಿ.ಆರ್., ಹಾಗೂ ಆಡಳಿತ ಮಂಡಳಿ ಅಧ್ಯಾಪಕ ವರ್ಗ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.