ಇತರೆಉದ್ಯೋಗಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ವಿಐಎಸ್‌ಎಲ್ ಕಾರ್ಖಾನೆಯ ಉತ್ಪನ್ನಗಳನ್ನು ಸ್ಕ್ರ್ಯಾಪ್ ಲೆಕ್ಕದಲ್ಲಿ ಮಾರಾಟಯತ್ನ; ಗುತ್ತಿಗೆ ಕಾರ್ಮಿಕರ ಆಕ್ರೋಶ

Share Below Link

ಭದ್ರಾವತಿ: ರಾಜ್ಯದ ಪ್ರತಿಷ್ಟಿತ ಉಕ್ಕಿನ ಕಾರ್ಖಾನೆಯಾದ ನಗರದ ವಿಐಎಸ್‌ಎಲ್ ಕಾರ್ಖಾನೆಗೆ ಅಗತ್ಯವಾದ ಬಂಡವಾಳ ಹೂಡದೆ, ಅಭಿವೃದ್ಧಿ ಕಾರ್ಯಗಳನ್ನು ಮಾಡದ ಪ್ರಯುಕ್ತ ಹಲವಾರು ಎಡರು ತೊಡರುಗಳನ್ನು ಎದುರಿಸುತ್ತಿದೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಈಗ ಇಂಗಾಟ್ ಹಾಗು ಮಿಲೆಟ್ಸ್‌ಗಳನ್ನು ಅತ್ಯಂತ ಕಡಿಮೆ ದರಕ್ಕೆ ಸ್ಕ್ಯ್ರಾಪ್ ಲೆಕ್ಕದಲ್ಲಿ ಮಾರಾಟ ಮಾಡುವ ಮೂಲಕ ಕಾರ್ಖಾನೆ ಅಂತಿಮ ಮೊಳೆ ಹೊಡೆದು ಕಾರ್ಖಾನೆ ಮುಚ್ಚುವ ಪ್ರಕ್ರಿಯೆಗೆ ಅಡಿ ಪಾಯ ಹಾಕುತ್ತಿzರೆ ಎಂದು ಕಾರ್ಮಿಕರು ಗಳು ಆಕ್ರೋಶ ವ್ಯಕ್ತಪಡಿಸುತ್ತಿzರೆ.


ಈ ಮಾಹಿತಿ ಅನ್ವಯ ಪತ್ರಿಕೆ ಕಾರ್ಮಿಕರನ್ನು ಸಂಪರ್ಕಿಸಿದಾಗ ಕಾದ ಕಬ್ಬಿಣದಿಂದ ಫರ್ನೆಸ್‌ನಲ್ಲಿ ಇಂಗಾಟನ್ನು ಪ್ರೈಮರಿ ಮಿಲ್‌ನಲ್ಲಿ ತಯಾರು ಮಾಡಲಾಗುತ್ತದೆ. ಇದನ್ನು ಕಾರ್ಖಾನೆಯ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಅವರುಗಳಿಗೆ ಯಾವ ಆಕಾರದಲ್ಲಿ ಬೇಕೋ ಆ ಆಕಾರದಲ್ಲಿ ಬಾರ್ ಮಿಲ್‌ನಲ್ಲಿ ರೌಂಡ್, ಸ್ಕ್ವಯರ್, ಸೈಡ್ಸ್ ರೂಪದಲ್ಲಿ ಮಾರ್ಪಾಟು ಮಾಡಿ ಗ್ರಾಹಕರುಗಳಿಗೆ ಮಾರಾಟ ಮಾಡಲಾಗುತ್ತದೆ. ಆದರೆ ಈ ವಸ್ತುಗಳನ್ನು ಕಾರ್ಖಾನೆಯ ಆಡಳಿತ ಮಂಡಳಿಯ ಕೆಲ ಅಧಿಕಾರಿಗಳು ಉತ್ತಮ ಗುಣಮಟ್ಟದ ಬೆಲೆ ಬಾಳುವ ಇವುಗಳನ್ನು ಸ್ಕ್ರ್ಯಾಪ್ ಲೆಕ್ಕದಲ್ಲಿ ಅನುಪಯುಕ್ತ ವಸ್ತುಗಳೆಂದು ಮಾರಾಟ ಮಾಡಲು ಸಿದ್ದತೆ ನಡೆಸಿದ್ದರು. ಈ ಮಾಹಿತಿ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರು ಗಳಿಗೆ ತಿಳಿದ ಕಾರಣ ಸ್ಥಳಕ್ಕಾಗಮಿಸಿ ಮಳೆಯ ತಡೆದು ತ್ರೀವ ಪ್ರತಿಭಟನೆ ಮಾಡಿ ಮಾರಾಟ ಮಾಡದಂತೆ ತಡೆ ಹಿಡಿದರು.
ಸ್ಥಳಕ್ಕೆ ಆಗಮಿಸಿದ ಕಾರ್ಖಾ ನೆಯ ಇಡಿ ಅವರು ಸ್ಥಳ ಪರಿಶೀ ಲನೆ ಮಾಡಿ ವಸ್ತುಗಳನ್ನು ಪರಿಕ್ಷಿಸಿ ಅವುಗಳು ಉತ್ತಮ ಗುಣಮಟ್ಟದ ಕಬ್ಬಿಣದ ವಸ್ತುಗಳಾಗಿದೆ. ಅದನ್ನು ಅನುಪಯುಕ್ತ ವಸ್ತುಗಳ ಲೆಕ್ಕದಲ್ಲಿ ಮಾರಾಟ ಮಾಡುವುದಿಲ್ಲ ಎಂದು ಭರವಸೆ ನೀಡಿದ ನಂತರ ಕಾರ್ಮಿ ಕರು ತಮ್ಮ ಪ್ರತಿಭಟನೆಯನ್ನು ಹಿಂಪಡೆದರು.
ಈ ಘಟನೆ ಕುರಿತು ಸಂಸದ ಬಿವೈಆರ್‌ರನ್ನು ದೂರವಾಣಿ ಮೂಲಕ ಸಂಪ ರ್ಕಿಸಿದ ಕಾರ್ಮಿಕ ನಾಯಕರು ಹಾಗು ಮುಖಂಡರುಗಳು ಕಾರ್ಖಾನೆಯಲ್ಲಿ ನಡೆಯುತ್ತಿರುವ ಘಟನೆಯನ್ನು ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು ದೆಹಲಿ ಮಟ್ಟದಲ್ಲಿ ಕಾರ್ಖಾನೆ ಅಭಿವೃದ್ಧಿ ಹಾಗು ಬಂಡವಾಳ ಹೂಡುವ ಬಗ್ಗೆ ತಾವು ಪ್ರಯತ್ನ ಮಾಡುತ್ತಿದ್ದು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿ ದ್ದರೆ, ಇಲ್ಲಿ ಈ ರೀತಿ ನಡೆಯುತ್ತೀ ರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ ಈಗೆ ಕೆಲ ದಿನಗಳ ಹಿಂದೆ ಶಾಸಕ ಸಂಗಮೇಶ್ವರ ರವರು ಕಾರ್ಖಾನೆಗೆ ಭೇಟಿ ನೀಡಿ ಆಡಳಿತ ಮಂಡಳಿಯ ಹಿರಿಯ ಅಧಿಕಾರಿ ಗಳೊಂದಿಗೆ ಕಾರ್ಖನೆ ಉತ್ಪಾದನೆ ಯ ಬಗ್ಗೆ ಚರ್ಚಿಸಿ ಕಾರ್ಖಾನೆ ಯಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸದೆ ನಿರಂತರವಾಗಿ ಉತ್ಪಾದನೆ ಮಾಡಬೇಕು. ಗುತ್ತಿಗೆ ಕಾರ್ಮಿಕರಿಗೆ ತೊಂದರೆ ಆಗದಂತೆ ಅವರುಗಳ ಹಿತಾಸಕ್ತಿ ಕಾಪಾಡ ಬೇಕು ಎಂದು ಸೂಚಿಸಿದ್ದರು.
ಆದರೆ ಕಾರ್ಖಾನೆಯ ಆಡಳಿತ ಮಂಡಳಿ ಈ ಬಗ್ಗೆ ತಮ್ಮ ಆಸಾ ಯಕತೆ ವ್ಯಕ್ತಪಡಿಸಿ, ಮೇಲಾಧಿಕಾರಿಗಳು ಈಗಾಗಲೆ ಕಾರ್ಖಾನೆ ಯಲ್ಲಿ ಉತ್ಪಾದನೆಯನ್ನು ಸ್ಥಗಿತ ಗೊಳಿಬೇಕು ಎಂದು ಆದೇಶಿಸಿ zರೆ.
ಇದರ ಜೊತೆಗೆ ಕಚ್ಚಾ ಸಾಮಗ್ರಿಗಳು ಸಹ ಪೂರೈಕೆ ಸಹ ಸರಬರಾಜಗದೆ ಸ್ಥಗಿತ ಗೊಂಡಿದೆ. ಈ ಎ ಹಿನ್ನಲೆಯಲ್ಲಿ ಕಾರ್ಖಾನೆಯಲ್ಲಿ ಉತ್ಪಾದನೆ ಮುಂದುವರೆಸಲು ಸಾಧ್ಯವಿಲ್ಲ ಎಂದು ತಿಳಿಸಿzರೆ ಎಂದು ತಿಳಿದುಬಂದಿದೆ.