ಜಿಲ್ಲಾ ಸುದ್ದಿತಾಜಾ ಸುದ್ದಿ

ಸ್ವಾರ್ಥ – ಸ್ವಹಿತಾಸಕ್ತಿಯೇ ಸಮಸ್ಯೆಯ ಮೂಲ: ಡಾ| ಗೋರುಚ

Share Below Link

ಭದ್ರಾವತಿ: ಮಹಿಳೆಯರಿಗೆ ಸಮಸ್ಯೆ ಎಂಬುದು ಹೊಸದಲ್ಲ. ಬೆಂಕಿ ಇರುವಲ್ಲಿ ಬಿಸಿ, ಮಂಜು ಇರುವಲ್ಲಿ ತಂಪು ಇರಲೇಬೇಕು. ಅದರಂತೆ ಹೆಣ್ಣು ಎಂದ ಮೇಲೆ ಸಮಸ್ಯೆಗಳು ಇದ್ದೇ ಇರುತ್ತದೆ. ಇದಕ್ಕೆ ಸ್ವ ಹಿತಾಸಕ್ತಿ, ಸ್ವಾರ್ಥತೆ, ಪಟ್ಟಭದ್ರ ಹಿತಾಸಕ್ತಿ ಸೇರಿದಂತೆ ಇತರ ಸಂಗತಿಗಳು ಕಾರಣ ಎಂದು , ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನ ಗೌರವ ಸಲಹೆಗಾರ ರಾದ ನಾಡೋಜ ಡಾ.ಗೊ.ರು. ಚನ್ನಬಸಪ್ಪ ಅಭಿಪ್ರಾಯಿಸಿದರು.
ನಗರದ ಶರಣ ಸಾಹಿತ್ಯ ಪರಿಷತ್ ಬಂಟರ ಸಂಘದ ಸಹಕಾರದೊಂದಿಗೆ ದತ್ತಿ ದಾನಿ ಶ್ರೀ ಎಂ. ವಿರುಪಾಕ್ಷಪ್ಪ ಮತ್ತು ಕುಟುಂಬದವರು ಜನ್ನಾಪುರದ ನ್ಯೂಟೌನ್ ಪೊಲೀಸ್ ಠಾಣೆ ಎದುರು ಇರುವ ಬಂಟರ ಭವನ ದಲ್ಲಿ ಏರ್ಪಡಿಸಿದ್ದ ಲಿಂ.ಲಕ್ಕಮ್ಮ ಮತ್ತು ಮಂಜಪ್ಪ ಸಂಸ್ಕರಣ ದತ್ತಿ ಹಾಗು ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಿಳೆಯರ ಸಮಸ್ಯೆಗಳ ಬಗ್ಗೆ ಉಪನ್ಯಾಸ ನೀಡಿ ಸಂವಾದ ನಡೆಸಿದರು.
ಮಹಿಳೆಗೆ ಅನ್ಯಾಯ ಸಮಸ್ಯೆ ಗಳು ಉಂಟಾದಾಗ ಅಸಮಾಧಾನ, ಕೋಪ, ಪರಿಸ್ಥಿತಿ ಕಾರಣ ಅವುಗಳನ್ನು ವಿರೋಧಿಸಿ ಸೇಡು ತೀರಿಸಿಕೊಳ್ಳುತ್ತಾಳೆ. ಆದರೆ ಈಕೆ ತಾನೆ ಹೆಣೆದುಕೊಂಡ ಬಲೆಯಲ್ಲಿ ಸಿಕ್ಕಿಹಾಕಿಕೊಂಡು ಒzಡುತ್ತಿzಳೆ. ಅದರಿಂದ ಹೊರ ಬರುವ ದಾರಿ ಯನ್ನು ಅಕೆನೆ ಹುಡುಕಿಕೊಳ್ಳಬೇಕು ಎಂದರು.
ಇಂದು ಮಹಿಳೆಗೆ ಸಮಸ್ಯೆ ಎಂಬುದು ಆಯಾಯ ಪರಿಸರ ವಾತಾವರಣಗಳ ಅಕೆಯ ಸಮಸ್ಯೆ ಏನು ಎಂಬುದು ವ್ಯಕ್ತವಾಗುತ್ತದೆ. ನಗರ, ಗ್ರಾಮೀಣ, ಅಕ್ಷರಸ್ಥೆ ಅನಕ್ಷರಸ್ಥೆ, ಉದ್ಯೋಗಿ ನಿರು ದ್ಯೋಗಿ, ಬಡವ ಶ್ರೀಮಂತರು, ಸಂತಾನ ಇಲ್ಲದ ಸಂತಾನ ಹೊಂದಿದ, ಒಂಟಿ ಹೆಣು ಕೌಟುಂಬಿಕ ವಾತಾವರಣದಲ್ಲಿ ರುವ, ಸರ್ಕಾರಿ ನೌಕರಿ ಖಾಸಗಿ ನೌಕರಿ, ಜತಿ ಧರ್ಮಗಳ ಹೆಣ್ಣು ಹೀಗೆ ವಿವಿಧ ಮಹಿಳೆಯರ ಅನುಭವವವೇ ಬೇರೆ ಬೇರೆ ಆಗಿರುತ್ತದೆ ಎಂದು ವಿಶ್ಲೇಷಿಸಿದರು.
ವಿeನಿಗಳು ಸಮಾಜದಲ್ಲಿ ಮಹಿಳೆಯರ ಸಮಸ್ಯೆಗಳನ್ನು ನಾಲ್ಕು ವಿಧಗಳಾಗಿ ವಿಂಗಡಿಸಿzರೆ. ಪ್ರಾಕೃತಿಕ ಅಥವ ನೈಸರ್ಗೀಕ, ಕೌಟುಂಬಿಕ, ಸಾಮಾಜಿಕ, ಆರ್ಥಿಕ ಸಮಸ್ಯಗಳನ್ನು ಎದುರಿಸುತ್ತಿzಳೆ. ಕೆಲವು ಬಾಹ್ಯ ಆದರೆ ಇನ್ನು ಕೆಲವು ಆಂತರೀಕ ಸಮಸ್ಯೆಗಳಾಗಿವೆ. ಇವುಗಳನ್ನು ಅಕೆನೇ ಬಗೆಹರಿಸಿಕೊಳ್ಳಬೇಕು ಎಂದರು.
ಬಂಟರ ಸಂಘದ ಅಧ್ಯಕ್ಷ ಹಾಗು ಲಯನ್ಸ್ ಕ್ಲಬ್ ಮಾಜಿ ರಾಜ್ಯಪಾಲ ಬಿ.ದಿವಾಕರ ಶೆಟ್ಟಿ ಕಾರ್ಯಕ್ರವನ್ನು ಉದ್ಘಾಟಿಸಿದರು. ಎನ್.ಎಸ್.ಮಲ್ಲಿಕಾರ್ಜುನ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಶೃತಿ ವಸಂತ ಕುಮಾರ್, ಹೆಚ್.ಎನ್.ಮಹಾರುದ್ರ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದರು. ದತ್ತಿ ದಾನಿ ಹಾಗು ರಾಮ್ಕೋಸ್ ಮುಖ್ಯ ಆಡಳಿತಾಧಿಕಾರಿ ಎಂ.ವಿರುಪಾಕ್ಷಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕದಳಿ ವೇದಿಕೆ ಸದಸ್ಯರುಗಳಿಂದ ವಚನ ಗಾಯನ ನಡೆಯಿತು. ವಿ.ರಾಜಶೇಖರಪ್ಪ ಸ್ವಾಗತಿಸಿದರು. ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ. ಧನಂಜಯ ಪ್ರಸ್ತಾವಿಕ ಭಾಷಣ ಮಾಡಿದರು.ಅರಳೆಹಳ್ಳಿ ಅಣ್ಣಪ್ಪ ಅಥಿತಿಗಳ ಪರಿಚಯ ಮಾಡಿದರು. ನಂದಿನಿ ಮಲ್ಲಿಕಾರ್ಜುನ್ ಕಾರ್ಯಕ್ರಮ ನಿರೂಪಿಸಿದರು. ಕತ್ತಲಗೆರೆ ತಿಮ್ಮಪ್ಪ ವಂದನಾರ್ಪಣೆ ಮಾಡಿದರು.