ಸೆಕೆಂಡ್ ಪಿಯು ರಿಸಲ್ಟ್: ಬಾಲಕಿಯರದ್ದೇ ಮೇಲುಗೈ…
ಬೆಂಗಳೂರು : ವಿದ್ಯಾರ್ಥಿ ಜೀವನದ ೨ನೇ ಅತಿ ಮಹತ್ವದ ಘಟ್ಟ ಎನಿಸಿದ ದ್ವಿತೀಯ ಪಿಯುಸಿ ಪರೀಕ್ಷೆ-೧ರ ಫಲಿತಾಂಶ ಇಂದು ಪ್ರಕಟವಾಗಿದ್ದು, ಈ ಬಾರಿ ಶೇ.೭೩.೪೫ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.೭.೭ರಷ್ಟು ಕುಸಿತ ಕಂಡಿದೆ. ಕಳೆದ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಶೇ.೮೧.೧೫ರಷ್ಟು ಬಂದಿತ್ತು. ಈ ಬಾರಿ ಶೇ.೭೩.೪೫ ಬಂದಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧುಬಂಗಾರಪ್ಪ, ಪರೀಕ್ಷಾ ಮಂಡಳಿ ಅಧ್ಯಕ್ಷ ಬಸವ ರಾಜೇಂದ್ರ, ಸರ್ಕಾರದ ಪ್ರಧಾನ ಕಾರ್ಯದರ್ಶಿ ರಶಿ ಮಹೇಶ್, ಪದವಿಪೂರ್ವ ಮಂಡಳಿ ನಿರ್ದೇಶಕಿ ಸಿಂಧು ರೂಪೇಶ್ ಮತ್ತಿತರರು ಇಂದು ಮಧ್ಯಾಹ್ನ ೧೨:೪೫ಕ್ಕೆ ಮಶ್ವರದಲ್ಲಿರುವ ಮಂಡಳಿಯ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದರು.
ಈ ಬಾರಿ ಒಟ್ಟು ೬,೩೭,೮೦೫ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ ೪,೬೮,೪೩೯ ಮಂದಿ ತೇರ್ಗಡೆಯಾಗಿzರೆ. ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶೇ. ೯೩.೯೦ ಸಾಧನೆ ಮಾಡುವ ಮೂಲಕ ಉಡುಪಿ ಜಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ಶೇ.೯೩.೫೭ ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ದ್ವಿತಿಯ ಹಾಗೂ ಶೇ.೮೫.೩೬ ಫಲಿತಾಂಶದೊಂದಿಗೆ ಬೆಂಗಳೂರು ದಕ್ಷಿಣ ತೃತಿಯ ಸ್ಥಾಗ ಗಳಿಸಿದರೆ, ಶೇ.೭೩.೪೫ ಫಲಿತಾಂಶದೊಂದಿಗೆ ಯಾದಗಿರಿ ಕೊನೆ ಸ್ಥಾನಕ್ಕೆ ತೃಪ್ತಿಪಟ್ಟಿದೆ.
ಕಲಾ ವಿಭಾಗದಲ್ಲಿ ಬಳ್ಳಾರಿ ಜಿ ಕೂಡ್ಲಗಿ ತಾಲ್ಲೂಕು ಕೊಟ್ಟೂರಿನ ಇಂದೂ ಪಿಯು ಕಾಲೇಜಿನ ಎಲ್. ಆರ್. ಸಂಜನಾ ಬಾಯಿ ಅವರು ೬೦೦ ಅಂಕ ಗಳಿಗೆ ೫೯೭ ಅಂಕ ಪಡೆದು ರಾಜ್ಯ ದ ಪ್ರಥಮ ಸ್ಥಾನ ಪಡೆದಿzರೆ.
ವಾಣಿಜ್ಯ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಯ ಕೆನರಾ ಪಿಯು ಕಾಲೇಜಿನ ವಿದ್ಯಾರ್ಥಿನಿ ದೀಪಶ್ರೀ ೬೦೦ಕ್ಕೆ ೫೯೯ ಹಾಗೂ ವಿeನ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಯ ಎಕ್ಸ್‌ಪರ್ಟ್ ಪಿಯುಸಿ ಕಾಲೇಜಿನ ವಿದ್ಯಾರ್ಥಿನಿ ಅಮೂಲ್ಯ ಕಾಮತ್ ೬೦೦ ಅಂಕಗಳಿಗೆ ೫೯೯ ಅಂಕ ಪಡೆದು ಪ್ರಥಮ ಸ್ಥಾನ ಪಡೆದಿzರೆ.
ಎಂದಿನಂತೆ ಈ ಬಾರಿಯೂ ಬಾಲಕಿಯರದ್ದೇ ಮೇಲುಗೈ:
೨೦೨೫-೨೬ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗೆ ಒಟ್ಟು ೩,೪೫,೬೯೪ ಬಾಲಕಿಯರು ಹಾಜರಾಗಿದ್ದರು. ಈ ಪೈಕಿ ೨,೬೯,೨೧೨ ಬಾಲಕಿಯರು ಉತ್ತೀರ್ಣ ರಾಗಿzರೆ. ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಿದ್ದ ಒಟ್ಟು ೬,೩೭,೮೦೫ ವಿದ್ಯಾರ್ಥಿಗಳ ಪೈಕಿ ೪,೬೮,೪೩೯ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಒಟ್ಟಾರೆ ಶೇ.೭೩.೪೫ರಷ್ಟು ವಿದ್ಯಾರ್ಥಿ ಗಳು ಉತ್ತೀರ್ಣರಾದಂತಾಗಿದೆ.
ಸರ್ಕಾರಿ ಪಪೂ ಕಾಲೇಜುಗಳಲ್ಲಿ ಶೇ.೫೭.೧೧ರಷ್ಟು ಫಲಿತಾಂಶ ಬಂದಿದೆ. ಅನುದಾನಿತ ಪಪೂ ಕಾಲೇಜುಗಳಲ್ಲಿ ಶೇ ೬೨.೬೯ರಷ್ಟು, ಅನುದಾನ ರಹಿತ ಪಪೂ ಕಾಲೇಜುಗಳಲ್ಲಿ ಶೇ. ೮೨.೬೬ರಷ್ಟು, ಬಿಬಿಎಂಪಿ ವ್ಯಾಪ್ತಿಯ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ.೬೮.೮೮ರಷ್ಟು, ವಿಭಜಿತ ಪಪೂ ಕಾಲೇಜುಗಳಲ್ಲಿ ಶೇ.೭೮.೫೮ರಷ್ಟು ಹಾಗೂ ವಸತಿ ಶಾಲಾ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ.೮೬.೧೮ರಷ್ಟು ಫಲಿತಾಂಶ ಬಂದಿದೆ.
ಮಾ.೧ರಿಂದ ಮಾರ್ಚ್ ೨೦ರವರೆಗೆ ದ್ವಿತೀಯ ಪಿಯು ಪರೀಕ್ಷೆ ನಡೆದಿತ್ತು. ಒಟ್ಟು ೧,೧೭೧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಉತ್ತರಪತ್ರಿಕೆಗಳ ಮಲ್ಯಮಾಪನ ಕಾರ್ಯವು ೭೬ ಕೇಂದ್ರ ಗಳಲ್ಲಿ ಮಾ.೨೧ರಿಂದ ಏ.೨ರವರೆಗೆ ೨೮,೦೯೨ ಮಲ್ಯಮಾಪಕರಿಂದ ನಡೆಸಲಾಗಿತ್ತು.
ಶೇ.೧೦೦ರಷ್ಟು ಫಲಿತಾಂಶ:
ಈ ಬಾರಿ ಒಟ್ಟು ಒಟ್ಟು ೧೩೪ ಕಾಲೇಜುಗಳು ಶೇ. ೧೦೦ ಫಲಿತಾಂಶ ಪಡೆದಿದ್ದು, ಅವುಗಳಲ್ಲಿ ೧೩ ಸರ್ಕಾರಿ ಪಪೂ ಕಾಲೇಜು, ೩ ಅನುದಾನಿತ ಪಪೂ ಕಾಲೇಜು, ೧೦೩ ಅನುದಾನರಹಿತ ಪಪೂ ಕಾಲೇಜು, ೧೫ ವಸತಿ ಶಾಲಾ ಪಪೂ ಕಾಲೇಜುಗಳು ಶೇ. ೧೦೦ ಫಲಿತಾಂಶ ಸಾಧನೆ ಮಾಡಿವೆ.
ಶೂನ್ಯ ದಾಖಲೆ:
ರಾಜ್ಯದಲ್ಲಿ ಈ ಬಾರಿ ಒಟ್ಟು ೧೨೩ ಕಾಲೇಜುಗಳು ಶೂನ್ಯ ಫಲಿತಾಂಶ ಪಡೆದಿದ್ದು, ಅವುಗಳಲ್ಲಿ ೮ಸರ್ಕಾರಿ ಪದವಿ ಪೂರ್ವ ಕಾಲೇಜು, ೨೦ ಅನುದಾನ ಪದವಿಪೂರ್ವ ಕಾಲೇಜು , ೯೦ ಅನುದಾನರಹಿತ ಪಪೂ ಕಾಲೇಜು ಹಾಗೂ ೫ ವಸತಿ ಶಾಲಾ ಪದವಿಪೂರ್ವ ಕಾಲೇಜುಗಳು ಸೇರಿವೆ.
ಯಾವ ಶ್ರೇಣಿಯಲ್ಲಿ ಎಷ್ಟು ಮಂದಿ ಉತ್ತೀರ್ಣ:
ಈ ಬಾರಿ ದ್ವಿತಿಯ ಪಿಯು ಪರೀಕ್ಷೆಯಲ್ಲಿ ಶೇ.೭೩.೪೫ರಷ್ಟು ಫಲಿತಾಂಶ ಬಂದಿದ್ದು, ೧,೦೦,೫೭೧ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಅಂತೆಯೇ ೨,೭೮,೦೫೪ ವಿದ್ಯಾರ್ಥಿಗಳು ಪ್ರಥಮ ದರ್ಜೆ, ೭೦೯೬೯ ವಿದ್ಯಾರ್ಥಿಗಳು ದ್ವೀತಿಯ ದರ್ಜೆ ಹಾಗೂ ೧೮೮೪೫ ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಕಲಾ ವಿಭಾಗ:
ವಿಜಯನಗರ ಜಿಯ ಇಂದೂ ಪಿಯು ಕಾಲೇಜು ವಿದ್ಯಾರ್ಥಿನಿ ಸಂಜನಾಬಾಯಿ (೫೯೭) ಪ್ರಥಮ, ಹೂವಿನಹಡಗಲಿಯ ಪಂಚಮಸಾಲಿ ಪಿಯು ಕಾಲೇಜು ವಿದ್ಯಾರ್ಥಿನಿ ನಿರ್ಮಾಲಾ (೫೯೬) ದ್ವಿತಿಯ ಹಾಗೂ ಬೆಂಗಳೂರು ಮಹಾರಾಣಿ ಕಾಲೇಜು ವಿದ್ಯಾರ್ಥಿನಿ ಕೆ.ಆರ್.ಶ್ರೀಜಯ ದರ್ಶನಿ (೫೯೫) ತೃತಿಯ ರ್‍ಯಾಂಕ್ ಗಳಿಸಿದ್ದಾರೆ.
ವಾಣಿಜ್ಯ ವಿಭಾಗ:
ಮಂಗಳೂರಿನ ಕೆನರಾ ಪಿಯು ಕಾಲೇಜು ವಿದ್ಯಾರ್ಥಿನಿ ದೀಪಶ್ರೀ.ಎಸ್ (೫೯೯) ಪ್ರಥಮ, ಮೈಸೂರಿನ ಭಾರತಮಾತಾ ಪಿಯು ಕಾಲೇಜು ಕೊಪ್ಪ ವಿದ್ಯಾರ್ಥಿನಿ ತೇಜಸ್ವಿನಿ (೫೯೮) ದ್ವಿತಿಯ ಹಾಗೂ ಕೋಲಾರ ಮಹಿಳಾ ಸಮಾಜ ಪಿಯು ಕಾಲೇಜು ವಿದ್ಯಾರ್ಥಿನಿ ಎಚ್.ವಿ. ಭಾರ್ಗವಿ (೫೯೭) ತೃತಿಯ ರ್‍ಯಾಂಕ್ ಗಳಿಸಿದ್ದಾರೆ.
ವಿeನ ವಿಭಾಗ:
ಮಂಗಳೂರು ಎಕ್ಸ್‌ಫರ್ಟ್ ಪಿಯು ಕಾಲೇಜು ವಿದ್ಯಾರ್ಥಿನಿ ಅಮೂಲ್ಯ ಕಾಮತ್ (೫೯೯) ಮತ್ತು ತೀರ್ಥಹಳ್ಳಿಯ ವಾಗ್ದೇವಿ ಪಿಯು ಕಾಲೇಜು ವಿದ್ಯಾರ್ಥಿನಿ ದೀಕ್ಷಾ.ಆರ್ (೫೯೯) ಅವರಿಗೆ ಪ್ರಥಮ ರ್‍ಯಾಂಕ್ ಲಭಿಸಿದ್ದು, ಮೂಡಬಿದಿರೆ ಆಳ್ವಾಸ್ ಕಾಲೇಜು ವಿದ್ಯಾರ್ಥಿನಿ ಬಿಂದು ನಾವಳೆ (೫೯೮) ದ್ವಿತಿಯ ರ್‍ಯಾಂಕ್ ಗಳಿಸಿದ್ದಾರೆ.
ಕಲಾ ವಿಭಾಗದಲ್ಲಿ ಒಟ್ಟು ೧,೫೩,೦೪೩ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅವರಲ್ಲಿ ೮೧,೫೩೩ (ಶೇ.೫೩.೭೯) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಒಟ್ಟು ೨,೦೪,೩೨೯ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, ಅವರಲ್ಲಿ ೧,೫೫,೪೨೫ (ಶೇ.೭೬.೦೭) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಿeನ ವಿಭಾಗದಲ್ಲಿ ಒಟ್ಟು ೨,೮೦,೪೩೩ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ ೨,೩೧,೪೬೧ (ಶೇ.೮೨.೫೪) ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಸಾಗಿದ್ದಾರೆ.
ಮಾಧ್ಯಮವಾರು ಫಲಿತಾಂಶ:
ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದ ೨,೦೮,೭೯೪ ವಿದ್ಯಾರ್ಥಿಗಳ ಪೈಕಿ ೧,೧೭,೭೦೩ (ಶೇ. ೫೬.೩೭) ಪಾಸಾಗಿದ್ದಾರೆ.
ಇಂಗ್ಲೀಷ್ ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದ ಒಟ್ಟು ೪,೨೯,೦೧೧ ವಿದ್ಯಾರ್ಥಿಗಳ ಪೈಕಿ ೩,೫೦,೭೩೬ (ಶೇ.೮೧.೭೫) ಪಾಸಾಗಿದ್ದಾರೆ.
ಈ ಬಾರಿ ಸುಮಾರು ೭.೧೩ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
