ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ಸ್ಕೌಟ್ಸ್ ಗೈಡ್ಸ್ ಸಹಕಾರಿ: ಸಿಂಧ್ಯಾ …
ಶಿವಮೊಗ್ಗ: ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರಿ. ಪ್ರತಿ ಯೊಂದು ಮನೆಯಲ್ಲೂ ಮಕ್ಕಳಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ಕಲಿಸಲು ಪೋಷಕರು ಮುಂದಾಗಬೇಕು. ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿ ಯಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಹೇಳಿದರು.
ಶಿವಮೊಗ್ಗ ನಗರದ ಬಿಎಚ್ ರಸ್ತೆಯಲ್ಲಿರುವ ಜಿ ಸ್ಕೌಟ್ ಭವನದಲ್ಲಿ ಆಯೋಜಿಸಿದ್ದ ಅಧಿಕಾರಿಗಳ ಅಭಿವೃದ್ಧಿ ಸಮಾಲೊ ಚನಾ ಸಭೆಯಲ್ಲಿ ಮಾತನಾಡಿ, ಸ್ಕೌಟ್ ಮತ್ತು ಗೈಡ್ ಚಳವಳಿ ಅಂತರಾಷ್ಟ್ರೀಯ ಯುವ ಸಂಘಟನೆ ನಾಲ್ಕು ಕೋಟಿಗೂ ಮೀರಿದ್ದು, ಪ್ರಪಂಚದ ೨೧೬ ದೇಶಗಳಲ್ಲಿ ತನ್ನ ಅಸ್ತಿತ್ವ ಹೊಂದಿದೆ ಎಂದರು.
ಯುವ ಸಮುದಾಯಕ್ಕೆ ಸಾಮಾಜಿಕ ಹೊಣೆಗಾರಿಕೆ ಹಾಗೂ ಜೀವನ ಮಲ್ಯಗಳ ಬೆಳವಣಿಗೆಗೆ ಸ್ಕೌಟ್ ಸಂಪೂರ್ಣ ಸಹಕಾರಿಯಾ ಗುತ್ತದೆ. ಸ್ಕೌಟ್ ಮತ್ತು ಗೈಡ್ ಚಳವಳಿಯನ್ನು ಉತ್ತಮ ರೀತಿ ಯಲ್ಲಿ ಸಮಾಜದಲ್ಲಿ ಮುನ್ನಡೆ ಸಬೇಕು ಎಂದರು.
ಶಿವಮೊಗ್ಗ ಜಿ ಭಾರತ್ ಸ್ಕೌಟ್ ಮತ್ತು ಗೈಡ್ ಮುಖ್ಯ ಆಯುಕ್ತ ಎಚ್.ಡಿ.ರಮೇಶ್ ಶಾಸ್ತ್ರಿ ಮಾತನಾಡಿ, ಶಾಲೆ ಮತ್ತು ಮನೆಯ ಶಿಕ್ಷಣ ಜತೆಯಲ್ಲಿ ಜೀವನಕ್ಕೆ ಅವಶ್ಯವಿರುವ ಮಲ್ಯ ಗಳನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಕಲಿಸುತ್ತದೆ. ಯುವಜನರಿಗೆ ಪರಿ ಣಾಮಕಾರಿಯಾಗಿ ತಲುಪಿಸ ಬೇಕಿದೆ. ರಾಜ್ಯ ಶಾಖೆಯ ಅನುಮತಿಯೊಂದಿಗೆ ಎಲ್ಲ ಅಧಿಕಾರಿಗಳ ಸಹಕಾರದಿಂದ ಶಿವಮೊಗ್ಗ ಶಾಖೆಯಿಂದ ಉತ್ತಮ ಕೆಲಸ ನಡೆಸುತ್ತಿದೆ ಎಂದು ಹೇಳಿದರು.
ಜಿ ಸ್ಕೌಟ್ ಆಯುಕ್ತ ಕೆ.ಪಿ.ಬಿಂದುಕುಮಾರ್, ಜಿ ಕಾರ್ಯದರ್ಶಿ ಎಚ್.ಪರಮೇ ಶ್ವರ್, ಜಿ ಜಂಟಿ ಕಾರ್ಯದರ್ಶಿ ವೈ.ಆರ್.ವೀರೇಶಪ್ಪ, ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭಾರತಿ ಡಯಾಸ್, ಸ್ಥಳಿಯ ಸಂಸ್ಥೆ ಕಾರ್ಯದರ್ಶಿ ರಾಜೇಶ ವಿ ಅವಲಕ್ಕಿ, ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯ್‌ಕುಮಾರ್, ಜಿ ಖಜಂಚಿ ಚೂಡಾಮಣಿ ಪವಾರ್, ದೇವಪ್ಪ ಉಪಸ್ಥಿತರಿದ್ದರು.