ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಶಿಸ್ತಿನ ಸಂಸ್ಥೆ:ಡಿಸಿ
ಶಿವಮೊಗ್ಗ: ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಶಿಸ್ತಿನ ಸಂಸ್ಥೆ ಯಾಗಿದ್ದು, ಮಕ್ಕಳ ಸರ್ವೊ ತೋಮುಖ ಬೆಳವಣಿಗೆಗೆ ಶ್ರಮಿ ಸುತ್ತಿರುವ ಸಂಸ್ಥೆಯಾಗಿದೆ ಎಂದು ಡಿಸಿ ಡಾ. ಸೆಲ್ವಮಣಿ ಹೇಳಿದರು.
ಡಿಸಿ ಕಚೇರಿ ಆವರಣದಲ್ಲಿ ಇಂದು ಹಮ್ಮಿಕೊಂಡಿದ್ದ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಂಸ್ಥಾ ಪನಾ ದಿನಾಚರಣೆ ಸಮಾರಂಭ ವನ್ನು ಧ್ವಜ ಚೀಟಿ ಬಿಡುಗಡೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಇಂದಿನ ಮಕ್ಕಳೆ ನಾಳೆಯ ಪ್ರಜೆಗಳು. ಈ ಸಂಸ್ಥೆಯು ಅನೇಕ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಎತ್ತರಕ್ಕೆ ಬೆಳೆ ಯುತ್ತಿದ್ದು, ಅದರ ಬೆಳವಣಿಗೆಗೆ ನಾವೆಲ್ಲರೂ ಕೈ ಜೋಡಿಸೋಣ, ನಿಮ್ಮೊಂದಿಗೆ ನಾನು ಸದಾ ಇರುವುದಾಗಿ ತಿಳಿಸಿ ಮಕ್ಕಳಿಗೆ ಶುಭ ಕೋರಿದರು.
ಜಿ.ಪಂ. ಸಿಇಒ ಸ್ನೇಹಲ್ ಸುಧಾಕರ ಲೊಖಂಡೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿ ಲೋಕೇಶ್ ಧ್ವಜ ಚೀಟಿ ಬಿಡುಗಡೆ ಮಾಡಿ ಮಕ್ಕಳ ನ್ನುದ್ದೇಶಿಸಿ ಮಾತನಾಡಿದರು.
ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಭಾರತಿ ಡಾಯಸ ಸಂಸ್ಥಾಪನಾ ದಿನಾಚರಣೆಯ ಮಹತ್ವವನ್ನು ತಿಳಿಸುತ್ತಾ ಸ್ಕೌಟ್ಸ್ ಇತಿಹಾಸದ ಬಗ್ಗೆ ವಿವರಿಸಿ, ಭಾರತದಲ್ಲಿ ಸ್ಕೌಟಿಂಗ್ ಗೈಡಿಂಗ್ ಬೆಳೆದು ಬಂದ ದಾರಿ ತಿಳಿಸಿದರು.
ಕಾಂiiಕ್ರಮದಲ್ಲಿ ಜಿ ಮುಖ್ಯ ಆಯುಕ್ತ ಹೆಚ್.ಡಿ. ರಮೇಶಾಸ್ತ್ರಿ, ಪ್ರಮುಖರಾದ ಕೆ.ಪಿ.ಬಿಂದುಕುಮಾರ್ ಶಕುಂತಲಾ ಚಂದ್ರಶೇಖರ್, ಚೂಡಾಮಣಿ, ಹೆಚ್.ಪರಮೇಶ್ವರ್, ಜಿ. ವಿಜಯಕುಮಾರ, ಕೆ.ರವಿ, ಎ.ವಿ.ರಾಜೇಶ್, ಶಿವಶಂಕರ, ಮಲ್ಲಿಕಾರ್ಜುನ ಕಾನೂರು, ದೀಪು, ಚಂದ್ರಶೇಖರ್, ನಗರದ ವಿವಿಧ ಶಾಲೆಯ ೨೦೦ ಸ್ಕೌಟ್ಸ್, ಗೈಡ್ಸ್, ರೋವರ್‍ಸ್, ರೇಂಜರ್‍ಸ್ ಭಾಗವಹಿಸಿದ್ದರು.