ಇತರೆಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಚಂದ್ರಗುತ್ತಿ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರಾಗಿ ಸರಿತಾ ಕೃಷ್ಣಪ್ಪ – ರೇಣುಕಾಪ್ರಸಾದ್ ಆಯ್ಕೆ

Share Below Link

ಸೊರಬ: ತಾಲೂಕಿನ ಚಂದ್ರಗುತ್ತಿ ಗ್ರಾಪಂಗೆ ನಡೆದ ಅಧ್ಯಕ್ಷ-ಉಪಾಧ್ಯಕ್ಷಗಾದಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರಾದ ಸರಿತಾ ಕೃಷ್ಣಪ್ಪ ಅಧ್ಯಕ್ಷರಾಗಿ ಹಾಗೂ ಎಂ.ಬಿ. ರೇಣುಕಾಪ್ರಸಾದ್ ಉಪಾಧ್ಯಕ್ಷರಾಗಿ ಆಯ್ಕೆಯಾದರು.
೧೪ ಸದಸ್ಯರ ಬಲ ಇರುವ ಪಂಚಾಯ್ತಿಯಲ್ಲಿ ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಸರಿತಾ ಕೃಷ್ಣಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋ ಧವಾಗಿ ಆಯ್ಕೆಯಾದರು. ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಂ.ಬಿ. ರೇಣುಕಾ ಪ್ರಸಾದ್ ೭ ಮತಗಳನ್ನು ಪಡೆದರೆ, ತಿರುಪತಿ ೬ ಮತಗಳ ಪಡೆದರು. ಒಂದು ಮತ ತಿರಸ್ಕಾರಗೊಂಡಿತು. ಚುನಾವಣಾಧಿಕಾರಿಯಾಗಿ ದಂಡಾವತಿ ಜಲಾಶಯ ಯೋಜನಾ ವಿಭಾಗದ ಸಹಾಯಕ ಇಂಜಿನಿಯರ್ ಯು.ಎಸ್. ಸಂಪತ್ ಕುಮಾರ್ ಕಾರ್ಯನಿರ್ವಹಿಸದರು. ಗ್ರಾಪಂ ಪಿಡಿಒ ನಾರಾಯಣಮೂರ್ತಿ ಸಹಕರಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಶಿಲ್ಪಾ, ಲಕ್ಷ್ಮಿ ಚಂದ್ರಪ್ಪ, ಎಂ.ಪಿ. ರತ್ನಾಕರ, ಎಸ್.ಕೆ. ರಾಜಶೇಖರ, ಶ್ರೀಮತಿ, ಲಕ್ಷ್ಮೀ ರವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಜಿ ಉಪಾಧ್ಯಕ್ಷ ಡಾ. ಆರ್. ಶ್ರೀಧರ್ ಹುಲ್ತಿಕೊಪ್ಪ, ಮುಖಂಡರಾದ ಎಚ್.ಗಣಪತಿ, ಎಂ.ಡಿ. ಶೇಖರ್, ಗಣಪತಿ ನಾಯ್ಕ್, ಎನ್.ಜಿ. ನಾಗರಾಜ್, ಸುನೀಲ್ ಗೌಡ, ಪ್ರಭಾಕರ ಶಿಗ್ಗಾ, ಗಣೇಶ್ ಮರಡಿ, ವಿನಾಯಕ ಶೇಟ್, ಪರಮೇಶ್, ನಾಗರಾಜ ಬಸ್ತಿಕೊಪ್ಪ, ಸೇರಿದಂತೆ ಇತರರಿದ್ದರು.