ಜಿಲ್ಲಾ ಸುದ್ದಿತಾಜಾ ಸುದ್ದಿ

ವಿಶ್ವವನ್ನೇ ಒಗ್ಗೂಡಿಸುವ ಶಕ್ತಿ ಸಂಸ್ಕೃತ ಭಾಷೆಗಿದೆ…

Share Below Link

ಶಿವಮೊಗ್ಗ: ಇಡೀ ವಿಶ್ವವನ್ನೆ ಒಂದುಗೂಡಿಸುವ ಶಕ್ತಿ ಸಂಸ್ಕೃತ ಭಾಷೆಗಿದೆ. ದೆಹಲಿಯ ಕೇಂದ್ರೀಯ ಸಂಸ್ಕೃತ ವಿವಿಯಿಂದ ಹಲವಾರು ಯೋಜನೆಗಳನ್ನು ವಿದ್ಯಾರ್ಥಿಗಳು ಹಾಗೂ ಸಂಸ್ಕೃತ ಕಲಿಕೆ ಆಸಕ್ತರಿಗೆ ನೀಡುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾ ವಾಣಿಜ್ಯ ಸಂಘದ ಸಹ ಕಾರ್ಯದರ್ಶಿ ಜಿ. ವಿಜಯಕುಮಾರ್ ಹೇಳಿದರು.


ಸಂಸ್ಕೃತ ಭಾರತಿ, ಯೂತ್ ಹಾಸ್ಟೆಲ್ಸ್ ಸಂಸ್ಥೆ ತರುಣೋದಯ ಘಟಕ ಇನ್ನಿತರ ಸಂಸ್ಥೆಗಳ ಸಹಯೋಗದಲಿ ಹಿಮಾಲಯದ ಚಂದ್ರಕಾಣಿ ಪಾಸ್‌ನಲ್ಲಿ ಸಂಸ್ಕೃತ ಧ್ವಜಾರೋಹಣ ಮಾಡಲು ಚಾರಣಕ್ಕೆ ಹೊರಟಿರುವ ಸಾಹಸಿಗರಿಗೆ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಸ್ಕೃತ ಭಾಷೆಯಲ್ಲಿ ಸಂಸ್ಕಾರ, ಜ್ಞಾನ, ಸಂಸ್ಕೃತಿ ಹಾಗೂ ವಿಜ್ಞಾನ ಅಡಕವಾಗಿದೆ. ಭಾರತ ದೇಶದ ಪವಿತ್ರ ಗ್ರಂಥಗಳು ಸಂಸ್ಕೃತ ಭಾಷೆಯಲ್ಲಿ ರಚಿತವಾಗಿದೆ ಎಂದರು.
ಚಾರಣಿಗರ ತಂಡವು ೨೦೨೪ರ ಮೇ ೨೬ರಂದು ಹಿಮಾಚಲ ಪ್ರದೇಶದ ಕುಲು ಕಣಿವೆಯ ಚಂದ್ರಕಾಣಿ ಪಾಸ್ ೧೨೫೦೦ ಅಡಿ ಎತ್ತರ ಪ್ರದೇಶದಲ್ಲಿ ಧ್ವಜಾರೋಹಣ ಮಾಡಲಿದೆ. ದೇಶದ ೧೩ ರಾಜ್ಯಗಳಿಂದ ಕೇಂದ್ರೀಯ ವಿಶ್ವ ವಿದ್ಯಾನಿಲಯದ ೨೬ ಜನ ವಿದ್ಯಾರ್ಥಿಗಳ ಜತೆಗೆ ಕರ್ನಾಟಕದ ೨೮ ಜನರ ತಂಡ ಐತಿಹಾಸಿಕ ಕಾರ್ಯಕ್ರಮಕ್ಕೆ ತೆರಳಲಿದ್ದು, ಶಿವಮೊಗ್ಗ ನಗರದ ಸಾಹಸಿ ಅ.ನಾ. ವಿಜಯೇಂದ್ರರಾವ್ ತಂಡದ ನಾಯಕರಾಗಿ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ ಎಂದರು.
ವೈ.ಹೆಚ್.ಎ.ಐ. ತರುಣೋದಯ ಘಟಕದ ಕಾರ್ಯಾಧ್ಯಕ್ಷ ಎಸ್.ಎಸ್. ವಾಗೀಶ್ ಅಧ್ಯಕ್ಷತೆ ವಹಿಸಿದ್ದರು. ಅ.ನಾ.ವಿಜಯೇಂದ್ರರಾವ್, ಆದಿತ್ಯ ಪ್ರಸಾದ್ ಇನ್ನಿತರರಿದ್ದರು.

This image has an empty alt attribute; its file name is Arya-coll.gif