ಜಿಲ್ಲಾ ಸುದ್ದಿತಾಜಾ ಸುದ್ದಿ

ವೀರೇಶ್ವರ ಪುಣ್ಯಾಶ್ರಮದಲ್ಲಿ ಉಭಯ ಗುರುಗಳ ಸಂಗೀತ ಸ್ವರ ಸಮಾರಾಧನೆ ಕಾರ್ಯಕ್ರಮ

Share Below Link

ಶಿವಮೊಗ್ಗ : ಸಾಗರ ರಸ್ತೆಯ ಡಾ. ಪಂಡಿತ ಪುಟ್ಟರಾಜಕವಿ ಗವಾಯಿಗ ಳವರ ಕುರುಡು ಮಕ್ಕಳ ಸಂಗೀತ ವಿದ್ಯಾಲಯ ಮತ್ತು ವೀರೇಶ್ವರ ಪುಣ್ಯಾ ಶ್ರಮದಲ್ಲಿ ಜು. ೭ ಮತ್ತು ೯ರಂದು ಗಾನಯೋಗಿ ಶಿವಯೋಗಿ ಪಂಚಾಕ್ಷರಗವಾಯಿಗಳವರ ೭೯ನೇ ಹಾಗೂ ಪದ್ಮಭೂಷಣ ಪುಟ್ಟರಾಜಕವಿ ಗವಾಯಿಗಳ ೧೩ನೇ ಪಣ್ಯ ಸ್ಮರಣೋತ್ಸ ವದ ನಿಮಿತ್ತ ಉಭಯ ಗುರುಗಳ ಸಂಗೀತ ಸ್ವರ ಸಮಾರಾಧನೆ ಸಾಂಸ್ಕತಿಕ, ಧಾರ್ಮಿಕ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಆನಂದಪುರ ಬೆಕ್ಕಿನಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮಿ, ಹೊನ್ನಾಳಿ ಹಿರೇಕಲ್ಮಠಶ್ರೀ ಡಾ. ಚನ್ನಮಲ್ಲಿಕಾರ್ಜುನ ಶಿವಚಾರ್ಯ ಸ್ವಾಮಿಗಳ ಸಾನ್ನಿಧ್ಯ ವಹಿಸುವರು.
ಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಚನ್ನಬಸವ ಮಹಾಸ್ವಾಮಿ ಗಳು, ಶ್ರೀ ಸದಾನಂದ ಶಿವಯೋಗಾಶ್ರಮ, ಡಾ. ಮಹಾಂತ ಸ್ವಾಮಿಗಳ ಸಮ್ಮುಖದಲ್ಲಿ ತೃತೀಯ ಪೀಠಾಧಿಪತಿ ಡಾ. ಕಲ್ಲಯ್ಯಜ್ಜ ಅವರ ಅದ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಅರ್ಚಕ ವೀರಭದ್ರ ಶಾಸ್ತ್ರಿ, ಶ್ರೀ ವೇದಘೋಷ ನಡೆಯಲಿದ್ದು, ಆಶ್ರಮದ ಅಂದ ಮಕ್ಕಳಿಂದ ಪ್ರಾರ್ಥನೆ ನಡೆಯಲಿದೆ. ಅತಿಥಿಗಳಾಗಿ ಶಾಸಕ ಎಸ್. ಚನ್ನಬಸಪ್ಪ, ಮೇಯರ್ ಶಿವಕುಮಾರ್, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಉಮೇಶ್ ಹೆಚ್. ರಾಜ್ಯ ಮಾಜಿ ಶಾಸಕರ ವೇದಿಕೆ ಅಧ್ಯಕ್ಷ ಹೆಚ್.ಎಂ. ಚಂದ್ರ ಶೇಖರಪ್ಪ ಮತ್ತು ವಿವಿಧ ಗಣ್ಯರು ಪಾಲ್ಗೊಳ್ಳಲಿzರೆ.
ಈ ಸಂದರ್ಭದಲ್ಲಿ ಗದಗ ಪಣ್ಯಾಶ್ರಮದ ಹೇಮರಾಜಶಾಸ್ತ್ರಿ, ಕಮಲಕಂದ ಶ್ರೀ ಅಂಬಾದಾಸ ಎಸ್. ಜಮಾದಾರ ಅವರಿಗೆ ಶ್ರೀ ಗುರುರಕ್ಷೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಗದಗ ವಿವಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಎಂ. ಲೋಕೇಶಪ್ಪ ಯಲವಟ್ಟ ಮತ್ತು ಕುಟುಂಬದಿಂದ ಗವಾಯಿಗಳವರಿಗೆ ತುಲಾಭಾರ ಸೇವೆ ನಡೆಯಲಿದೆ. ಜೊತೆಗೆ ವಿಶೇಷ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಪುಣ್ಯಸ್ಮರಣೋತ್ಸವ ಸೇವಾ ಸಮಿತಿ ಕೋರಿದೆ.