ಎಸ್.ಎಸ್. ನಾರಾಯಣ ಹೆಲ್ತ್ ಸೆಂಟರ್ನ ಉಚಿತ ಇಸಿಜಿ ತಪಾಸಣಾ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ…
ದಾವಣಗೆರೆ : ವಿಶ್ವ ಹೃದಯ ದಿನದ ಅಂಗವಾಗಿ ಇಲ್ಲಿನ ಎಸ್.ಎಸ್. ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ ಹಮ್ಮಿಕೊಂಡಿದ್ದ ಉಚಿತ ಇಸಿಜಿ ತಪಾಸಣಾ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾಯಿತು. ಸುಮಾರು ೪೨೫ಕ್ಕೂ ಹೆಚ್ಚು ಮಂದಿ ಆರೋಗ್ಯ ತಪಾಸಣೆ ಮಾಡಿಸಿ ಕೊಳ್ಳುವ ಮೂಲಕ ಈ ಉಚಿತ ಶಿಬಿರದ ಪ್ರಯೋಜನ ಪಡೆದುಕೊಂಡರು.
ಇಲ್ಲಿನ ಪ್ರತಿಷ್ಠಿತ ಎಸ್.ಎಸ್. ಹಾಸ್ಪಿಟಲ್ ಸ್ಪೆಷಾಲಿಟಿ ಕ್ಲಿನಿಕ್ನಲ್ಲಿ ಆಯೋಜಿಸಿದ್ದ ಶಿಬಿರಕ್ಕೆ ಬೆಳಿಗ್ಗೆ ಯಿಂದಲೇ ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಆಗಮಿಸಿ, ಇಸಿಜಿ, ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಅಂಶ ತಪಾಸಣೆ ಹಾಗೂ ತಜ್ಞ ವೈದ್ಯ ರೊಂದಿಗೆ ಉಚಿತ ಸಮಾಲೋಚನೆ ಯನ್ನು ಶಿಬಿರಾರ್ಥಿಗಳು ಪಡೆದುಕೊಂಡರು.
ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಹಾಗೂ ಹೃದ್ರೋಗ ತಜ್ಞ ಡಾ| ಮಶ ಪಿ ಅವರು ಮಾತನಾಡಿ, ಹೃದಯವು ಸತತವಾಗಿ ಕಾರ್ಯ ನಿರ್ವಹಿಸುವ ಅಂಗವಾಗಿದ್ದು ಇದರ ಕಾಳಜಿ ವಹಿಸುವುದು ಅತ್ಯಂತ ಮುಖ್ಯ, ಈ ಶಿಬಿರದ ಮುಖ್ಯ ಉzಶ ಹೃದ್ರೋಗವನ್ನು ಆರಂಭದಲ್ಲಿಯೇ ಪತ್ತೆ ಹಚ್ಚುವುದು ಹಾಗೂ ಹೃದ್ರೋಗದ ಕುರಿತು ಅರಿವು ಮೂಡಿಸುವುದಾಗಿದೆ ಎಂದರು.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಸುನೀಲ ಭಂಡಾರಿಗಲ್ ಅವರು ಮಾತನಾಡಿ, ಪ್ರತಿ ವರ್ಷ ಸೆ.೨೯ರಂದು ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ಎಸ್.ಎಸ್. ನಾರಾ ಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ ಸಹ ಆರೋಗ್ಯಕರ ಹೃದಯ ಹಾಗೂ ಹೃದಯ ರೋಗ ಗಳ ಕುರಿತು ಅರಿವು ಮೂಡಿಸಲು ವಿವಿಧ ಕಾರ್ಯಕ್ರಮ ಹಮ್ಮಿಕೊಂ ಡಿತ್ತು ಇದರಲ್ಲಿ ಉಚಿತ ಇಸಿಜಿ ತಪಾಸಣಾ ಶಿಬಿರವು ಸಹ ಒಂದಾ ಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವ ಜನಿಕರು ಬಂದು ಇದರಲ್ಲಿ ಭಾಗಿಯಾಗಿದ್ದು ಸಂತೋಷವಾಗಿದೆ ಎಂದರು.
ಶಿಬಿರದಲ್ಲಿ ಭಾಗವಹಿಸಿದ ದಾವಣಗೆರೆಯ ನಿವಾಸಿ ಕೊಟ್ರೇಶ್ ಬಣಕಾರ ಮಾತನಾಡಿ, ಈ ಶಿಬಿರ ಆಯೋಜಿಸಿದ ಎಸ್.ಎಸ್. ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ಗೆ ಧನ್ಯವಾದ ಅರ್ಪಿಸಿದರು, ಇತ್ತೀಚೆಗೆ ೩೦-೪೦ ವಯಸ್ಸಿನವರಿಗೂ ಹೃದಯಾ ಘಾತದ ಸಮಸ್ಯೆ ಕಾಡುತ್ತಿದೆ. ಈ ಸಮಸ್ಯೆಗೆ ಪರಿಹಾರಕ್ಕಾಗಿ ಇಂತಹ ಶಿಬಿರ ಆಯೋಜನೆಯಾಗಿದ್ದು ಸಂತೋಷವಾಗಿದೆ. ಯುವಕರು, ವೃದ್ಧರು, ಹೆಣ್ಣುಮಕ್ಕಳು ಸೇರಿದಂತೆ ವಿವಿಧ ವಯಸ್ಸಿನ ಜನರು ಇದರ ಸದುಪಯೋಗ ಪಡೆದುಕೊಂಡಿ zರೆ ಎಂದರು.
ಉಚಿತ ಇಸಿಜಿ ಶಿಬಿರದ ಕುರಿತು ಪತ್ರಿಕಾ ವರದಿ, ಫ್ಲೆಕ್ಸ್ಬೊರ್ಡ್, ಲಿಫಲೆಟ್, ಮೆಟಾ ಮಾರ್ಕೇ ಟಿಂಗ್ ಇನ್ನಿತರ ಮೂಲಗಳ ಮೂಲಕ ತಿಳಿದು ದೂರದ ಚನ್ನಗಿರಿ, ಚಿತ್ರದುರ್ಗ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ಜನರು ಇದರಲ್ಲಿ ಭಾಗಿಯಾಗಿದ್ದರು. ದಾವಣಗೆರೆಯ ವಿವಿಧ ಸಂಸ್ಥೆಗಳು, ಕ್ಲಬ್ಗಳು, ಮತ್ತು ಸಮುದಾಯ ಸಂಘಟನೆಗಳು ಈ ಮಾಹಿತಿ ಸುಮಾರು ೫೦,೦೦೦ ಜನರಿಗೆ ತಲುಪುವಂತೆ ಮಾಡಿದ್ದು ವಿಶೇಷ.
ಹೃದ್ರೋಗ ತಜ್ಞ ಡಾ| ಶ್ರೀನಿವಾಸ ಬಿ, ನೆಪ್ರೋಲಾಜಿಸ್ಟ್ ಡಾ| ಶ್ರೀದತ್ತ, ಸಿನಿಯರ್ ಮಾರ್ಕೇಟಿಂಗ್ ಮ್ಯಾನೇಜರ್ ಪ್ರಶಾಂತ ಜಿ.ಎನ್, ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
