ಜಿಲ್ಲಾ ಸುದ್ದಿತಾಜಾ ಸುದ್ದಿ

ಶಾಸಕರಿಂದಲೇ ಗ್ರಾಮಾಭಿವೃದ್ಧಿಗೆ ಅಡ್ಡಗಾಲು…

Share Below Link

ಹೊಸನಗರ: ಕೋಟ್ಯಂತರ ರೂ. ಕಾರ್ಪೋರೇಟ್ ಕಂಪನಿಗಳ ಸಾಲವನ್ನು ಮನ್ನಾ ಮಾಡಲು ಹಿಂದೇಟು ಹಾಕದ ಬಿಜೆಪಿ ಸರಕಾರ ಗ್ರಾಮದ ಅಭಿವೃದ್ಧಿಗೆ ನೆಡುತೋಪು ಕಟಾವು ಮಾಡಿರುವುದರಲ್ಲಿ ಅಕ್ರಮ ನಡೆದಿದೆ ಎಂದು ಬೊಬ್ಬೆ ಹೊಡೆಯುತ್ತಿzರೆ. ಕರಿಮನೆ ಗ್ರಾಮದ ಅಭಿವೃದ್ಧಿಗೆ ಸ್ವತಃ ಶಾಸಕ ಆರಗ eನೇಂದ್ರರವರೆ ಅಡ್ಡಿ ಮಾಡುತ್ತಿzರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಪಾದಿಸಿದರು.
ಅವರು ಕರಿಮನೆ ಗ್ರಾಪಂ ಆವರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ಕರಿಮನೆ ಗ್ರಾಪಂ ವ್ಯಾಪ್ತಿಯಲ್ಲಿ ಹಿಂದೆ ನಿರ್ಮಾಣ ಮಾಡಿದ್ದ ಅಕೇಶಿಯಾ ನೆಡುತೋಪು ಕಡಿತಲೆ ವಿಷಯದಲ್ಲಿ ಶಾಸಕ ಆರಗ eನೇಂದ್ರ ಅವರು ಅನಗತ್ಯ ವಿವಾದ ಹುಟ್ಟು ಹಾಕುತ್ತಿzರೆ. ಗ್ರಾಮ ಪಂಚಾಯಿತಿಯೇ ಹಿಂದೆ ಅನುದಾನ ನೀಡಿ ನೆಡುತೋಪು ನಿರ್ಮಿಸಿತ್ತು. ಇಷ್ಟು ವರ್ಷಗಳ ಕಾಲ ನಿರ್ವಹಣೆ ಮಾಡಲಾಗಿತ್ತು. ಇದಕ್ಕೆ ಪೂರಕ ದಾಖಲೆಗಳಿವೆ. ಆದರೆ ಈಗ ಕಡಿತಲೆ ವಿಚಾರವನ್ನು ವಿವಾದವನ್ನಾಗಿ ಮಾಡಲಾಗಿದೆ. ಗ್ರಾಮದ ಅಭಿವೃದ್ಧಿಗೆ ಹಣ ಸಿಗಬಾರದು, ಇದರಿಂದ ಆಡಳಿತಾ ರೂಢ ಕಾಂಗ್ರೆಸ್ ಸದಸ್ಯರಿಗೆ ಗ್ರಾಮಸ್ಥರಲ್ಲಿ ಅಸಮಧಾನ ಮೂಡಬೇಕು ಎನ್ನುವ ಉದ್ದೇಶ ದಿಂದ ಪ್ರತಿಭಟನೆ ನಡೆಸಿ, ಅಧಿಕಾರಿ ಗಳ ವಿರುದ್ಧ ಕೇಸು ದಾಖಲಿಸಲು ಒತ್ತಡ ಹೇರುತ್ತಿzರೆ ಎಂದು ದೂರಿದರು.
ವಾಸ್ತವದಲ್ಲಿ ೨೦೨೧ರಲ್ಲಿ ಇವರು ಗೃಹ ಸಚಿವರಾಗಿದ್ದ ವೇಳೆ ಸ್ವತಃ ಇವರೇ ಮರ ಕಡಿತಲೆಗೆ ಅವಕಾಶ ನೀಡುವಂತೆ ಇಲಾಖೆಗೆ ಪತ್ರ ಬರೆದಿದ್ದರು. ಈಗ ಇವರೇ ಇದನ್ನು ವಿರೋಧಿಸ ತೊಡಗಿರು ವುದು ಕೇವಲ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಎನ್ನುವುದು ಸ್ಪಷ್ಟವಾಗಿದೆ. ಒಂದು ವೇಳೆ ಕೇಸು ದಾಖಲಿಸುವುದಾದರೆ ಶಾಸಕರ ವಿರುದ್ಧವೇ ದಾಖಲು ಮಾಡಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ನಿರ್ವಹಣೆ ಮಾಡಿದ ನೆಡುತೋಪು ಕಡಿತಲೆ ಮಾಡಿ ಊರಿನ ಅಭಿವೃದ್ಧಿ ಅನುದಾನ ಬಳಸಿಕೊಳ್ಳಲು, ಕಾನೂನಿನ ಅಡಿಯಲ್ಲಿಯೇ ಅವಕಾಶವಿದೆ. ಕೇಂದ್ರದ ಬಿಜೆಪಿ ಸರಕಾರ ರಾಜ್ಯಕ್ಕೆ ನೀಡಬೇಕಾದ ಲಕ್ಷಾಂತರ ಕೋಟಿ ರೂ. ತೆರಿಗೆ ಸಂಗ್ರಹ ಹಣವನ್ನು ನೀಡಿಲ್ಲ. ಗ್ರಾಮಗಳ ಅಭಿವೃದ್ಧಿಗೆ ಯಾವುದೇ ಅನುದಾನ ಹರಿದುಬರುತ್ತಿಲ್ಲ. ಗ್ರಾಮದ ಸಂಪನ್ಮೂಲಗಳ ಬಳಕೆಗೆ ಈ ರೀತಿಯಲ್ಲಿ ಅಡ್ಡಿ ತರುವುದು ಎಷ್ಟು ಸಮಂಜಸ ಎಂದು ಅವರು ಪ್ರಶ್ನಿಸಿದರು.
ಒಂದು ವೇಳೆ ಅಧಿಕಾರಿಗಳು ಅಥವಾ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಪ್ರಕರಣ ದಾಖಲು ಮಾಡಿದ್ದೇ ಆದಲ್ಲಿ ತಾವು ಪಂಚಾಯಿತಿ ಆವರಣದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸು ತ್ತೇನೆ. ಲಕ್ಷಾಂತರ ಮೌಲ್ಯದ ಹಣವನ್ನು ಲಪಟಾಯಿಸಲು ಹೊರಟಿzರೆ ಎಂದು ಕಾಂಗ್ರೆಸ್ ಬೆಂಬಲಿತ ಸದಸ್ಯರ ಮೇಲೆ ಆರೋಪ ಮಾಡಿzರೆ. ಅಷ್ಟು ಅನುಮಾನವಿದ್ದರೇ, ಇವರೇ ಕಡಿತಲೆ ಮಾಡಿ ಹಣವನ್ನು ಪಂಚಾಯಿತಿಗೆ ನೀಡಲಿ ಎಂದು ಸವಾಲು ಹಾಕಿದರು.
ಸೀರೆ ಹಂಚುವುದು ಅಭಿವೃದ್ಧಿಯೇ:
ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಯಕ್ರಮಗಳನ್ನು ಬಿಜೆಪಿ ವಿರೋಧಿಸುತ್ತಿದೆ. ಇದರಿಂದ ಬಡವರ ವಿರೋಧಿ ಬಿಜೆಪಿ ಎನ್ನುವುದು ತಿಳಿಯಬಹುದು. ಈಗ ಹಬ್ಬದ ನೆಪದಲ್ಲಿ ತೀರ್ಥಹಳ್ಳಿಯಲ್ಲಿ ಸಾವಿರಾರು ಮಹಿಳೆಯರಿಗೆ ಶಾಸಕರು ಸೀರೆ ಹಂಚಿzರೆ. ಇದು ಅಭಿವೃದ್ದಿ ಕಾರ್ಯವೇ, ಇದಕ್ಕೆ ಹಣ ಎಲ್ಲಿಂದ ಬಂತು ಎನ್ನುವುದನ್ನು ಬಹಿರಂಗ ಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಗ್ರಾಪಂ ಅಧ್ಯಕ್ಷೆ ದೇವಮ್ಮ ಗೋಪಾಲ್, ಉಪಾಧ್ಯಕ್ಷ ರಮೇಶ್ ಹಲಸಿನಹಳ್ಳಿ, ಪ್ರಮುಖರಾದ ಕರುಣಾಕರ ಶೆಟ್ಟಿ, ಸತೀಶ್ ಪಟೇಲ್, ಪ್ರಕಾಶ್ ಮಳಲಿ, ನಾಗರತ್ನ ದೇವೇಂದ್ರ ಜಿ.ಎಚ್., ಹರೀಶ್, ಪರ್ವತಪ್ಪಗೌಡ ಮತ್ತಿತರರು ಇದ್ದರು.