ಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿ

ರೋಟರಿ ಕ್ಲಬ್ ಮಿಡ್ ಟೌನ್‌ಗೆ ಸಮಗ್ರ ಚಾಂಪಿಯನ್ ಕಿರೀಟ

Share Below Link

ಶಿವಮೊಗ್ಗ : ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ನಡೆದ ರೋಟರಿ ವಲಯ-೧೦ ಸಾಂಸ್ಕೃತಿಕ ಸ್ಪರ್ಧೆಯಲ್ಲಿ, ರೋಟರಿ ಕ್ಲಬ್ ಮಿಡ್ ಟೌನ್ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಒಟ್ಟು ೮ ಪ್ರಶಸ್ತಿಗಳನ್ನು ಗಳಿಸಿ, ಸಮಗ್ರ ಚಾಂಪಿಯನ್ ಶಿಪ್ ಕಿರೀಟ ತನ್ನದಾಗಿಸಿಕೊಂಡಿದೆ ಎಂದು ಕ್ಲಬ್ ಅಧ್ಯಕ್ಷ ಹರ್ಷ ಭಾಸ್ಕರ್ ಕಾಮತ್ ತಿಳಿಸಿzರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಾಧನೆ ನಮ್ಮ ಕ್ಲಬ್ಬಿನ ಎ ಸದಸ್ಯರ ಸಹಕಾರದಿಂದ ಆಗಿದೆ ಎಂದರ ಲ್ಲದೇ, ತಾವು ಅಧ್ಯಕ್ಷ ಸ್ಥಾನ ವಹಿಸಿಕೊಂಡು ಕೇವಲ ೧೧೦ ದಿನಗಳಲ್ಲಿ ಕ್ಲಬ್ ೯೭ಕ್ಕೂ ಹೆಚ್ಚು ಸೇವಾ ಮತ್ತು ಸಾಮಾಜಿಕ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಒಟ್ಟು ರೂ. ೧೩,೬೮,೦೦೦ ಮಲ್ಯದ ಸಮುದಾಯ ಅಭಿವೃದ್ಧಿ ಕಾರ್ಯ ಕ್ರಮಗಳು ಹಾಗೂ ೬೩ ಪಬ್ಲಿಕ್ ಇಮೇಜ್ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ. ಈ ಪ್ರಶಸ್ತಿ ನಮ್ಮ ಕ್ಲಬ್ ಸದಸ್ಯರ ಶ್ರಮ, ಸಮರ್ಪಣೆ ಮತ್ತು ಒಗ್ಗಟ್ಟಿನ ಪ್ರತಿಫಲವಾಗಿದೆ ಎಂದರು.
ಮಹಿಳೆಯರ ಸೊಲೋ ಹಾಡು ಪ್ರಥಮ ಸ್ಥಾನ, ಪುರುಷರ ಸೊಲೋ ಹಾಡು ಪ್ರಥಮ ಸ್ಥಾನ, ಡ್ಯೂಯೆಟ್ ಹಾಡು ಪ್ರಥಮ ಸ್ಥಾನ, ಗುಂಪು ಹಾಡು ದ್ವಿತೀಯ ಸ್ಥಾನ, ಗುಂಪು ನೃತ್ಯ ಪ್ರಥಮ ಸ್ಥಾನ, ಆನೇಟ್ ಸೊಲೋ ನೃತ್ಯ ದ್ವಿತೀಯ ಸ್ಥಾನ, ರೋಟೇರಿಯನ್ ಸೊಲೋ ನೃತ್ಯ ದ್ವಿತೀಯ ಸ್ಥಾನ, ನಾಟಕ (ಸ್ಕಿಟ್) ದ್ವಿತೀಯ ಸ್ಥಾನ, ಒಟ್ಟು ೮ ಕ್ಲಬ್‌ಗಳ ಸ್ಪರ್ಧೆಯಲ್ಲಿ ಭಾಗವಹಿಸಿದ ರೋಟರಿ ಕ್ಲಬ್ ಮಿಡ್ ಟೌನ್, ಅತ್ಯಧಿಕ ಅಂಕಗಳನ್ನು ಪಡೆದು ಸಮಗ್ರ ಚಾಂಪಿಯನ್ ಪಟ್ಟಕ್ಕೇರಿದೆ ಎಂದು ವಿವರಿಸಿದರು.
ತಾವು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೇಲೆ ಐದು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾಮಾಜಿಕ ಚಟುವಟಿಕೆಯಲ್ಲಿ ಮಹತ್ತರವಾದ ಕೊಡುಗೆ ನೀಡಿzವೆ. ಗೋವರ್ಷ ಕಾರ್ಯಕ್ರಮದ ಮೂಲಕ ಬಡ ರೈತನಿಗೆ ಗೋದಾನ, ರಕ್ಷಕನಿಗೆ ರಕ್ಷೆ ಕಾರ್ಯಕ್ರಮದ ಮೂಲಕ ಟ್ರಾಫಿಕ್ ಸಿಬ್ಬಂದಿಗಳಿಗೆ ರಿಫ್ಲೆಕ್ಟರ್ ಉಡುಪುಗಳು, eನಪಥ ಕಾರ್ಯಕ್ರಮದಡಿ ಸರ್ಕಾರಿ ಶಾಲೆಗಳಿಗೆ ಡೆಸ್ಕ್‌ಗಳ ವಿತರಣೆ, ಸ್ವರ್ಣ ಸಿಂಚನ ಕಾರ್ಯಕ್ರಮದಡಿ ಪುಟ್ಟ ಮಕ್ಕಳಿಗೆ ಸ್ವರ್ಣಬಿಂದು ಪ್ರಾಶನ, ಶ್ರವಣಸ್ಪರ್ಶ ಕಾರ್ಯಕ್ರಮದ ಮೂಲಕ ಬಡ ಕಿವುಡು ಮಕ್ಕಳಿಗೆ ಶ್ರವಣಸಾಧನ ವಿತರಣೆ ಕಾರ್ಯಕ್ರಮಗಳನ್ನು ಈಗಾಗಲೇ ಯಶಸ್ವಿಯಾಗಿ ಮಾಡಿzವೆ ಎಂದರು.
ಪ್ರಮುಖರಾದ ಆರ್.ಎನ್. ಮಂಜುನಾಥ್, ಕೆ.ಪಿ. ಶೆಟ್ಟಿ, ಪವಿತ್ರ ಕಾಮತ್, ಪ್ರೀತಿ ದೀಪಕ್ ಸಾರಥಿ, ಜಿ.ಎನ್.ಎನ್. ಮೂರ್ತಿ, ಸಂತೋಷ್, ರಂಗರಾಜು, ಮನೋಜ್, ಶಿಲ್ಪಾರಮೇಶ್ ಇದ್ದರು.