ಜಿಲ್ಲಾ ಸುದ್ದಿತಾಜಾ ಸುದ್ದಿ

ಖ್ಯಾತ ವಕೀಲ ಬಿಂದುಕುಮಾರ್ ನಿಧನ – ಸಂತಾಪ

Share Below Link

ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‌ನ ಮುಖ್ಯ ಜಿಲ್ಲಾ ಆಯುಕ್ತರು ಹಾಗೂ ವೀರಶೈವ ಲಿಂಗಾಯಿತ ಸಮಾಜದ ಗಣ್ಯರೂ ಆದ ಖ್ಯಾತ ನ್ಯಾಯವಾದಿ ಕೆ.ಪಿ. ಬಿಂದುಕುಮಾರ್ (೬೭) ಅವರು ನಿನ್ನ ಸಂಜೆ ಶಿವಮೂರ್ತಿ ಸರ್ಕಲ್ ಕೆನರಾ ಬ್ಯಾಂಕ್ ಕಟ್ಟಡದ ತಮ್ಮ ನಿವಾಸದಲ್ಲಿ ನಿಧನರಾದರು.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಅಪಾರ ಬಂಧುಬಳಗ ಅಗಲಿದ್ದಾರೆ.
ವಿದ್ಯಾರ್ಥಿ ದೆಸೆಯಲ್ಲೇ ಸಹ್ಯಾದ್ರಿ ಕಾಲೇಜ್ ವಿದ್ಯಾರ್ಥಿ ಸಂಘದ ನಾಯಕರಾಗಿ ವಿದ್ಯಾರ್ಥಿ ಪರ ಚಳುವಳಿಗಳಲ್ಲಿ ಹೋರಾಟ ಮಾಡಿ ಖ್ಯಾತಿ ಪಡೆದಿದ್ದ ಬಿಂದು ಕುಮಾರ್ ಅವರು, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಲ್ಲಿ ನಿರಂತರ ಸೇವೆ ಸಲ್ಲಿಸಿದ್ದರು.
ಶ್ರೀಯುತರ ನಿಧನಕ್ಕೆ ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಶಾರದಾ ಪೂರ್‍ಯಾನಾಯ್ಕ, ವಿಧಾನ ಪರಿಷತ್ ಸದಸ್ಯರಾದ ಡಾ| ಧನಂಜಯ ಸರ್ಜಿ, ಡಿ.ಎಸ್. ಅರುಣ್, ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಸ್. ಜ್ಯೋತಿ ಪ್ರಕಾಶ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ. ಮರಿಯಪ್ಪ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಹಿರಿಯ ವಕೀಲರಾದ ಎಸ್.ಜಿ. ಅಸೋಸಿಯೇಟ್ಸ್‌ನ ಗಿರಿಯಪ್ಪ, ಶೇಖರ್ ಕುಮಾರ್, ವೆಂಕಟೇಶ್, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಅ.ರಾಕೇಶ್ ಡಿಸೋಜ ಸೇರಿದಂತೆ ಇನ್ನಿತರ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.