ಜಿಲ್ಲಾ ಸುದ್ದಿತಾಜಾ ಸುದ್ದಿ

ಹಿಂದಿನವರ ಕೊಡುಗೆಗಳನ್ನು ಸ್ಮರಿಸಿ ಮುಂದಿನ ಸವಾಲುಗಳನ್ನು ಎದುರಿಸಿ….

Share Below Link

ಶಿವಮೊಗ್ಗ : ಹಿಂದಿನವರ ಕೊಡುಗೆಗಳನ್ನು ಸ್ಮರಿಸಿ ಮುಂದಿನ ಸವಾಲುಗಳನ್ನು ಎದುರಿ ಸಬೇಕು ಎಂದು ಮಾಜಿ ಶಾಸಕ, ಖ್ಯಾತ ಉದ್ಯಮಿ ಎಸ್.ರುದ್ರೇಗೌಡ ಹೇಳಿದರು.
ಅವರು ಇಂದು ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘವು ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮ ದಿನದ ಅಂಗವಾಗಿ ಏರ್ಪಡಿಸಿದ್ದ ಇಂಜಿನಿಯರ್ಸ ದಿನ ಮತ್ತು ಶಿವಮೊಗ್ಗ ಜಿ ಕೈಗಾರಿಕಾ ಪಿತಾಮಹ ಟಿ.ವಿ.ವೆಂಕಟಾಚಲ ಶಾಸ್ತ್ರೀ ಅವರ ಜನ್ಮ ಶತಮಾನೋ ತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸರ್ ಎಂ.ವಿ. ಕೊಡುಗೆಗಳ ಬಗ್ಗೆ ಎಷ್ಟು ಮಾತನಾಡಿದರೂ ಕಡಿ ಮೆಯೇ. ಅವರು ಶಿವಮೋಗ್ಗ ಜಿಗೆ ನೀಡಿದ ಕೊಡುಗೆ ಅಪಾರ. ಪೇಪರ ಮಿಲ್, ವಿಐಎಸ್ ಎಲ್, ಅದಿರು, ವುಡ್ ಚಾರ್ ಕೋಲ್, ಶ್ರೀಗಂಧದ ಎಣ್ಣೆ, ಸಾಬೂನು ಕಾರ್ಖಾನೆ ಹೀಗೆ ಹತ್ತು ಹಲವಾರು ಉದ್ದಿಮೆಗಳನ್ನು ಶಿವಮೊಗ್ಗ ಜಿಯಲ್ಲಿ ಸ್ಥಾಪಿಸಿ ಜಿಯ ಹೆಸರು ಜಗತಿಕ ಮಟ್ಟದಲ್ಲಿ ರಾರಾಜಿಸು ವಂತೆ ಮಾಡಿzರೆ ಎಂದು ಬಣ್ಣಿಸಿ ದರು.


ಜಗತಿಕ ಮನ್ನಣೆ ಗಳಿಸಿದ್ದ ವಿಐಎಸ್‌ಎಲ್ ಮತ್ತು ಎಂಪಿಎಂ ಉದ್ದಿಮೆಗಳು ಮುಚ್ಚಲು ಐಎಎಸ್ ಅಧಿಕಾರಿಗಳೇ ಕಾರಣ ಎಂದು ವಿಷಾದಿಸಿದ ಅವರು ಐಎಎಸ್ ಅಧಿಕಾರಿಗಳೆಂದರೆ ಸರ್ವಜ್ಞ ಎಂದು ನಾವು ಭಾವಿಸಿz ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಟಿ.ವಿ.ನಾರಾಯಣ ಶಾಸ್ತ್ರೀಗಳ ಕುರಿತು ಮಾತನಾಡಿ, ಅವರೊಬ್ಬ ದಕ್ಷ ಹಾಗೂ ಗಂಭೀರ ವ್ಯಕ್ತಿತ್ವದ ವರಾಗಿದ್ದರು. ಹೃದಯ ವೈಶಾಲ್ಯ ತೆಯ ಮೇರು ವ್ಯಕ್ತಿಯಾಗಿದ್ದರು. ಅಬೇಕ ಯುವ ಉದ್ದಿಮೆದಾರರಿಗೆ ಬೆನ್ನು ತಟ್ಟಿ ಹಲವಾರು ಉದ್ದಿಮೆಗಳ ಸ್ಥಾಪನೆಗೆ ಕಾರಣೀಕರ್ತರಾಗಿದ್ದರು ಎಂದರು.ಅವರು ಆರಂಭಿಸಿದ ಉದ್ದಿಮೆಗಳು ದೇಶಾದ್ಯಂತ ಗುಣ ಮಟ್ಟಕ್ಕೆ ಹೆಸರುವಾಸಿಯಾಗಿವೆ ಎಂದರು.
ಶಾಸ್ತ್ರೀಗಳು ಕೈಗಾರಿಕಾ ಬೆಳ ವಣಿಗೆಯಲ್ಲಿ ತೊಡಗಿಸಿಕೊಂಡಂತೆ ಧಾರ್ಮಿಕ ಕಾರ್‍ಯಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ನಂತರ ಅಗ್ನಿಹೋತ್ರಿಗಳೂ ಆದರು. ಯುವಕರನ್ನು ಪ್ರೋತ್ಸಾಹಿಸಿದ್ದಲ್ಲದೆ ಶಿವಮೊಗ್ಗದಲ್ಲಿ ಟೆನ್ನಿಸ್ ಆಟವನ್ನೂ ಸ್ಕೌಟ್ಸ್ ಆಂಡ್ ಗೈಡ್ಸ್ ನ್ನೂ ಪ್ರಸಿದ್ಧಿಗೊಳಿಸಿದ್ದರು ಎಂದ ಅವರು ಶಿವಮೊಗ್ಗದಲ್ಲಿ ಡಿಫೆನ್ಸ್ ಕ್ಲಸ್ಟರ್ ಆರಂಭಿಸಬೇಕೆನ್ನುವ ಕನಸು ಕಂಡಿದ್ದರು ಎಂದರು.
ಮೆಸರ್ಸ್ ಮೆಕ್ ವೈರ್ಸ್, ಶ್ರೀ ದುರ್ಗಾ ಅಲಾಯ್ಸ್, ಪ್ರಕಾಶ್ ಸೈನ್ ಸಿಸ್ಟಮ್ಸ್ ಗಳಿಗೆ ೨೦೨೫ ನೇ ಸಾಲಿನ ಕೈಗಾರಿಕಾ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ಭಾರತೀಯ ಸಣ್ಣ ಕೈಗಾರಿಕೆಗಳ ಮಹಾಸಂಘದ ಉಪಾಧ್ಯಕ್ಷ ಎಂ.ರಾಜು ಅವರಿಗೆ ವಿಶೇಷ ಗೌರವಾರ್ಪಣೆ ಸಲ್ಲಿಸಲಾಯಿತು.
ಪಯರ್ ಲೈಟ್ ಲೈನರ್ಸ್ ಪ್ರೈ.ಕಿ.ನ ಸಂತೋಷ್ ಬಿ., ಮಲ್ನಾಡ್ ಅಲಾಯ್ ಕ್ಯಾಸ್ಟಿಂಗ್ಸ್ ಪ್‌ಐ.ಕಿ.ನ ವಿಜಯ್ ಪಿ.ಕೆ. ಅವರಿಗೆ ಅತ್ಯುತ್ತಮ ಕಾರ್ಮಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಸಂಘದ ಅಧ್ಯಕ್ಷ ಬಿ.ಗೋಪಿ ನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಜಿ.ವಿಜಯ ಕುಮಾರ್, ಎ.ಎಂ.ಸುರೇಶ್, ಕೆ. ಎಸ್.ಕುಮಾರ್, ಆರ್. ಮನೋಹರ್ ಮೊದಲಾದ ಪದಾಧಿಕಾರಿಗಳಿದ್ದರು.