ಜಿಲ್ಲಾ ಸುದ್ದಿತಾಜಾ ಸುದ್ದಿ

ಪರಸ್ಪರ ಸಾಮರಸ್ಯ- ಸದ್ಗುಣ ಬೆಳೆಸಿಕೊಳ್ಳಲು ರಕ್ಷಾಬಂಧನ ಸಹಕಾರಿ: ಶಾಸಕ ವಿಜಯೇಂದ್ರ

Share Below Link

ಶಿಕಾರಿಪುರ: ಸಮಾಜದಲ್ಲಿ ಪರಸ್ಪರ ಸಾಮರಸ್ಯ ಹಾಗೂ ಸದ್ಗುಣಗಳನ್ನು ಬೆಳೆಸಿಕೊಳ್ಳಲು ರಕ್ಷಾ ಬಂಧನ ಆಚರಣೆಯಿಂದ ಸಾಧ್ಯ. ಸಂಬಂಧ ಸಂಪ್ರದಾಯಗಳು ನಶಿಸದಂತೆ ತಡೆಯಲು ಪ್ರತಿಯೊಬ್ಬರೂ ಹೆಚ್ಚಿನ ಗಮನಹರಿಸುವಂತೆ ಶಾಸಕ ಬಿ.ವೈ ವಿಜಯೇಂದ್ರ ಕರೆ ನೀಡಿದರು.
ಪಟ್ಟಣದ ರಥಬೀದಿಯಲ್ಲಿನ ಪ್ರಜಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿಯಲ್ಲಿ ನಡೆದ ರಕ್ಷಾಬಂಧನ, ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದ ಅವರು, ಬಾಲ್ಯದಲ್ಲಿ ಬೆಳಿಗ್ಗೆ ಎದ್ದ ಕೂಡಲೇ ತಂದೆ ತಾಯಿಗೆ ನಮಸ್ಕರಿಸಿ ಶಾಲೆಗೆ ಹೋಗುವ ಸಂಪ್ರದಾಯವನ್ನು ಹಿಂದೆ ಕಡ್ಡಾಯವಾಗಿ ಪಾಲಿಸುತ್ತಿದ್ದು ಇಂದು ಬೆಳಿಗ್ಗೆ ಎದ್ದ ಕೂಡಲೇ ಮೊಬೈಲ್ ವೀಕ್ಷಿಸುವ ಹವ್ಯಾಸ ಹೆಚ್ಚಾಗಿದೆ. ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳಿಗೆ ಉಪಯೋಗದ ಬದಲಿಗೆ ದುರುಪಯೋಗ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಮೊಬೈಲ್‌ನಿಂದಾಗಿ ಸಂಬಂಧಗಳು ಹಾಳಾಗುತ್ತಿದೆ ಎಂದು ವಿಷಾಧಿಸಿದರು.
ಸನಾತನ ಸಂಸ್ಕೃತಿ ಪರಂಪರೆ ಯಲ್ಲಿ ಹಬ್ಬ ಹರಿದಿನಗಳು ವಿಪರೀತವಿದ್ದು ಕಾಲಕಾಲಕ್ಕೆ ನಡೆಯುವ ಎಲ್ಲ ಹಬ್ಬಗಳಿಗೆ ಪ್ರತ್ಯೇಕ ಹಾಗೂ ವಿಶಿಷ್ಟ ಅರ್ಥವಿದೆ. ಆದರೆ ಇದೀಗ ಆಧುನಿಕತೆಯ ಭ್ರಮೆ ಯಲ್ಲಿ ಸಂಪ್ರದಾಯ ಪದ್ದತಿಗಳಿಂದ ದೂರವಾಗಿ ಪಾಶ್ಚಾತ್ಯರ ಅಂಧಾನು ಕರಣೆಯ ಭರದಲ್ಲಿ ಫಾದರ್‍ಸ್ ಡೇ, ಮದರ್ ಡೇ, ಟೀಚರ್ಸ ಡೇ, ಸಿಸ್ಟರ್ಸ ಡೇ ಆಚರಣೆ ಹೆಚ್ಚಾಗುತ್ತಿದೆ. ಆಧುನಿಕತೆಯ ನೆಪದಲ್ಲಿ ಮೊಬೈಲ್ ಮೂಲಕ ಹೊಸ ಹೊಸ ಸಂಪ್ರದಾಯವನ್ನು ಪಾಲಿಸಿ ಸನಾತನ ಶ್ರೇಷ್ಟ ಸಂಪ್ರದಾಯ ಹಬ್ಬ ಪದ್ದತಿಯಿಂದ ಕ್ರಮೇಣ ಯು ಪೀಳಿಗೆ ವಿಮುಖರಾಗುವ ಅಪಾಯ ಎದುರಾಗುತ್ತಿದೆ ಎಂದರು.
ಇಂದಿನ ಆಧುನಿಕ ಜಗತ್ತಿನಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗಿದ್ದು, ಪೂರಕವಾಗಿ ಸಮಸ್ಯೆ ಹೆಚ್ಚಾಗಿ ಸಂಬಂಧ ಸಂಪ್ರದಾಯಗಳು ಕ್ರಮೇಣ ನಶಿಸುವ ಅಪಾಯದ ಹಂತದಲ್ಲಿದೆ. ಈ ದಿಸೆಯಲ್ಲಿ ಎಲ್ಲ ಹಬ್ಬಹರಿದಿನಗಳನ್ನು ಆಚರಿಸಿ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕಾಗಿದೆ ಎಂದರು.
ಅವರು ರಕ್ಷಾ ಬಂಧನ ಸಮಾಜದಲ್ಲಿ ಪರಸ್ಪರ ಸಾಮರಸ್ಯ ಭಾವನೆ ಮೂಡಿಸಿ ಸೌಹಾರ್ಧತೆ ಯನ್ನು ಹೆಚ್ಚಿಸಲಿದೆ. ಎಲ್ಲರಲ್ಲಿ ಸಹೋದರತ್ವದ ಭಾವನೆಯ ಸಂದೇಶವನ್ನು ರಕ್ಷಾ ಬಂಧನ ನೀಡಲಿದೆ ಎಂದು ತಿಳಿಸಿದರು.
ಸ್ಥಳೀಯ ಪ್ರ. ಬ್ರ ವಿವಿಯ ಸ್ನೇಹಕ್ಕ ಹಾಗೂ ಅನಸೂಯಕ್ಕ ಸದೃಢ ಸಮಾಜಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿzರೆ. ಸಮಾಜವನ್ನು ಸರಿದಾರಿಗೆ ಕೊಂಡೊಯ್ಯಲು ಬದುಕನ್ನು ಮೀಸಲಿಟ್ಟಿzರೆ. ಪ್ರ.ಬ್ರ ಈ ವಿವಿ ಹಲವು ವರ್ಷಗಳಿಂದ ಸಮಾಜವನ್ನು ಸನ್ಮಾರ್ಗದಲ್ಲಿ ಸಾಗುವಂತೆ ಪ್ರೇರೇಪಿಸುತ್ತಿದೆ ಎಂದು ತಿಳಿಸಿದ ಅವರು, ಕ್ಷೇತ್ರದ ಶಾಸಕನಾಗಿ ಇದೇ ಪ್ರಥಮ ಬಾರಿಗೆ ವಿವಿಯಲ್ಲಿನ ಕಾರ್ಯಕ್ರಮಕ್ಕೆ ಆಗಮಿಸಿದ್ದು ಜನತೆಯ ನಂಬಿಕೆ ಪ್ರೀತಿ ವಿಶ್ವಾಸ ಅಭಿಮಾನವನ್ನು ಉಳಿಸಿಕೊಳ್ಳುವುದಾಗಿ ತಿಳಿಸಿದರು.
ರಾಜಯೋಗಿನಿ ಬಿ.ಕೆ ಅನುಸೂಯಕ್ಕ ಅವರು ಮಾತನಾಡಿ, ರಕ್ಷಾ ಬಂಧನ ಭಾವೈಕ್ಯತೆ ಪವಿತ್ರ ಸಂಬಂಧಗಳ ನೆನಪು ತಂದು ಕೊಡುವ ಜತೆಗೆ ನಮ್ಮನ್ನು ರಕ್ಷಿಸುತ್ತದೆ ನಕಾರಾತ್ಮಕತೆ ಯಿಂದ ರಕ್ಷಿಸಿಕೊಂಡು ಸಕಾರಾತ್ಮಕ ಚಿಂತನೆ ಮೂಲಕ ಪ್ರತಿಯೊಬ್ಬರೂ ಲೋಕಕ್ಕೆ ತಂದೆಯಾದ ಶಿವ ಪರಮಾತ್ಮನನ್ನು ಧ್ಯಾನಿಸಬೇಕು. ಶ್ರೀ ಕೃಷ್ಣನ ರೀತಿ ಸರ್ವ ಗುಣ ಸಂಪನ್ನ, ಮರ್ಯಾದಾ ಪುರುಷೋತ್ತಮನ ರೀತಿಯ ಆದರ್ಶ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಆಶೀರ್ವದಿಸಿದರು.
ಶಾಸಕರಾಗಿ ಇದೇ ಪ್ರಥಮ ಬಾರಿಗೆ ಪ್ರ.ಬ್ರ ವಿವಿಯಕ್ಕೆ ಆಗಮಿಸಿದ ಶಾಸಕ ವಿಜಯೇಂದ್ರ ಸಹಿತ ಗಣ್ಯರನ್ನು ಸನ್ಮಾನಿಸಲಾ ಯಿತು. ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ, ಮಂಜಚಾರ್, ವಿಜಯಕುಮಾರ್, ಸೌಭಾಗ್ಯಕ್ಕ ಮತ್ತಿತರರು ಉಪಸ್ಥಿತರಿದ್ದರು.
ಸ್ನೇಹಕ್ಕ ಪ್ರಾಸ್ಥಾವಿಕವಾಗಿ ಮಾತನಾಡಿ ನಿರೂಪಿಸಿ ವಂದಿಸಿದರು.