ಜಿಲ್ಲಾ ಸುದ್ದಿತಾಜಾ ಸುದ್ದಿ

ಕೇವಲ ಕನ್ನಡ ಹಾಡುಗಳನ್ನು ಹಾಡುವುದೇ ರಾಜ್ಯೋತ್ಸವವಲ್ಲ…

Share Below Link

ಭದ್ರಾವತಿ: ಕನ್ನಡ ರಾಜ್ಯೋತ್ಸವದಂದು ಕೇವಲ ಕನ್ನಡ ಹಾಡುಗಳನ್ನು ಹಾಡುವುದೆ ಕನ್ನಡ ರಾಜ್ಯೋತ್ಸವವಲ್ಲ. ಕನ್ನಡ ಭಾಷೆ ಸಾಹಿತ್ಯದ ಎ ಪ್ರಕಾರಗಳು ಅನುಷ್ಠಾನಗೊಳ್ಳಬೇಕು. ಅವುಗಳನ್ನು ನಿತ್ಯ ಬಳಕೆಯಲ್ಲಿ ಬಳಕೆ ಮಾಡಬೇಕು. ಆಗ ಕನ್ನಡ ಭಾಷೆ ಉಳಿದು ಬೆಳೆಯಲು ಸಾಧ್ಯ ಎಂದು ಜಿ ಕಸಾಪ ಅಧ್ಯಕ್ಷ ಡಿ. ಮಂಜು ನಾಥ್ ಅಭಿಪ್ರಾಯಿಸಿದರು.
ನಗರದ ಕಸಾಪ ವತಿಯಿಂದ ನ್ಯೂಟೌನ್ ಕಚೇರಿಯಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನುಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಪ್ರಾಥಮಿಕ ಶಾಲೆ ಯಿಂದಲೆ ಕನ್ನಡ ಕಲಿಸಬೇಕು. ಆದರೆ ಇಂದು ಇಂಗ್ಲೀಷ್ ವಾವ್ಯಮೋಹದಿಂದ ಖಾಸಗಿ ಶಾಲೆ ಸೇರುವ ಮಕ್ಕಳು ಅತ್ತ ಕನ್ನಡ ಶುಧ್ದವಾಗಿ ಮಾತನಾಡಲು ಕಲಿಯದೆ, ಇತ್ತ ಇಂಗ್ಲೀಷ್‌ನ್ನು ಸರಿಯಾದ ಮಾತನಾಡದಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿzರೆ ಎಂದರು.


ಹಿರಿಯೂರು ಎಸ್‌ಬಿಎಂ ಎಂಆರ್ ಶಾಲೆಯ ಶಿಕ್ಷಕ ಹರೋನ ಹಳ್ಳಿ ಸ್ವಾಮಿ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿ, ಇಂದು ಇಷ್ಟರ ಮಟ್ಟಿಗೆ ಕನ್ನಡ ಭಾಷೆಯು ಉಳಿದು ಬೆಳೆಯಲು ಕನ್ನಡ ಭಾಷೆಯ ಮಾತನಾಡುವವರಿಗಿಂತ ಅನ್ಯ ಮಾತೃ ಭಾಷೆಗಳನ್ನಾಡುವವ ಸಾಹಿತಿಗಳು, ಕವಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮದೆ ಆದ ಕೊಡುಗೆಗಳನ್ನು ಕನ್ನಡ ಭಾಷೆಗೆ ನೀಡಿzರೆ ಎಂಬುದು ಗಮನಿ ಬೇಕಾದ ಸಂಗತಿ ಎಂದರು.
ಕನ್ನಡ ಭಾಷೆಯು ಉಳಿಯ ಬೇಕು ಎಂದು ಎ ಸಭೆ ಸಮಾರಂಭದ ವೇದಿಕೆಗಳಲ್ಲಿ ಮಾತನಾಡುತ್ತೇವೆ. ಆದರೆ ಪ್ರಾಥಮಿಕ ಹಂತದ ಕನ್ನಡ ಶಾಲೆಗಳನ್ನು ಸರ್ಕಾರ ಮುಚ್ಚುತ್ತಿದೆ. ಮಕ್ಕಳು ಇಂಗ್ಲೀಷ್ ಶಾಲೆಗಳಿಗೆ ಸೇರಿಸುತ್ತಿzರೆ. ಸರ್ಕಾರಿ ನೌಕರರು ಖಾಸಗಿ ಶಾಲೆಗಳಿಗೆ ತಮ್ಮ ತಮ್ಮ ಮಕ್ಕಳನ್ನು ಸೇರಿಸಿ ವಿದ್ಯಾವಂತರ ನ್ನಾಗಿ ಮಾಡುತ್ತಿzರೆ. ಹೀಗಾದಲ್ಲಿ ಕನ್ನಡ ಭಾಷೆಯು ಬೆಳೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಆದರೆ ತನಗೆ ಮಕ್ಕಳಿಲ್ಲದ ಹುಚ್ಚಮ್ಮ ತಮ್ಮ ಜಮೀನನ್ನು ಕನ್ನಡ ಶಾಲೆಗೆ ನೀಡಿದ, ಕಿತ್ತಲೆ ಹಣ್ಣು ಮಾರಾಟ ಮಾಡಿ ಕನ್ನಡ ಶಾಲೆ ಕಟ್ಟಿದ ಅರೇಕಳ ಹಜಬ್ಬ, ಭಾಷಾವಾರು ಪ್ರಾಂತ್ಯ ರಚನೆ ಆದ ಮೇಲೆ ಕನ್ನಡ ನಾಡು ನುಡಿ ಭಾಷೆ ಉಳಿಯಲು ಕರ್ನಾಟಕ ರಾಜ್ಯ ಏಕಿಕರಣದ ನಿರ್ಮಾಣಕ್ಕೆ ಹೋರಾಟ ಮಾಡಿದ ಬಳ್ಳಾರಿಯ ರಂಜನ್ ಸಾಬ್ ರವರಂತಹವರು ಕನ್ನಡ ಭಾಷೆ ನಾಡು ನುಡಿ ಬೆಳೆಯಲು ಮುಖ್ಯ ಕಾರಣ ಕರ್ತರು ಎಂಬುದನ್ನು ಮರೆಯದೆ ಅವರ ಸೇವೆಯನ್ನು ಸದಾ ಸ್ಮರಿಸಬೇಕು ಎಂದರು.
ಕನ್ನಡ ನಾಡು ಕೇವಲ ಮೈಸೂರು ಪ್ರಾಂತ್ಯ ಅಥವ ಪ್ರಸ್ತುತ ಕನ್ನಡ ರಾಜ್ಯವಾಗಿರದೆ ಅರ್ಧ ಭಾರದ ದೇಶವನ್ನು ಕನ್ನಡ ನಾಡಿನ ರಾಜ ಮಹಾರಾಜರುಗಳು ಆಳಿದ್ದರು ಎಂಬುದು ಇತಿಹಾಸದ ಪುಟಗಳಿಂದ ನಮಗೆ ಗೋತ್ತಾಗು ತ್ತದೆ. ಆದರೆ ಇಂದಿನ ದುರ್ದೈವದ ಸಂಗತಿ ಎಂದರೆ ಇಂತಹ ಇತಿಹಾಸ ವನ್ನು ನಾವುಗಳು ಓದದರೆ ಓದಿದವರು ಅದನ್ನು ಹೇಳದೆ ಇರುವ ಕಾರಣ ಕನ್ನಡ ನಾಡಿನ ನೈಜ ಇತಿಹಾಸ ಎಲ್ಲರಿಗೂ ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಶ್ರೀವಿಜಯ ಕವಿರಾಜ ಮಾರ್ಗವನ್ನು ಕನ್ನಡ ಭಾಷೆಯಲ್ಲಿ ಬರೆದ ಸಂಧರ್ಭದಲ್ಲಿ ಹಿಂದಿ ಭಾಷೆ ಇನ್ನೂ ಹುಟ್ಟಿರಲಿಲ್ಲ. ಇಂಗ್ಲೀಷ್ ಭಾಷೆ ಇನ್ನೂ ಶೈವಾವಸ್ಥೆಯಲ್ಲಿತ್ತು. ಇದರ ಜೊತೆಗೆ ನಮ್ಮನ್ನಾಳಿತ ಬ್ರೀಟೀಷರು ಸಹ ಕನ್ನಡ ಭಾಷೆಗೆ ತಮ್ಮದೆ ಮಹತ್ತರವಾದ ಕೊಡುಗೆ ಗಳನ್ನು ನೀಡಿzರೆ. ಕಡ್ಡಾಯವಾಗಿ ಕನ್ನಡದಲ್ಲಿ ಅಧಿ ಸೂಚನೆಗಳು ಆದೇಶಗಳನ್ನು ಹೊರಡಿಸಿzರೆ. ಇವುಗಳೆಲ್ಲವೂ ಇತಿಹಾಸದ ಪುಟ ಗಳಲ್ಲಿ ದಾಖಲಾಗಿವೆ. ಆ ಮೂಲಕ ಅವರು ಕನ್ನಡ ಭಾಷೆಯನ್ನು ನಾಡಿನ ಅಧಿಕೃತ ಭಾಷೆಯನ್ನಾಗಿ ಮಾಡಿದ್ದರು ಎಂದರು.
ಇಂದಿನ ಮಕ್ಕಳು ದೊಡ್ಡವರ ಮಾತುಗಳನ್ನು ಕೇಳುವ ಪರಿಸ್ಥಿತಿ ಯಲ್ಲಿಲ್ಲ. ವಿಧ್ಯಾರ್ಥಿಗಳು, ಯುವ ಜನರಲ್ಲಿ ಕನ್ನಡ ಭಾಷೆಯ ಚರ್ಚೆ, ಸಂಹವನ, ಸಂಭಾಷಣೆ ಸೇರಿದಂತೆ ಇತರ ಯಾವ ಸಂಗತಿಗಳ ಬಗ್ಗೆಯೂ ಅವರಲ್ಲಿ ಆಸಕ್ತಿ ಹೊಂದಿಲ್ಲ. ಕಾರಣ ಅವರೆಲ್ಲರೂ ಮೊಬೈಲ್, ಟಿವಿಗಳಲ್ಲಿ ತಲ್ಲೀನರಾಗಿ zರೆ. ಇಂತಹ ಪರಿಸ್ಥಿತಿಯನ್ನು ಅವಲೋಕಿಸಿದಾಗ ಇಂದಿನ ತಲೆ ಮಾರಿಗೆ ಕನ್ನಡ ಭಾಷೆ ಕೊನೆ ಆಗಬಹುದೇ ಎಂಬ ಅತಂಕ ವ್ಯಕ್ತಪಡಿಸಿದರು.
ಬಿಇಒ ಎ.ಕೆ.ನಾಗೇಂದ್ರಪ್ಪ ಮುಖ್ಯ ಅಥಿತಿಗಳಾಗಿ ಆಗಮಿಸಿ ದ್ದರು. ಕೋಡ್ಲು ಯಜ್ಞಯ್ಯ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಸಾಂಸ್ಕ್ರತಿಕ ವೇದಿಕೆಯ ಅಧ್ಯಕ್ಷೆ ಎಂ.ಎಸ್.ಸುಧಾಮಣಿ, ಜನಪದ ಪರಿಷತ್ ಅಧ್ಯಕ್ಷ ರೇವಣಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪರಿಷತ್ ಮಹಿಳಾ ಸದಸ್ಯರು ಗಳು ಪ್ರಾರ್ಥನೆ ಮಾಡಿದರು. ಎಂ.ಇ.ಜಗದೀಶ್ ಸ್ವಾಗತಿಸಿದರು. ತಿಮ್ಮಪ್ಪ ಕಾರ್ಯಕ್ರಮ ನಿರುಪಣೆ ಮಾಡಿದರು. ನಾಗೋಜಿರಾವ್ ವಂದನಾರ್ಪಣೆ ಮಾಡಿದರು.