ಜಿಲ್ಲಾ ಸುದ್ದಿತಾಜಾ ಸುದ್ದಿದೇಶರಾಜಕೀಯ

ರಾಜ್ಯ ಬಿಜೆಪಿಗೆ ರಾಜಾಹುಲಿಯೇ ಮ್ಯಾನ್ ಆಫ್ ದಿ ಸೀಸನ್…

Share Below Link

ಶಿವಮೊಗ್ಗ: ಕೇಂದ್ರ ಬಿಜೆಪಿ ಹೈಕಮಾಂಡ್ ಪೂರ್ವನಿರ್ಧಾರದಂತೆ ಬಿ. ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಒತ್ತಾಯ ಪೂರ್ವಕವಾಗಿಯೇ ಕೆಳಗಿಳಿಸಿ, ಸಕ್ರೀಯ ರಾಜಕಾರಣದಿಂದ ದೂರ ಇಡಲಾಗಿತ್ತು. ಮೋದಿ-ಶಾ ಜೋಡಿಯ ಸೂಚನೆಯಂತೆ ಬಿಎಸ್‌ವೈ ಅವರು ಚುನಾವಣಾ ರಾಜಕೀಯದಲ್ಲಿ ಸಕ್ರಿಯರಾಗದಿದ್ದರೂ ಜನಮಾನಸದಲ್ಲಿ ಅವರ ವರ್ಚಸ್ಸು ಮಾತ್ರ ಇಂದಿಗೂ ಕಡಿಮೆಯಾಗದೆ ಉಳಿದಿದೆ. ಈ ಕಾರಣದಿಂದಲೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಉಳಿವಿಗಾಗಿ ಕೇಂದ್ರ ನಾಯಕತ್ವ ಅನುಭವಿ ರಾಜಕಾರಣಿ ಯಡಿಯೂರಪ್ಪನವರ ಮುಂದೆ ಕೊನೆಗೂ ಮಂಡಿಯೂರಿದೆ.


೨೦೨೪ರ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಅಭ್ಯರ್ಥಿಗಳ ಆಯ್ಕೆಯಾಗಿರಲಿ ಅಥವಾ ಚುನಾವಣೆ ಹೊಸ್ತಿಲಲ್ಲಿ ಪಕ್ಷದಲ್ಲಿ ತಲೆದೋರಿರುವ ಭಿನ್ನಾಭಿಪ್ರಾಯ ಶಮನಗೊಳಿಸುವುದಿರಲಿ, ೮೧ ವರ್ಷದ ತರುಣ ಹಾಗೂ ಉತ್ಸಾಹಿ ಯಡಿಯೂರಪ್ಪ ಅವರು ಬಿಜೆಪಿ ಹೈಕಮಾಂಡ್‌ಗೆ ಮ್ಯಾನ್ ಆಫ್ ದಿ ಸೀಸನ್ ಆಗಿ ಕಂಡುಬರುತ್ತಾರೆ.
ಈಗಾಗಲೇ ಒಲ್ಲದ ಮನಸ್ಸಿನಿಂದಲೇ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿರುವ ಬಿಎಸ್‌ವೈ ಅವರನ್ನು ಪ್ರಧಾನಿ ಮೋದಿ ಅವರೊಂದಿಗೆ ರಾಜ್ಯದಲ್ಲಿ ಪ್ರಮುಖ ವ್ಯಕ್ತಿಯನ್ನಾಗಿ ಬಿಜೆಪಿ ಕೇಂದ್ರ ನಾಯಕರು ಮಾಡಿzರೆ. ಒಂದು ಕಾಲದಲ್ಲಿ ಸ್ವಪಕ್ಷೀಯರಿಂದಲೇ ತೀವ್ರ ನಿರ್ಲಕ್ಷ್ಯಕ್ಕೊಳಗಾಗಿದ್ದ ಯಡಿಯೂರಪ್ಪ ಅವರಿಗೆ ಈಗ ಇಷ್ಟೊಂದು ಪ್ರಾಮುಖ್ಯತೆ ಯಾಕೆ ನೀಡುತ್ತಾರೆ ಎಂಬುದಕ್ಕೆ ಕಾರಣ ಬಿಎಸ್‌ವೈ ಅವರು ತಳಮಟ್ಟದಿಂದ ಪಕ್ಷವನ್ನು ಕಟ್ಟಿ ಬೆಳೆಸಿ, ನಾಲ್ಕು ಬಾರಿ ಮುಖ್ಯಮಂತ್ರಿ ಹುದ್ದೆಗೇರುವ ಮೂಲಕ ಜನಾಕರ್ಷಣೆ ಹೊಂದಿzರೆ. ವಿಶೇಷವಾಗಿ ರಾಜಕೀಯವಾಗಿ ಪ್ರಭಾವಿ ಲಿಂಗಾಯತ ಸಮುದಾಯದ ನಡುವೆ ಸಂಪರ್ಕ ಕೊಂಡಿಯಾಗಿದ್ದಾರೆ. ಈ ಕಾರಣಕ್ಕಾಗಿಯೇ ಯಡಿಯೂರಪ್ಪ ಫ್ಯಾಕ್ಟರ್ ಸದುಪಯೋಗಪಡಿಸಿ ಕೊಳ್ಳಲು ಪಕ್ಷ ಮುಂದಾಗಿರುವುದು ಸ್ಪಷ್ಪವಾಗಿದೆ.
ಕೆಲವು ರಾಜಕೀಯ ವೀಕ್ಷಕರು ಮತ್ತು ಬಿಜೆಪಿ ಆಂತರಿಕ ವಲಯದ ಪ್ರಕಾರ, ಕಳೆದ ವರ್ಷ ಮೇನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಅವರನ್ನು ಸಂಪೂರ್ಣವಾಗಿ ಬದಿಗೆ ತಳ್ಳಲು ಪಕ್ಷ ಪ್ರಯತ್ನಿಸಿತು. ಇದರಿಂದಾಗಿ ೨೨೪ ಸದಸ್ಯ ಬಲದ ಅಸೆಂಬ್ಲಿಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಾಂಗ್ರೆಸ್ ಕೆಳಗಿಳಿಸಿತ್ತು. ಮೋದಿ ಸೇರಿದಂತೆ ಘಟಾನುಘಟಿಗಳ ಪ್ರಚಾರದ ನಡುವೆಯೂ ಪಕ್ಷ ಕೇವಲ ೬೬ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು.
ಭ್ರಷ್ಟಾಚಾರ ಸಮಸ್ಯೆ, ಅಲ್ಪಸಂಖ್ಯಾತರ ಮತಗಳನ್ನು ಕಾಂಗ್ರೆಸ್ ಕ್ರೋಢೀಕರಿಸಿದ್ದು ಮತ್ತು ಲಿಂಗಾಯತರ ಒಂದು ವಿಭಾಗವು ಬಿಜೆಪಿಯಿಂದ ದೂರ ಸರಿದದ್ದು ಬಿಜೆಪಿ ಸೋಲಿಗೆ ಪ್ರಮುಖ ಅಂಶಗಳಾಗಿವೆ. ಇದರಿಂದ ಎಚ್ಚೆತ ಬಿಜೆಪಿ ಹೈಕಮಾಂಡ್ ಕಳೆದ ವರ್ಷದ ಅಂತ್ಯದಲ್ಲಿ ಬಿಎಸ್‌ವೈ ಪುತ್ರ ವಿಜಯೇಂದ್ರ ಅವರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ ಮತ್ತೊಮ್ಮೆ ಯಡಿಯೂರಪ್ಪ ಅವರನ್ನು ಮುನ್ನಲೆಗೆ ತಂದಿತು.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಹಿರಿಯ ಪುತ್ರ ಬಿವೈ ರಾಘವೇಂದ್ರ, ಬೆಂಗಳೂರು ಉತ್ತರದಲ್ಲಿ ಶೋಭಾ ಕರಂದ್ಲಾಜೆ, ದಾವಣಗೆರೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ, ಹಾವೇರಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಚಿತ್ರದುರ್ಗದಲ್ಲಿ ಗೋವಿಂದ ಎಂ ಕಾರಜೋಳ. ಸೇರಿದಂತೆ ಹಲವು ನಿಷ್ಠಾವಂತರಿಗೆ ಟಿಕೆಟ್ ಸಿಕ್ಕಿದ್ದರಿಂದ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಯಡಿಯೂರಪ್ಪನವರ ಛಾಪು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಆದರೆ, ಟಿಕೆಟ್ ಸಿಗದಿದ್ದ ಹಲವು ಆಕಾಂಕ್ಷಿಗಳಿಂದಲೂ ಯಡಿಯೂರಪ್ಪ ಮುಖಭಂಗ ಅನುಭವಿಸಬೇಕಾಯಿತು. ವಿಶೇಷವಾಗಿ ತುಮಕೂರಿನ ಜೆಸಿ ಮಾಧುಸ್ವಾಮಿ, ಹೊನ್ನಾಳಿಯ ಎಂಪಿ ರೇಣುಕಾಚಾರ್ಯ, ಚಿತ್ರದುರ್ಗದ ಎಸ್‌ಎ ರವೀಂದ್ರನಾಥ, ಕೊಪ್ಪಳದಿಂದ ಸಂಸದ ಕರಡಿ ಸಂಗಣ್ಣ, ಬೆಳಗಾವಿಯ ಕೆಲ ಮುಖಂಡರು ತಮ್ಮ ಉಮೇದುವಾರಿಕೆಗೆ ಬೆಂಬಲ ನೀಡದ ಹಿನ್ನೆಲೆಯಲ್ಲಿ ಅವರ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸುತ್ತಿದ್ದದ್ದು ಕಂಡುಬಂತು.
ಬೀದರ್ ಮತ್ತು ಚಿತ್ರದುರ್ಗದಂತಹ ಕ್ಷೇತ್ರಗಳಲ್ಲಿ ಪಕ್ಷವು ಭಿನ್ನಾಭಿಪ್ರಾಯವನ್ನು ಎದುರಿಸಿತು. ಬಿಎಸ್‌ವೈ ಸ್ವಕ್ಷೇತ್ರದಲ್ಲಿ ಪಕ್ಷದ ಹಿರಿಯ ಮುಖಂಡ ಹಾಗೂ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಬಂಡಾಯವೆದ್ದು, ಪುತ್ರ ಬಿ.ವೈ. ರಾಘವೇಂದ್ರ ಅಭ್ಯರ್ಥಿಯಾಗಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ರಾಷ್ಟ್ರಭಕ್ತ ಬಳಗ ಎಂದು ಘೋಷಿಸಿಕೊಂಡು ಮೋದಿ ಜಪ ಮಾಡುತ್ತಾ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿ ಸಲು ಮುಂದಾಗಿರುವುದು ಬಿಎಸ್‌ವೈಗೆ ಇರಿಸುಮುರಿಸು ಉಂಟಾಗಿದೆ. ಈಶ್ವರಪ್ಪನವರು ಹಾವೇರಿ ಕ್ಷೇತ್ರದಿಂದ ತಮ್ಮ ಪುತ್ರ ಕೆ.ಇ. ಕಾಂತೇಶ್‌ಗೆ ಟಿಕೆಟ್ ಸಿಗದಿರಲು ಯಡಿಯೂರಪ್ಪ ಮತ್ತವರ ಪುತ್ರರೇ ಕಾರಣ ಎಂದು ನೇರ ಆರೋಪ ಮಾಡಿzರೆ.


ಯಡಿಯೂರಪ್ಪ ಅವಶ್ಯಕತೆ ಬಿಜೆಪಿಗೆ ಹೆಚ್ಚಾಗಿ ಲಾಭದಾಯಕವಾಗಿದೆ, ಆದರೆ ಇದು ಕೆಲವೊಮ್ಮೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದು ಎರಡು ಅಂಚಿನ ಕತ್ತಿಯಂತೆ. ಪಕ್ಷದೊಳಗೆ ಮತ್ತು ಮತದಾರರಲ್ಲಿ, ವಿಶೇಷವಾಗಿ ಲಿಂಗಾಯತ ರಲ್ಲಿ ಅವರ ವರ್ಚಸ್ಸು ಅಲ್ಲಗಳೆಯು ವಂತಿಲ್ಲ. ಅದೇ ಸಮಯದಲ್ಲಿ, ಇದು ಸ್ವಜನಪಕ್ಷಪಾತ ಮತ್ತು ಪಕ್ಷಪಾತದ ಆರೋಪಗಳ ನಡುವೆ ಪಕ್ಷದೊಳಗೆ ಘರ್ಷಣೆ ಮತ್ತು ಬಿರುಕುಗಳಿಗೆ ಕಾರಣವಾಗಿದೆ.
ಯಡಿಯೂರಪ್ಪ ಅಂಶವು ನಿಸ್ಸಂಶಯವಾಗಿ, ಬಲವಾದ ನಾಯಕತ್ವದ ಅನಿವಾರ್ಯತೆ ಮತ್ತು ಜನಮನವನ್ನು ಸೂಚಿಸುತ್ತದೆ. ಆದರೆ, ಲಿಂಗಾಯತ ಮತಗಳ ಮೇಲೆ ಕೇಂದ್ರೀಕರಿಸುವುದರಿಂದ ಒಕ್ಕಲಿಗರಂತಹ ಇತರ ಸಮುದಾಯಗಳ ನಡುವೆ ತನ್ನ ಸಾಮಾಜಿಕ ನೆಲೆಯನ್ನು ವಿಸ್ತರಿಸುವುದನ್ನು ಸ್ವಲ್ಪಮಟ್ಟಿಗೆ ಸೀಮಿತಗೊಳಿಸಿದೆ ಎನ್ನಲಾಗಿದೆ.
ಕೆ.ಎಸ್. ಈಶ್ವರಪ್ಪ ಮತ್ತು ದಿವಂಗತ ಎಚ್.ಎನ್.ಅನಂತ್ ಕುಮಾರ್ ಅವರಂತಹ ಇತರ ನಾಯಕರ ಬೆಂಬಲದೊಂದಿಗೆ ಯಡಿಯೂರಪ್ಪ ಅವರು ಕರ್ನಾಟಕದಲ್ಲಿ ಬಿಜೆಪಿ ಕಟ್ಟುವಲ್ಲಿ ಪ್ರಮುಖರು. ವಿವಾದಗಳು ಮತ್ತು ಭ್ರಷ್ಟಾಚಾರ ಆರೋಪಗಳ ಹೊರತಾಗಿಯೂ ಅವರ ನಾಯಕತ್ವದಲ್ಲಿ ಪಕ್ಷವು ಸಾಧನೆ ಮಾಡಿದೆ. ಸತತ ಚುನಾವಣೆಗಳಲ್ಲಿ ಹಾಗೂ ಅವರನ್ನು ಬದಿಗೊತ್ತಿದಾಗಲೆ ಪ್ರದರ್ಶನ ದುರ್ಬಲವಾಗಿತ್ತು. ಇದನ್ನು ಮನಗಂಡ ಹೈಕಮಾಂಡ್ ಮತ್ತೆ ಅವರನ್ನು ಮುನ್ನಲೆಗೆ ತಂದಿದೆ.
ಯಡಿಯೂರಪ್ಪ ಅವರು ಜುಲೈ ೨೬, ೨೦೨೧ ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ೭೫ ವರ್ಷಕ್ಕಿಂತ ಮೇಲ್ಪಟ್ಟವರನ್ನು ದೂರವಿಡುವ ಬಿಜೆಪಿಯಲ್ಲಿ ಅಲಿಖಿತ ನಿಯಮದೊಂದಿಗೆ ಅವರು ಉನ್ನತ ಹುzಯಿಂದ ನಿರ್ಗಮಿಸಲು ವಯಸ್ಸನ್ನು ಪ್ರಾಥಮಿಕ ಅಂಶವೆಂದು ಉಖಿಸಲಾಗಿತ್ತು. ಅಲ್ಲದೆ, ವಿಧಾನಸಭೆ ಚುನಾವಣೆಗೂ ಮುನ್ನ ಹೊಸ ನಾಯಕತ್ವಕ್ಕೆ ದಾರಿ ಮಾಡಿಕೊಡಲು ಬಿಜೆಪಿ ಕೇಂದ್ರ ನಾಯಕತ್ವ ಬಯಸಿತ್ತು. ವಿಧಾನಸಭಾ ಚುನಾವಣೆಗೆ ಮುನ್ನ ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದರು. ೨೦೧೯ ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಅತ್ಯಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಒಟ್ಟು ೨೮ ಸ್ಥಾನಗಳ ಪೈಕಿ ೨೫ ಸ್ಥಾನಗಳನ್ನು ಗೆದ್ದುಕೊಂಡಿತ್ತು, ಪಕ್ಷದ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ವಿಜಯಶಾಲಿಯಾಗಿದ್ದರು.
ಬಿಜೆಪಿ ಅಂದುಕೊಂಡಷ್ಟು ೨೦೨೪ರ ಲೋಕಸಭಾ ಚುನಾವಣೆ ಗೆಲ್ಲುವುದು ಸುಲಭದ ಮಾತಲ್ಲ. ರಾಜ್ಯದಲ್ಲಿ ಬರೋಬ್ಬರಿ ೧೩೬ ಕ್ಷೇತ್ರಗಳಲ್ಲಿ ಭರ್ಜರಿ ಜಯಗಳಿಸುವ ಮೂಲಕ ಕಾಂಗ್ರೆಸ್ ನೇತೃತ್ವದ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದಿದೆ. ಚುನಾವಣಾ ಪೂರ್ವದಲ್ಲಿ ಕೊಟ್ಟ ಮಾತಿನಂತೆ ಕಾಂಗ್ರೆಸ್ ಗ್ಯಾರೆಂಟಿಗಳು ಈಗಾಗಲೇ ಜಾರಿಯಾಗಿವೆ. ಇದರ ನಡವೆ ಬಿಎಸ್‌ವೈ ಕುಟುಂಬದ ವಿರುದ್ಧ ಸ್ವಪಕ್ಷದ ಹಿರಿಯ ನಾಯಕರಿಂದಲೇ ಅಪಸ್ವರಗಳು ಕೇಳಿಬರುತ್ತಿವೆ. ಇವೆಲ್ಲದರ ನಡವೆ ರಾಜಾಹುಲಿ ಖ್ಯಾತಿಯ ಯಡಿಯೂರಪ್ಪನವರು ಪಕ್ಷದ ಮೇಲೆ ತಮ್ಮ ಹಿಡಿತ ಸಾಧಿಸಿದ್ದಾರೆ. ಲೋಕಸಭಾ ಚುನಾವಣಾ ಫಲಿತಾಂಶದ ಮೇಲೂ ತಮ್ಮ ಪ್ರಭಾವ ಬೀರುವ ಮೂಲಕ ಪ್ರಶ್ನಾತೀತ ನಾಯಕರಾಗುತ್ತಾರೆಯೇ ಕಾದು ನೋಡಬೇಕಿದೆ.
ಬಿಎಸ್‌ವೈ ವಿರುದ್ಧ ತೊಡೆ ತಟ್ಟಿ ಮೂಲೆ ಗುಂಪಾದರೇ….?!
ಪುತ್ರನಿಗೆ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಬಿಎಸ್‌ವೈ ಕುಟುಂಬದ ವಿರುದ್ಧ ಸೆಡ್ಡುಹೊಡೆದು, ಮೋದಿ – ಶಾ ಜಪ ಮಾಡುತ್ತಾ ರಾಷ್ಟ್ರ ಭಕ್ತ ಬಳಕವೊಂದನ್ನು ಕಟ್ಟಿಕೊಂಡಿರುವ ಮಾಜಿ ಡಿಸಿಎಂ ಈಶ್ವರಪ್ಪ ಅವರು ಶಿವಮೊಗ್ಗ ಕ್ಷೇತ್ರದಿಂದ ಬಿಎಸ್‌ವೈ ಪುತ್ರ ಹಾಗೂ ಹಾಲಿ ಸಂಸದ ಬಿವೈಆರ್ ವಿರುದ್ಧ ಸ್ವತಂತ್ರವಾಗಿ ಕಣಕ್ಕಿಳಿಯಲು ತಯಾರಿ ನಡೆಸಿದ್ದು, ತಮಗೆ ಮೂಲ ಬಿಜೆಪಿಗರು, ಸಂಘ ಪರಿವಾರ ಹಾಗೂ ಬಿಜೆಪಿ ಹೈಕಮಾಂಡ್‌ನ ಪರೋಕ್ಷ ಬೆಂಬಲವಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಮೊನ್ನೆ ರಾಜ್ಯಕ್ಕೆ ಭೇಟಿ ನೀಡಿದ್ದ ಗೃಹ ಸಚಿವ ಅಮಿತ್ ಶಾ ಅವರ ಕರೆಯ ಮೇರೆಗೆ ದಿಲ್ಲಿಗೆ ದೌಡಾಯಿಸಿದ್ದ ಈಶ್ವರಪ್ಪನವರಿಗೆ ಭಾರೀ ಮುಖಭಂಗವಾಗಿದೆ. ಈ ಮೂಲಕ ಬಿಜೆಪಿ ಹೈಕಮಾಂಡ್ ಟ್ರಂಪ್ ಕಾರ್ಡ್‌ನಂತಿರುವ ಬಿಎಸ್‌ವೈ ವಿರುದ್ಧ ಸೆಡ್ಡು ಹೊಡೆದಿರುವ ಈಶ್ವರಪ್ಪ ಅವರು ಪಕ್ಷದಲ್ಲಿ ಮೂಲೆಗುಂಪಾದರೆ ಎಂಬ ಅನುಮಾನಗಳು ಕಾಡತೊಡಗಿವೆ.