ಜಿಲ್ಲಾ ಸುದ್ದಿತಾಜಾ ಸುದ್ದಿ

ರಾಗಿಗುಡ್ಡ ಪ್ರಕರಣ: ದುಷ್ಕರ್ಮಿಗಳ ವಿರುದ್ದ ದೇಶದ್ರೋಹದ ಪ್ರಕರಣ ದಾಖಲಿಸಲು ಆಗ್ರಹ

Share Below Link

ಶಿವಮೊಗ್ಗ: ರಾಗಿಗುಡ್ಡ ಪ್ರಕರ ಣಕ್ಕೆ ಸಂಬಂಧಿಸಿದಂತೆ ಹಿಂದೂಗಳ ಮನೆ ಮೇಲೆ ಕಲ್ಲೆಸೆದು ಮಾರ ಣಾಂತಿಕ ಹಲ್ಲೆ ನಡೆಸಿರುವ ದುಷ್ಕ ರ್ಮಿಗಳನ್ನು ಬಂಧಿಸಿ ಅವರ ವಿರುದ್ಧ ದೇಶ ದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಇಂದು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯ ಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾ ಧಿಕಾರಿಗಳ ಮೂಲಕ ರಾಷ್ಟ್ರಪತಿ ಗಳಿಗೆ ಮನವಿ ಸಲ್ಲಿಸಿದರು.
ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ಸಂದರ್ಭ ದಲ್ಲಿ ಅಖಂಡ ಭಾರತದ ಚಿತ್ರದಲ್ಲಿ ಔರಂಗಜೇಬನ, ಟಿಪ್ಪುಸುಲ್ತಾನ್ ಚಿತ್ರದ ಪರಿಕಲ್ಪನೆಯ ಟೂಲ್‌ಕಿಟ್ ಸಿದ್ಧಪಡಿಸಲಾಗಿದೆ. ಏಕಾಏಕಿ ಹಿಂದೂ ಬಾಂಧವರ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದ ಲ್ಲದೆ ಮಾರಣಾಂತಿಕ ಹಲ್ಲೆ ಮಾಡಿ ದ್ದಾರೆ. ಕೆಲವು ಮುಸ್ಲಿಂ ಯುವಕರು ಮೆರವಣಿಗೆಯ ಉದ್ದಕ್ಕೂ ಕತ್ತಿಗಳನ್ನು ಪ್ರದರ್ಶಿಸಿದ್ದಾರೆ. ಹಿಂಸೆ ಯನ್ನು ಪ್ರಚೋದಿಸಿದ್ದಾರೆ. ದೊಡ್ಡ ದೊಡ್ಡ ಕಟೌಟ್‌ಗಳನ್ನು ಹಿಂದೂ ಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡುವಂತೆ ಪ್ರದರ್ಶನ ಮಾಡಿದ್ದಾರೆ ಎಂದು ದೂರಿದರು.
ನಗರದಲ್ಲಿ ಶಾಂತಿಯನ್ನು ಹಾಳು ಮಾಡಲು ಕೆಲವು ಮುಸ್ಲಿಂ ಸಂಘಟನೆಗಳ ಪೂರ್ವ ಯೋಜಿತ ಕೃತ್ಯ ಇದಾಗಿದೆ ಎಂದು ದೂರಿದ ಅವರು, ಪಿಎಫ್‌ಐ ಕಾರ್ಯ ಕರ್ತರು ಇದರಲ್ಲಿ ನೇರ ಭಾಗಿಯಾ ಗಿದ್ದಾರೆಂಬ ಅನುಮಾನವಿದೆ. ಅದ್ದರಿಂದ ಇಂತಹ ವ್ಯಕ್ತಿಗಳನ್ನು ಗುರುತಿಸಿ ಬಂಧಿಸಬೇಕು. ರಾಗಿ ಗುಡ್ಡದಲ್ಲಿ ಹಿಂದೂ ಬಾಂಧವರಿಗೆ ರಕ್ಷಣೆ ನೀಡಬೇಕು ಮತ್ತು ಅಮಾಯಕ ಹಿಂದೂಗಳ ಮೇಲೆ ಹಾಕಿರುವ ಮೊಕದ್ದಮೆ ಗಳನ್ನು ರದ್ದುಪಡಿಸಬೇಕು. ಘಟನೆಯಲ್ಲಿ ಹಾನಿಯಾದ ಹಿಂದೂ ಗಳ ಮನೆಗಳಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ವಿಹಿಂಪನ ಜಿಲ್ಲಾಧ್ಯಕ್ಷ ವಾಸುದೇವ್, ಕಾರ್‍ಯ ದರ್ಶಿ ನಾರಾಯಣ ಜಿ. ವರ್ಣೇ ಕರ್, ಬಜರಂಗದಳದ ವಡಿವೇಲು ರಾಘವನ್, ರಾಜೇಶ್ ಗೌಡ, ನಟ ರಾಜ್ ಭಾಗವತ್, ರಮೇಶ್ ಬಾಬು, ರಾಜು, ರಮೇಶ್ ಪರಿಸರ, ನಟ ರಾಜ್ ಸೇರಿದಂತೆ ಹಲವರಿದ್ದರು.