ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ವಿನೋಬನಗರ ಸರ್ಕಾರಿ ಶಾಲೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ – ಸೌಕರ್‍ಯ: ಅಧ್ಯಕ್ಷ ಬಾಲು

Share Below Link

ಶಿವಮೊಗ್ಗ : ವಿನೋಬನಗರದಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೧೦೦ರಷ್ಟು ಫಲಿತಾಂಶ ಬಂದಿದೆ ಎಂದು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಎಂ.ಜಿ. ಬಾಲು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ೧೯೯೪ರಲ್ಲಿ ಸ್ಥಾಪನೆಗೊಂಡ ಈ ಶಾಲೆ ನಗರದ ಅತ್ಯುತ್ತಮ ಶಾಲೆ ಎಂಬ ಖ್ಯಾತಿ ಪಡೆದಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ೨೦೨೨ರಲ್ಲಿ ಶೇ.೭೯ ಹಾಗೂ ೨೩ರಲ್ಲಿ ಶೇ.೮೫ರಷ್ಟು ಫಲಿತಾಂಶ ಬಂದಿದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕ ಜಗದೀಶ್ ಮಾತನಾಡಿ, ಶಾಲೆಗೆ ದಾಖಲಾಗುವ ಎ ಮಕ್ಕಳಿಗೆ ಪ್ರತಿವರ್ಷ ಶೈಕ್ಷಣಿಕ ಉಚಿತ ಕಿಟ್ ವಿತರಿಸಲಾಗುತ್ತಿದ್ದು, ಕಂಪ್ಯೂಟರ್ ಆಧಾರಿತ ಶಿಕ್ಷಣ ನೀಡಲಾಗುತ್ತಿದೆ. ವಿಶಾಲವಾದ, ಸುಸಜ್ಜಿತವಾದ, ಹೈಟೆಕ್ ಕೊಠಡಿಗಳಿದ್ದು, ಜೂನ್ ಆರಂಭದಲ್ಲಿ ವಿಶೇಷ ತರಗತಿಗಳು ಹಾಗೂ ಸಂಜೆ ವೇಳೆಯಲ್ಲಿ ಗುಂಪು ಅಧ್ಯಯನ, ಗುಣಮಟ್ಟದ ಬಿಸಿ ಯೂಟ, ವಿದ್ಯಾರ್ಥಿಗಳ ಸಮಸ್ಯೆ ಗಳಿಗೆ ಪರಿಹಾರ ಸೂಚಿಸುವುದು ಹೀಗೆ ಹಲವಾರು ಚಟುವಟಿಕೆ ಗಳನ್ನು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗುತ್ತಿದೆ. ನುರಿತ ಹಾಗೂ ಅನುಭವಿ ಶಿಕ್ಷಕರ ತಂಡ ಶಾಲೆಯಲ್ಲಿದೆ ಎಂದರು.
೨೦೨೧ರಿಂದ ಇಲ್ಲಿಯವರೆಗೂ ೩ ವರ್ಷದ ಅವಧಿಯಲ್ಲಿ ಸುಸಜ್ಜಿತ ವಾದ ರಂಗಮಂದಿರ, ಆರು ಹೈಟೆಕ್ ಕೊಠಡಿ, ಒಂದು ಸಭಾಂಗಣ ನಿರ್ಮಾಣವಾಗಿದ್ದು, ಇದಕ್ಕೆ ಮೂಲಕಾರಣ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರು ಎಂದರು.
ಶಾಲೆ ಇಷ್ಟೆ ಅಭಿವೃದ್ಧಿ, ಉತ್ತಮ ಫಲಿತಾಂಶ ಬರಲು ಡಿಡಿಪಿಐ, ಡಿ.ಇ.ಓ., ಶಾಲೆಯ ಮುಖ್ಯ ಶಿಕ್ಷಕರು, ಸಿಬ್ಬಂದಿ ವರ್ಗ ದವರು ಹಾಗೂ ಎಸ್‌ಡಿಎಂಸಿ ಸದಸ್ಯರು, ಶಾಲೆಯ ಸುತ್ತಮುತ್ತಿಲಿನ ಸಂಘ ಸಂಸ್ಥೆಗಳು ಕಾರಣವಾಗಿರುವುದರಿಂದ ಅವರೆಲ್ಲರಿಗೂ ಅಭಿನಂದನೆಗಳು ಎಂದ ಅವರು, ಆಂಗ್ಲ ಮಾಧ್ಯಮ ಆರಂಭಿಸುವ ಉದ್ದೇಶವಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಜಗದೀಶ್, ರಮೇಶ್, ಕವಿತ, ವಿನೋದ್, ಶರಣ್, ಸಂತು, ಶುಭಂ ಹೊಟೇಲ್ ಮಾಲೀಕ ಚಂದ್ರಹಾಸ್ ಇನ್ನಿತರರು ಉಪಸ್ಥಿತರಿದ್ದರು.

This image has an empty alt attribute; its file name is Arya-coll.gif