ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಿ : ಡಿಸಿ
ಶಿವಮೊಗ್ಗ : ಜಿಯಲ್ಲಿನ ವಿದ್ಯಾವಂತ ಯುವಕರು ಶ್ರಮ ದಾಯಕ ಕೆಲಸಗಳಿಂದ ವಿಮುಖ ರಾಗಿ ಸರಳ, ಸುಲಭದ ಕೆಲಸಗಳಿಗೆ ಆಸಕ್ತಿ ತೋರುತ್ತಿರುವುದು ಹಾಗೂ ಅಲ್ಪಾವಧಿಯಲ್ಲಿ ಕೆಲಸ ಮುಗಿಸುವ ಧಾವಂತದಲ್ಲಿರುವುದು ಆತಂಕಕಾರಿ ವಿಷಯ ಎಂದು ಜಿಧಿಕಾರಿ ಡಾ|| ಆರ್.ಸೆಲ್ವಮಣಿ ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿ ಕೌಶಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡು ತ್ತಿದ್ದರು. ಸರ್ಕಾರವು ವಿವಿಧ ಇಲಾ ಖೆಗಳ ಮೂಲಕ ನಿರುದ್ಯೋಗಿ ಯುವಕರಿಗೆ ಕೌಶಲ್ಯಾಧಾರಿತ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ತರಬೇತಿ ಪಡೆ ದವರು ತಮ್ಮ ಆಸಕ್ತಿಯ ಯಾವು ದೇ ಉದ್ಯೋಗದಲ್ಲಿ ತೊಡಗಿಸಿ ಕೊಂಡು ಭವಿಷ್ಯದ ಬದುಕನ್ನು ಉಜ್ವಲಗೊಳಿಸಿಕೊಳ್ಳಲು ಮುಂದಾ ಗಬೇಕೆಂದವರು ನುಡಿದರು.
ಕಟ್ಟಡ ನಿರ್ಮಾಣ, ಮರ ಗೆಲಸ, ಬಣ್ಣ ಹಚ್ಚುವ, ಕೆಲವು ಕೈಗಾರಿಕೆಗಳು, ಕೌಶಲ್ಯಾಧಾರಿತ ಸೇವೆಗಳು ಮುಂತಾದವುಗಳಲ್ಲಿ ಸ್ಥಳೀಯ ಕಾರ್ಮಿಕರು ಸಕ್ರಿಯ ವಾಗಿ ತೊಡಗಿಸಿಕೊಳ್ಳದಿರುವುದರಿ ಂದ ಹೊರರಾಜ್ಯಗಳ ನಿರುದ್ಯೋಗಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಜಿಗೆ ಬಂದು ಹಗಲಿರುಳು ಕಾರ್‍ಯ ನಿರತರಾಗುತ್ತಿzರೆ. ಅಲ್ಲದೇ ಕಡಿಮೆ ವೇತನಕ್ಕೆ ಹೆಚ್ಚಿನ ಅವಧಿಯ ನೈಪುಣ್ಯದ ಕೆಲಸ ಮಾಡುತ್ತಿzರೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಸ್ಥಳೀಯ ಯುವಕರಿಗೆ ಉದ್ಯೋ ಗಾವಕಾಶಗಳು ಲಭ್ಯವಾಗದಿರುವ ಆತಂಕವಿದೆ ಎಂದ ಅವರು, ಸ್ಥಳೀ ಯ ಯುವಕರ ನಿರೀಕ್ಷೆಗೆ ತಕ್ಕಂತೆ ಕೌಶಲ್ಯಾಧಾರಿತ ತರಬೇತಿಗಳನ್ನು ಆಯೋಜಿಸಿ, ತರಬೇತಿ ನೀಡಿದ ನಂತರ ಉದ್ಯೋಗಾವಕಾಶಗಳನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು. ೨೦೦೦ಇಸ್ವಿಯ ನಂತರ ಜನಿಸಿದ ಪೀಳಿಗೆಯವರು ಕೌಶಲ್ಯಾ ಧಾರಿತ ಮಾತ್ರವಲ್ಲ ತಮ್ಮದೇ ಹೊಲದಲ್ಲಿ ಕೆಲಸ ನಿರ್ವಹಿಸಲು ಉತ್ಸುಕರಾಗದೇ ವಿಲಾಸದ ಜೀವನ ನಡೆಸಲು ಹಪಹಪಿಸುತ್ತಿರುವ ರೀತಿ ಉತ್ತಮ ಬೆಳವಣಿಗೆಯಲ್ಲ. ಇತ್ತೀ ಚಿನ ಯುವಪೀಳಿಗೆಯವರು ಕೆಲಸ-ಕಾರ್ಯಗಳಲ್ಲಿ ತೊಡಗಿಸಿ ಕೊಳ್ಳದಿರುವಲ್ಲಿ ಇರಬಹುದಾದ ಪ್ರಮುಖ ಕಾರಣಗಳೇನು? ಸಕ್ರಿ ಯವಾಗಿ ತೊಡಗಿಸಿಕೊಳ್ಳುವಂತೆ ಮಾಡಲು ಇರುವ ಸಾಧ್ಯತೆಗಳ ಬಗ್ಗೆ ತುರ್ತು ಸಮೀಕ್ಷೆ ನಡೆಸಿ, ಪರ್‍ಯಾಯ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು.
ಸ್ಥಳೀಯರ ನಿರುದ್ಯೋಗ ಸಮಸ್ಯೆಗೆ ವಲಸೆ ಕಾರ್ಮಿಕರು ಒಂ ದೆಡೆಯಾದರೆ, ಅತ್ಯಾಧುನಿಕ ಯಂ ತ್ರಗಳ ಬಳಕೆಯೂ ಕಾರಣವಾಗಿರಬಹುದು ಎಂದ ಅವರು, ವಿವಿಧ ಕೌಶಲ್ಯ ತರಬೇತಿ ಪಡೆದು ಸ್ವಯಂ ಉದ್ಯೋಗಾವಕಾ ಶಕ್ಕಾಗಿ ಬ್ಯಾಂಕುಗಳಿಗೆ ಸಾಲಸೌಲ ಭ್ಯಕ್ಕಾಗಿ ಅರ್ಜಿ ಸಲ್ಲಿಸುತ್ತಿರುವ ಫಲಾನುಭವಿಗಳಿಗೆ ಹೆಚ್ಚಿನ ಅಲೆ ದಾಡಿಸದೇ ಸೌಲಭ್ಯ ದೊರಕಿಸಿ ಕೊಡಬೇಕು. ಸಾಲ ನೀಡುವಲ್ಲಿ ಅಭ್ಯರ್ಥಿಗಳು ನೀಡುವ ದಾಖಲೆ ಗಳಲ್ಲಿ ಸಡಿಲಿಕೆ ಇರಲಿ. ಈ ಬಗ್ಗೆ ಜಿ ಮಾರ್ಗ ದರ್ಶಿ ಬ್ಯಾಂಕ್‌ನ ವ್ಯವಸ್ಥಾಪಕರು ಗಮನಹರಿಸಬೇಕೆ ಂದವರು ನುಡಿದರು.
ಅವಕಾಶವಿದ್ದಲ್ಲಿ ಗ್ರಾಮೀಣ ಮಹಿಳೆಯರು, ಕೃಷಿಕರು, ಹೈನೊ ದ್ಯಮಿಗಳು ಜೇನುಕೃಷಿಯನ್ನು ಮಾಡುವಂತೆ ಪ್ರೇರೇಪಿಸಿ. ಜೇನು ಪೆಟ್ಟಿಗೆಯನ್ನು ಸ್ವಸಹಾಯ ಗುಂಪುಗಳ ಮಹಿಳೆಯರೆ ಕಡಿಮೆ ವೆಚ್ಚದಲ್ಲಿ ತಯಾರಿಸಿ, ಮಾರುಕಟ್ಟೆ ಯಲ್ಲಿ ಸರಳವಾಗಿ ದೊರಕುವಂತೆ ತರಬೇತಿ ನೀಡಿ. ಇದರಿಂದಾಗಿ ತೋಟಗಾರಿಕೆ ಬೆಳೆಯಲ್ಲಿ ಹೆಚ್ಚಿನ ಇಳುವರಿ ಹಾಗೂ ಲಾಭವನ್ನು ಕಾಣಬಹುದಾಗಿದೆ ಎಂದರು.
ಸ್ಥಳೀಯ ಸಂಸ್ಥೆಗಳೂ ಕೂಡ ತಮ್ಮ ಕಾರ್‍ಯಕ್ಷೇತ್ರದ ವ್ಯಾಪ್ತಿಯಲ್ಲಿ ಆಯೋಜಿಸುವ ತರಬೇತಿಗಳು ಯುವಕ ಕೇಂದ್ರೀತವಾಗಿದ್ದು, ಉದ್ಯೋಗಾವಕಾಶ ಒದಗಿ ಸುವಲ್ಲಿ ಕ್ರಮ ಕೈಗೊಳ್ಳಬೇಕು. ಉದ್ಯೋ ಗಾವಕಾಶಗಳನ್ನು ಕಲ್ಪಿಸುವ ಹೊಸ ಹೊಸ ಕಾರ್‍ಯಕ್ರಮಗಳನ್ನು ರೂಪಿಸಿ, ಅನುಷ್ಠಾ ನಕ್ಕೆ ಯತ್ನಸುವಂತೆ ಅವರು ಸಲಹೆ ನೀಡಿದರು.
ಸಭೆಯಲ್ಲಿ ಜಿ ಯೋಜನಾ ನಿರ್ದೇಶಕ ಮೂಕಪ್ಪ ಕರಭೀಮಣ್ಣ ನವರ್, ಜಿ ಕೌಶಲ್ಯಾಭಿವೃದ್ಧಿ ಅಧಿಕಾರಿ ಸುರೇಶ್ ಸೇರಿದಂತೆ ವಿವಿಧ ಇಲಾಖೆಗಳ ಜಿ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.