ಮೂಲಭೂತ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ
ಶಿವಮೊಗ್ಗ: ಮೂಲಭೂತ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಭದ್ರಾವತಿ ತಾಲೂಕಿನ ಕನಸಿನ ಕಟ್ಟೆ ಗ್ರಾಮಸ್ಥರು ಜಿಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಭದ್ರಾವತಿ ತಾಲೂಕು ಕನಸಿನಕಟ್ಟೆ ಗ್ರಾಮಕ್ಕೆ ಹೊಂದಿಕೊಂಡಿರುವ ಜಂಬರಘಟ್ಟ ಗ್ರಾಮದ ಸ.ನಂ. ೭೬ರಲ್ಲಿ ತೊಂಭತ್ತು ವರ್ಷಗಳ ಹಳೆ ಯ ಸ್ಮಶಾನವಿದೆ. ಇಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರು ಮತ್ತು ಭೂರಹಿತ ಜನರು ವಾಸಿಸು ತ್ತಿದ್ದು, ಮರಣ ಹೊಂದಿದ ನಂತರ ಅಂತ್ಯಸಂಸ್ಕಾರಕ್ಕೆ ಸ್ಮಶಾನದ ಅವ ಶ್ಯಕತೆಯಿದೆ. ಅಕ್ರಮವಾಗಿ ಪಹ ಣಿ ಖಾತೆ ಮಾಡಿಸಿಕೊಂಡಿರುವ ವ್ಯಕ್ತಿಯೋರ್ವರು ಸ್ಮಶಾನದ ಜಗ ತಮ್ಮದೆಂದು ವಾದಿಸಿ ಅಂತ್ಯ ಸಂ ಸ್ಕಾರಕ್ಕೆ ಅವಕಾಶ ಮಾಡಿಕೊಡದೆ ತಕರಾರು ಮಾಡುತ್ತಿzರೆ ಎಂದು ಆರೋಪಿಸಿದರು.
ಆದರೆ ಹಿಂದಿನಿಂದಲೂ ಗ್ರಾ ಮಸ್ಥರು ಅದೇ ಜಗದಲ್ಲಿ ಅಂತ್ಯ ಸಂಸ್ಕಾರ ಮಾಡಿಕೊಂಡು ಬರುತ್ತಿ ದ್ದು, ಈಗ ಆ ವ್ಯಕ್ತಿಯಿಂದ ತೊಂ ದರೆ ಅನುಭವಿಸುವಂತಾಗಿದೆ. ಆದ್ದರಿಂದ ಸರಿ ಜಮೀನನ್ನು ಸ್ಮಶಾ ನಕ್ಕೆ ಮೀಸಲಿಟ್ಟು ಖಾತೆ ಮಾಡಿ ಕೊಡಬೇಕು ಎಂದು ಆಗ್ರಹಿಸಿ ದರು.
ವಿದ್ಯಾರ್ಥಿಗಳು ಮತ್ತು ಗ್ರಾ ಮದ ಕೂಲಿಕಾರರಿಗೆ ಓಡಾಡಲು ಬಸ್ ವ್ಯವಸ್ಥೆ ಇರುವುದಿಲ್ಲ. ನ್ಯಾ ಯಬೆಲೆ ಅಂಗಡಿಯಲ್ಲಿ ರೇಷನ್ ತೆಗೆದುಕೊಳ್ಳಲು ಮೊಬೈಲ್ ನೆಟ್ ವರ್ಕ್ ಸಮಸ್ಯೆಯಿದೆ. ಕೂಡಲೇ ಈ ಎ ಸಮಸ್ಯೆಗಳನ್ನು ಪರಿಹರಿ ಸಬೇಕೆಂದು ಕನಸಿನಕಟ್ಟೆ ಗ್ರಾಮ ಸ್ಥರು ಒತ್ತಾಯಿಸಿzರೆ.
ಈ ಸಂದರ್ಭದಲ್ಲಿ ಶ್ರೀನಿವಾಸ ರೆಡ್ಡಿ, ಕರಿಬಸಯ್ಯ, ರಾಜು, ಶ್ರೀನಿವಾಸ, ಮಂಜುನಾಥ, ನಾಗರಾಜ್ ಕೃಷ್ಣಪ್ಪ, ಗಂಗಮ್ಮ, ಶಿವನಗೌಡ, ಶೈಲಾ, ಶಶಿಕಲಾ, ರೇಣುಕಮ್ಮ ಸೇರಿದಂತೆ ಕನಸಿನಕಟ್ಟೆ ಗ್ರಾಮಸ್ಥರು ಮೊದಲಾದವರು ಹಾಜರಿದ್ದರು.