ಇತರೆಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಅಕ್ರಮ ಮರಳು ಮಾರಾಟ ದಂಧೆ ನಿಯಂತ್ರಣಕ್ಕೆ ಆಗ್ರಹಿಸಿ ಪ್ರತಿಭಟನೆ…

Share Below Link

ಶಿವಮೊಗ್ಗ: ಶಿವಮೊಗ್ಗ ತಾಲ್ಲೂಕಿ ನಲ್ಲಿ ಅಕ್ರಮ ಮರಳು ಮಾರಾಟ ದಂಧೆ ನಡೆಯುತ್ತಿರು ವುದನ್ನು ಖಂಡಿಸಿ ಅಗತ್ಯ ಕ್ರಮ ಕ್ಕಾಗಿ ಆಗ್ರಹಿಸಿ ಇಂದು ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆ ಜಿಲ್ಲಾ ಧಿಕಾರಿಗಳ ಕಚೇರಿ ಎದುರು ಪ್ರತಿ ಭಟನೆ ನಡೆಸಿ ಮನವಿ ಸಲ್ಲಿಸಿತು.
ತಾಲ್ಲೂಕಿನ ಹಾಡೋನಹಳ್ಳಿ ಕೆಳಗಿನಹನಸವಾಡಿ, ಗುರುಪುರ, ಪಿಳ್ಳಂಗೆರೆ, ಮಂಡಗದ್ದೆ, ಸಕ್ರೆ ಬೈಲು, ನಿಂಬೆಗುಂದಿ, ನಾಗ ಸಮುದ್ರ, ಹೊಳೆ ಹೊನ್ನೂರು, ತೀರ್ಥಹಳ್ಳಿ ತಾಲ್ಲೂಕಿನ ಮಾಳೂರು, ಆರಗ ಮುಂತಾದ ಅನೇಕ ಕಡೆಗಳಲ್ಲಿ ಮರಳು ಮಾರಾಟ ಅಕ್ರಮ ದಂಧೆ ನಡೆಯುತ್ತಿದೆ. ರಾತ್ರೋರಾತ್ರಿ ಹಿಟಾಚಿ, ಜೆಸಿಬಿ ಇವುಗಳನ್ನು ಒಳಗೆ ಇಳಿಸಿ ಲಾರಿಗಳ ಮೂಲಕ ದಂಧೆಕೋರರು ಅಪಾರ ಪ್ರಮಾಣ ದಲ್ಲಿ ಮರಳನ್ನು ಕೊಳ್ಳೆಹೊಡೆ ಯುತ್ತಿದ್ದಾರೆ ಎಂದು ದೂರಿದರು.
ಮರಳು ಮಾರಾಟ ದಂಧೆ ನಡೆಯುತ್ತಿದ್ದರೂ ಕೂಡ ಗಣಿ ಮತ್ತು ಭೂ ವಿಜನ ಇಲಾಖೆ, ಕಂದಾಯ ಇಲಾಖೆ ಕಣ್ಣುಮುಚ್ಚಿ ಕುಳಿತಿದೆ. ಅಕ್ರಮ ಮರಳು ದಂಧೆ ನಿಲ್ಲಿಸಬೇಕು. ಮರಳು ಟೆಂಡ ರ್‌ನ್ನು ಹರಾಜು ಹಾಕಬೇಕು. ನಾಗರೀಕರಿಗೆ ಸುಲಭ ದರದಲ್ಲಿ ಮರಳು ಸಿಗುವಂತಾಗ ಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸ ಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ರಕ್ಷಣಾ ವೇದಿಕೆಯ ಅಧ್ಯಕ್ಷ ವಾಟಾಳ್ ಮಂಜುನಾಥ್, ಪ್ರಮುಖರಾದ ನಿತಿನ್‌ರೆಡ್ಡಿ, ಲೋಕೇಶ್, ಪ್ರ್ಯಾಕ್ಲಿನ್ ಸಾಲೋಮನ್, ರಾಘವೇಂದ್ರ ಸೇರಿದಂತೆ ಹಲವರಿದ್ದರು.