ಜಿಲ್ಲಾ ಸುದ್ದಿತಾಜಾ ಸುದ್ದಿ

ಪ್ರವೇಶ ನಿರಾಕರಣೆ ವಿರೋಧಿಸಿ ಶಾಸಕ ಶಾಂತನಗೌಡ ಮತ್ತು ವಿದ್ಯಾರ್ಥಿಗಳಿಂದ ಪ್ರತಿಭಟನೆ

Share Below Link

ಹೊನ್ನಾಳಿ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದಸ್ನಾಥಕೋತ್ತರ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ದ್ವಿತೀಯ ವರ್ಷಕ್ಕೆ ಪ್ರವೇಶ ನಿರಾಕರಿಸಿರುವುದನ್ನು ವಿರೋಧಿಸಿ ಶಾಸಕ ಡಿಜೆ ಶಾಂತನಗೌಡ ಮತ್ತು ವಿದ್ಯಾರ್ಥಿಗಳು ಇಂದು ಕಾಲೇಜಿನ ಮುಂಭಾಗದಲ್ಲಿ ಧರಣಿ ನಡೆಸುವು ದಾಗಿ ವಿದ್ಯಾರ್ಥಿ ಮುಖಂಡ ತಾಲೂಕು ಎನ್‌ಎಸ್‌ಯುಐ ಅಧ್ಯಕ್ಷ ಮನೋಜ್ ವಾಲಜ್ಜಿ ಅವರು ತಿಳಿಸಿದರು.
ಇಂದು ಹೊನ್ನಾಳಿಯ ಸಕಾ ರಿ ಪ್ರಥಮ ದರ್ಜೆ ಕಾಲೇಜಿಗೆ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯ ಕ್ರಮ ಉದ್ಘಾಟನೆಗೆ ಆಗಮಿಸಿದ್ದ ಶಾಸಕ ಡಿ.ಜಿ ಶಾಂತನಗೌಡ ಅವ ರನ್ನು ೬೦ ಕ್ಕೂ ಹೆಚ್ಚು ವಿದ್ಯಾರ್ಥಿ ಗಳು ಮುತ್ತಿಗೆ ಹಾಕಿ ನಮಗೆ ದ್ವಿತೀಯ ವರ್ಷದ ಪ್ರವೇಶ ಕಲ್ಪಿಸಿ ಕೊಡಿ ಇಲ್ಲವಾದರೆ ವಿಷ ಕೊಡಿ ಎಂದು ಹೇಳಿದರು.


ಶಾಸಕರು ಈ ಸಂಬಂಧವಾಗಿ ನಾನು ಈಗಾಗಲೇ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರನ್ನು ಭೇಟಿ ಮಾಡಿದ್ದು ಆದರೆ ವಿದ್ಯಾ ರ್ಥಿಗಳಿಗೆ ಇಂದಿನ ಶಾಸಕರ ಅವಧಿಯಲ್ಲಿ ಅನ್ಯಾಯವಾಗಿದೆ ಎಂಬು ದು ತಿಳಿದು ಬಂದಿದೆ ಹಣಕಾಸು ಇಲಾಖೆಯಾಗಲಿ ಉನ್ನತ ಶಿಕ್ಷಣ ಇಲಾಖೆಯಾಗಲಿ ಅಥವಾ ವಿವಿ ಯಾಗಲಿ ಯಾವುದೇ ರೀತಿಯ ಪದವಿಗೆ ಹೊನ್ನಾಳಿಯಲ್ಲಿ ಆರಂ ಭಿಸಲು ಅನುಮತಿ ನೀಡದಿರು ವುದು ಸ್ಪಸ್ಟ ಎಂದು ತಿಳಿದುಬಂದಿದೆ ಎಂದು ತಿಳಿಸಿದರು ಅದಕ್ಕೆ ಪ್ರಶ್ನಿಸಿದ ವಿದ್ಯಾರ್ಥಿ ಮುಖಂಡ ಮನೋಜ್ ಬಣ್ಣಜ್ಜಿ ಸ್ನಾತಕ ಪದವಿ ಪ್ರಾರಂಭಿ ಸಲು ಸರ್ಕಾರ ಯಾವುದೇ ಆದೇಶ ನೀಡದಿದ್ದರೂ ಡಿಸೆಂಬರ್ ೨೦೨೧ ರಲ್ಲಿ ಇವರು ಪ್ರವೇಶ ಶುಲ್ಕ ಪಡೆದು ಪ್ರವೇಶಕೊಟ್ಟಿzದರೂ ಏಕೆ? ಕಳೆದ ಬಾರಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಉಪನ್ಯಾಸಕರು ಸಹ ಇರಲಿಲ್ಲ ಆದರೂ ಕಷ್ಟಪಟ್ಟು ಅಭ್ಯಾಸ ಮಾಡಿ ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಹೋಗಿ ಪರೀಕ್ಷೆ ಬರೆದು ಬಂದಿರುತ್ತಾರೆ ಡಿಸೆಂಬರ್ ನಲ್ಲಿ ಪ್ರವೇಶ ಪಡೆದುಕೊಂಡ ಕಾಲೇಜ್ ಆಡಳಿತ ಮಂಡಳಿ ನಂತರ ಫೆಬ್ರವರಿ ಮಾರ್ಚಿನಲ್ಲಿ ಪತ್ರಿಕೆ ಪ್ರಕಟಣೆ ಮೂಲಕ ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಪದವಿಗೆ ಸೇರುವಂತೆ ಪ್ರಕಟಣೆ ಹೊರಡಿಸಿರುತ್ತಾರೆ ತದನಂತರ ಪದವಿ ಪಡೆದು ಮನೆಯಲ್ಲಿರುವ ವಿದ್ಯಾರ್ಥಿನಿಯರು ವಿದ್ಯಾರ್ಥಿಗ ಳನ್ನು ಹುಡುಕಿ ಕಾಲೇಜಿಗೆ ಪ್ರವೇಶ ಮಾಡಿಕೊಂಡಿರುತ್ತಾರೆ ಈಗ ಹೊನ್ನಾಳಿಗೆ ಸ್ನಾತಕೋತ್ತರ ಪದವಿ ಇಲ್ಲ ಎನ್ನುವುದಾದರೆ ನಾವೆಲ್ಲರೂ ವಿವಿಕ್ಕೆ ಹೋಗಿ ಓದಲು ಒಪ್ಪುವು ದಿಲ್ಲ ಎಂದರು. ಶ್ವೇತ ಎಂಬ ವಿದ್ಯಾರ್ಥಿನಿ ಮಾತನಾಡಿ ನಾನು ಈಗಾಗಲೇ ಮದುವೆಯಾಗಿದ್ದು ಚಿಕ್ಕ ಚಿಕ್ಕ ಮಕ್ಕಳಿzರೆ ಕುಟುಂಬದ ಜವಾಬ್ದಾರಿ ಇದೆ ಅವೆಲ್ಲವನ್ನು ಬಿಟ್ಟು ವಿವಿಕ್ಕೆ ಹೋಗಿ ವಸತಿ ನಿಲಯದಲ್ಲಿ ಉಳಿದು ಓದುವುದಾ ದರೆ ಹೇಗೆ ಎಂದರು ಇನ್ನೊಬ್ಬ ವಿದ್ಯಾರ್ಥಿ ಭರತ್ ನಾನು ಈಗಾ ಗಲೇ ೩ ಸ್ನಾತಕೋತ್ತರ ಪದವಿ ಪಡೆದ ರ್‍ಯಾಂಕ್ ವಿದ್ಯಾರ್ಥಿ ಯಾಗಿ ದ್ದೇನೆ ಆದರೂ ಹೊನ್ನಾಳಿಯಲ್ಲಿ ಸ್ನಾತಕೊತ್ತರ ಪದವಿ ಬಂದಿದೆ ಎಂದು ಮತ್ತೊಂದು ಪದವಿಗೆ ಸೇರಿಕೊಂಡಿದ್ದೇನೆ ಮನೆಯಲ್ಲಿz ಓದಿ ಈಗಾಗಲೇ ೨೫೦೦೦ ಹೆಚ್ಚು ಹಣ ಖರ್ಚು ಮಾಡಿದ್ದೇನೆ ಈಗ ಮತ್ತೆ ದ್ವಿತೀಯ ವರ್ಷಕ್ಕೆ ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಹೋಗು ಎಂದು ಹೇಳುವುದು ನ್ಯಾಯವೇ ನಾನು ಯಾವುದೇ ಕಾರಣಕ್ಕೂ ಹೋಗುವುದಿಲ್ಲ ಇ ವ್ಯವಸ್ಥೆ ಮಾಡಿಕೊಡಿ ಎಂದು ಶಾಸಕರನ್ನು ಕೇಳಿಕೊಂಡನು ಪ್ರಾಂಶುಪಾಲರಾದ ಧನಂಜಯ ಅವರು ಶಾಸಕರ ಮಾತಿಗೆ ಉತ್ತರಿ ಸುತ್ತ ನಾನು ಪ್ರಾಂಶುಪಾಲನಾಗಿ ಬಂದ ನಂತರ ಕುಲಸಚಿವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಗಳು ಉನ್ನತ ಶಿಕ್ಷಣ ಆಯುಕ್ತರು ಎಲ್ಲರನ್ನೂ ಸಹ ಮಾತನಾಡಿದ್ದೇನೆ ಸಮಸ್ಯ ಬಗ್ಗೆ ತಿಳಿಸಿದ್ದೇನೆ ಅವರು ವಿದ್ಯಾರ್ಥಿಗಳು ಹೊನ್ನಾಳಿಯಲ್ಲಿ ಪ್ರವೇಶ ಪಡೆಯುವುದಾಗಲಿ ಪರೀಕ್ಷೆ ಬರೆಯುವುದಾಗಲಿ ಸಾಧ್ಯ ವಿಲ್ಲದ ಮಾತು ಅವರಿಗೆ ದಾವಣ ಗೆರೆ ವಿವಿಕ್ಕೆ ಬಂದು ಅ ಓದುವುದಾದಲ್ಲಿ ಅಂತವರಿಗೆ ಪ್ರವೇಶ ಕೊಡುವುದಾಗಿ ತಿಳಿಸಿ zರೆ ಎಂದರು.ನಂತರ ಶಾಸಕರು ವಿದ್ಯಾರ್ಥಿಗಳನ್ನು ವಿಚಾರಿಸಿದಾಗ ವಿದ್ಯಾರ್ಥಿಗಳು ಒಪ್ಪದೆ ನಮಗೆ ಹೊನ್ನಾಳಿಯಲ್ಲಿ ಅವಕಾಶ ಮಾಡಿಕೊಡಿ ಎಂದು ಬಿಗಿ ಪಟ್ಟನ್ನು ಹಿಡಿದರು ತಕ್ಷಣ ಶಾಸಕರು ದೂರವಾಣಿಯಲ್ಲಿ ಸಂಬಂಧಪಟ್ಟ ವಿಶ್ವವಿದ್ಯಾನಿಲಯದ ಅಧಿಕಾರಿಗಳಿಗೆ ವಿಷಯವನ್ನು ತಿಳಿಸಿ ನಾನು ನಾಳೆ ವಿದ್ಯಾರ್ಥಿಗಳ ಜೊತೆಗೆ ನಿಮ್ಮ ಕಾಲೇಜಿನ ಮುಂದುಗಡೆ ಧರಣಿ ಮಾಡುತ್ತೇನೆ ಈ ಬಂದಿರುವ ಸಮಸ್ಯೆ ಸರ್ಕಾರದ ಸಮಸ್ಯೆಯಲ್ಲ ನಿಮ್ಮ ಕುಲಸಚಿವರು ಸಂಬಂಧಿಸಿದ ಅಧಿಕಾರಿಗಳು ಹೊನ್ನಾಳಿಗೆ ಬಂದು ಪರಿಹರಿಸು ವಂತೆ ಸೂಚಿಸಿಎಂದು ತಿಳಿಸಿ ಧರಣಿಗೆ ಎಲ್ಲ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ತಿಳಿಸಿದರು ಕನ್ನಡ ರಕ್ಷಣಾ ವೇದಿಕೆ ವಿನಯ್ ಒಗ್ಗರೆ,ಕಿರಣ್, ರಮೇಶ್, ಮೂರ್ತಿ ನಾಯಕ್, ತಿರುಪತಿ ನಾಯಕ್, ವಿದ್ಯಾರ್ಥಿನಿಯರಾದ ಶ್ವೇತ, ಅಶ್ವಿನಿ, ಚೈತ್ರ, ಸಂಗೀತ, ಮುಂತಾದವರು ಇದ್ದರು