ಜಿಲ್ಲಾ ಸುದ್ದಿತಾಜಾ ಸುದ್ದಿ

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಮತ್ತು ನಿವೃತ್ತ ನೌಕರರ ಸಂಘದಿಂದ ಪ್ರತಿಭಟನೆ

Share Below Link

ಶಿವಮೊಗ್ಗ: ಇಪಿಎಫ್-೯೫ ಯೋಜನೆಯಡಿ ಹೆಚ್ಚುವರಿ ಪಿಂಚಣಿಗಾಗಿ ಹೋರಾಟ ನಡೆಸುತ್ತಿದ್ದ ರಾಷ್ಟ್ರೀಯ ಅಧ್ಯಕ್ಷರನ್ನು ದೆಹಲಿ ಪೊಲೀಸರು ಅಮಾನವೀಯ ರೀತಿ ನಡೆಸಿಕೊಂಡಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಮತ್ತು ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಮ್ಮ ಸಂಘದ ರಾಷ್ಟ್ರೀಯ ಸಂಘರ್ಷ ಸಮಿತಿ ಅಧ್ಯಕ್ಷರಾದ ಅಶೋಕ್ ರಾವತ್ ಅವರು ಹೆಚ್ಚುವರಿ ಪಿಂಚಣಿಗಾಗಿ ರಾಷ್ಟ್ರಾದ್ಯಂತ ಹೋರಾಟ ನಡೆಸುತ್ತಿದ್ದಾರೆ. ಪ್ರಧಾನ ಮಂತ್ರಿಗಳನ್ನೂ ಸಹ ಭೇಟಿ ಮಾಡಿ ಮನವಿ ಮಾಡಿದ್ದಾರೆ. ಆದರೆ ಆ.೪ರಂದು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ದೆಹಲಿಯ ಪೊಲೀಸರು ಅವರನ್ನು ಅನುಚಿತ ವಾಗಿ ನಡೆಸಿಕೊಂಡಿರುವುದನ್ನು ನಮ್ಮ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ನಮ್ಮ ಬೇಡಿಕೆಗಳನ್ನು ಈಡೇರಿಸಲು ನಾವು ಒತ್ತಾಯಿಸಿದ್ದೇವೆ. ನಮ್ಮ ಮನವಿ ಪುರಸ್ಕರಿಸಿ ಕೇಂದ್ರ ಸರ್ಕಾರಕ್ಕೆ ಹಾಗೂ ಕೇಂದ್ರ ಭವಿಷ್ಯನಿಧಿ ಕಚೇರಿಗೆ ಕಳುಹಿಸಿಕೊಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಎಂ. ದೇವರಾಜ್, ಅಧ್ಯಕ್ಷ ಕೆ.ಆರ್. ನಾಗರಾಜ್, ಪದಾಧಿಕಾರಿಗಳಾದ ಎಸ್.ಜಿ. ವಿಶ್ವನಾಥ್, ಕೆ. ಬಸವರಾಜಪ್ಪ, ಜಿ.ಟಿ. ಮಂಜುನಾಥ್, ಎಂ.ವಿ.ಆರ್. ಜೋಯ್ಸ್ ಸೇರಿದಂತೆ ಹಲವರಿದ್ದರು.