ರಾಜ್ಯ ಸರ್ಕಾರದ ವಜಾಕ್ಕೆ ಆಗ್ರಹಿಸಿ ಬಿಜೆಪಿಯಿಂದ ಪ್ರತಿಭಟನೆ…
ಶಿವಮೊಗ್ಗ: ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹತ್ಯೆ ಖಂಡಿಸಿ ಹಾಗೂ ಕಾನೂನು ವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರ ವಜಕ್ಕೆ ಆಗ್ರಹಿಸಿ ನಿನ್ನೆ ಜಿ ಬಿಜೆಪಿ ಕಾರ್ಯಕರ್ತರು ನಗರದ ಗೋಪಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯಪಾಲರು ಕೂಡಲೇ ಮಧ್ಯೆ ಪ್ರವೇಶಿಸಿ ಸರ್ಕಾರವನ್ನು ವಜಗೊಳಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಜಿಹಾದಿ ಸಂಸ್ಕೃತಿ ತಲೆ ಎತ್ತುತ್ತಿದ್ದು, ಹಿಂದುಗಳು ತಲೆ ಎತ್ತಿ ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರೀತಿ ಹೆಸರಲ್ಲಿ ಲವ್ ಜಿಹಾದ್ ನಡೆಸಿ ಹಿಂದು ಹೆಣ್ಣು ಮಕ್ಕಳನ್ನು ಮೃತ್ಯುಕೂಪಕ್ಕೆ ತಳ್ಳಲಾಗುತ್ತಿದೆ. ಇಂತಹ ಮನಸ್ಥಿತಿ ಯವರಿಗೆ ತಕ್ಕಪಾಠ ಕಲಿಸದೇ ಇದ್ದರೆ ಫಯಾಜ್‌ನಂತಹ ಕಿಡಿಗೇಡಿಗಳು ಉದಯಿಸುತ್ತಾರೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ನೇಹಾ ಹತ್ಯೆಯಿಂದ ಇಡೀ ಹೆಣ್ಣು ಸಂಕುಲ ಧೃತಿಗೆಡು ವಂತಾಗಿದೆ. ಅಮಾನುಷವಾಗಿ ಇರಿದು ಹತ್ಯೆ ಮಾಡಿದ ಆರೋಪಿ ಮನೆಗೆ ರಕ್ಷಣೆ ಕೊಡುವಂತಹ ಕೆಲಸವನ್ನು ರಾಜ್ಯ ಸರ್ಕಾರ ಮಾಡಿರುವುದು ದುರ್ದೈವ. ಈ ಮೂಲಕ ಆರೋಪಿಯನ್ನು ರಕ್ಷಿಸುವ ಕಾರ್ಯವನ್ನು ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ ಎಂದು ಕಿಡಿ ಕಾರಿದರು.
ರಾಜ್ಯದ ಹಲವೆಡೆ ಬಹುಸಂಖ್ಯಾತ ಹಿಂದುಗಳ ಮೇಲೆ ಕ್ಷುಲ್ಲಕ ಕಾರಣದಿಂದ ಹ ನಡೆಸ ಲಾಗುತ್ತಿದೆ. ಹಗೆ ಒಳಗಾದವರು ಅದನ್ನು ಬಹಿರಂಗ ಪಡಿಸಲು ಬಿಡದೆ ಸರ್ಕಾರವೇ ಧಮ್ಮಿ ಹಾಕುವ ಕೆಲಸ ಮಾಡುತ್ತಿದೆ. ಈಗ ಪಡೆದಿರುವ ಅಧಿಕಾರ ಶಾಶ್ವತವಲ್ಲ. ನಿಮ್ಮ ಸ್ಥಾನ ಯಾವುದು ಎಂಬು ದನ್ನು ಕರ್ನಾಟಕ ಮತದಾರರು ಇನ್ನು ೧೫ ದಿನಗಳಲ್ಲಿ ತೋರಿಸಲಿ zರೆ. ನಿಮ್ಮ ಚೊಂಬನ್ನು ನಿಮಗೇ ಕೊಟ್ಟು ಮನೆಗೆ ಕಳಿಸಲಿzರೆ ಎಂದು ಹರಿಹಾಯ್ದರು.
ಬಿಜೆಪಿ ಜಿಧ್ಯಕ್ಷ ಟಿ.ಡಿ. ಮೇಘರಾಜ್, ಮಹಿಳಾ ಮೋರ್ಚಾ ಅಧ್ಯಕ್ಷೆ ಗಾಯತ್ರಿಗೌಡ ಮಲ್ಲಪ್ಪ, ಶಾಸಕ ಎಸ್.ಎನ್. ಚನ್ನಬಸಪ್ಪ, ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ ಇನ್ನಿತರರಿದ್ದರು.