ಮೆಗ್ಗಾನ್ ಆಸ್ಪತ್ರೆಯ ಅವ್ಯವ್ಯಸ್ಥೆ ಖಂಡಿಸಿ ಅ.೧೫ ಮತ್ತು ೧೬ರಂದು ಧರಣಿ ಸತ್ಯಾಗ್ರಹ…
ಶಿವಮೊಗ್ಗ : ನಗರದ ಮೆಗ್ಗಾನ್ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದ್ದು, ಇದನ್ನು ತಕ್ಷಣವೇ ಸರಿಪಡಿಸ ಬೇಕೆಂದು ಒತ್ತಾಯಿಸಿ ಅ.೧೫ ಮತ್ತು ೧೬ರಂದು ಎರಡು ದಿನಗಳ ಕಾಲ ಮೆಗ್ಗಾನ್ ಬೋದನಾ ವೈದ್ಯಕೀಯ ಕಾಲೇಜು ಮುಂಭಾಗ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ಜಿ ಘಟಕದ ಆಧ್ಯಕ್ಷ ಮಂಜುನಾಥ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಸೇರಿ ನೆರೆಹೊರೆಯ ಜಿಗಳ ಬಡ ಜನರಿಗೆ ಮೆಗ್ಗಾನ್ ಆಸ್ಪತ್ರೆ ಸಂಜಿವೀನಿಯಾಗಿದೆ. ಆದರೆ ಆಸ್ಪತ್ರೆ ಆಡಳಿತ ವ್ಯವಸ್ಥೆಯಿಂದ ಈಗ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ಬಡ ರೋಗಿಗಳಿಗೆ ಸರಿಯಾದ ಚಿಕಿತ್ಸಾ ಸೌಲಭ್ಯ ಸಿಗುತ್ತಿಲ್ಲ. ವೈದ್ಯರು ಕೂಡ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ದೂರಿದರು.
ಬಡ ರೋಗಿಗಳ ಹಿತ ದೃಷ್ಟಿ ಯಿಂದ ಆಸ್ಪತ್ರೆ ವ್ಯವಸ್ಥೆ ಸರಿಯಾಗ ಬೇಕು. ಅದರೊಂದಿಗೆ ಪ್ರತ್ಯೇಕವಾಗಿ ಜಿ ಆಸ್ಪತ್ರೆ ಮಾಡಬೇಕೆಂದು ಕೂಡ ನಮ್ಮ ಪ್ರಮುಖ ಬೇಡಿಕೆ ಯಾಗಿದೆ. ಈ ನಿಟ್ಟಿನಲ್ಲಿ ಶಾಸಕರು, ಸಚಿವರು ಮತ್ತು ಮುಖ್ಯಮಂತ್ರಿ ಗಳನ್ನು ಒತ್ತಾಯಿಸಿ ಎರಡು ದಿನ ಧರಣಿ ಹಮ್ಮಿಕೊಂಡಿzವೆ. ಕರವೇ ರಾಜಧ್ಯಕ್ಷ ನಾರಾಯಣ ಗೌಡರ ಕರೆಯ ಹಿನ್ನೆಲೆಯಲ್ಲಿ ಧರಣಿ ಹಮ್ಮಿಕೊಳ್ಳಲಾಗಿದೆ.ಅ.೧೫ರ ಬೆಳಗ್ಗೆ ೧೦.೩೦ ರಿಂದ ಅ.೧೬ರ ಸಂಜೆ ೪ ಗಂಟೆಯವರೆಗೆ ಧರಣಿ ನಡೆಯಲಿದೆ ಎಂದರು.
ಕರವೇ ಮಹಿಳಾ ಘಟಕದ ಜಿಧ್ಯಕ್ಷೆ ಜ್ಯೋತಿ ಸೋಮ ಶೇಖರ್ ಮಾತನಾಡಿ, ಮೆಗ್ಗಾನ್ ಆಸ್ಪತ್ರೆಯಲ್ಲಿ ತುಂಬಾ ಅವ್ಯವಸ್ಥೆ ಕಂಡು ಬಂದಿದ್ದು, ವೈದ್ಯರ ನಾಮಫಲಕ ಮಾತ್ರ ಇರುತ್ತದೆ. ಆದರೆ ವೈದ್ಯರುಗಳು ಇರುವುದಿಲ್ಲ. ಬಡ ಹೆಣ್ಣುಮಕ್ಕಳು ಹೆರಿಗೆಗೆ ಎಂದು ಬಂದರೆ ಗಂಡು ಮಗುವಿಗೆ ಇಷ್ಟು, ಹೆಣ್ಣು ಮಗುವಿಗೆ ಇಷ್ಟು ಎಂದು ಹಣ ಪಡೆಯಲಾಗುತ್ತದೆ. ನರ್ಸ್ ಗಳನ್ನು ಮಾತನಾಡಿಸಲು ಆಗುವುದಿಲ್ಲ ಅಷ್ಟು ದುರ್ವತನೆ ತೋರುತ್ತಾರೆಂದು ದೂರಿದರು.
ಸುದ್ದಿಗೋಷ್ಟಿಯಲ್ಲಿ ಕರವೇ ಮುಖಂಡರಾದ ಮಧು ಎಸ್., ಮಂಜು, ಶೈಲೇಶ್, ಲೋಕೇಶ್, ಗೀತಾ, ರವಿಕುಮಾರ್, ಪ್ರಶಾಂತ್, ಗೀತಾ ಇನ್ನಿತರರಿದ್ದರು.
