ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಜೈನ ಮುನಿಗಳ ಹತ್ಯೆ ಖಂಡಿಸಿ ಪ್ರತಿಭಟನೆ

Share Below Link

ಭದ್ರಾವತಿ: ಚಿಕ್ಕೋಡಿ ಜಿಯ ನಮದ ಪರ್ವತದಲ್ಲಿ ಕುಳಿತಿದ್ದ ದಿಗಂಬರ ಜೈನ್ ಸಂತ ಗಣಧಾರಾಚಾರ್ಯ ಶ್ರೀ ಕುಂತುನಾಥ ಜೀ ರವರ ಶಿಷ್ಯರಾದ ಆಚಾರ್ಯ ಶ್ರೀ ಕಾಮ್ ಕುಮಾರ್ ನಂದಿ ಜೀ ರವರನ್ನು ಜು ೫ ರಂದು ಅಪಹರಿಸಿ ನಂತರ ಅವರನ್ನು ಅಮಾನುಷವಾಗಿ ಭರ್ಬರವಾಗಿ ಹತ್ಯೆ ಮಾಡಿರುವುದನ್ನು ಖಂಡಿಸಿ ನಗರದ ಜೈನ್ ಸಮಾಜ ಭಾಂಧ ವರು ಇತರ ಸಮಾಜದೊಂದಿಗೆ ಪ್ರತಿಭಟನೆ ನಡೆಸಿ ಮುಖ್ಯ ಮಂತ್ರಿ ಗಳಿಗೆ ತಹಶೀಲ್ದಾರ್ ರಂಗಮ್ಮ ನವರ ಮೂಲಕ ಮನವಿ ಪತ್ರವನ್ನು ಅರ್ಪಿಸಿ ಆರೋಪಿಗಳಿಗೆ ಕಠಿಣ ಕ್ರಮ ಕೈಗೊಂಡು ಉಗ್ರ ಶಿಕ್ಷೆ ನೀಡಬೇಕು ಎಂದು ಒತ್ತಾಯಿ ಸಿದರು.


ಆಧ್ಯಾತ್ಮ ಪ್ರವರ್ತಕರು ಶಾಂತಿ ಪ್ರಿಯರು ಅಹಿಂಸೆಯ ಪ್ರಿಪಾದ ಕರು ಆಗಿರುವ ಜೈನ ಮುನಿಗಳಿಗೆ ಮತ್ತು ಸಾಧು ಸಾಧ್ವಿಗಳಿಗೆ ಇಂತಹ ಅಹಿತಕರ ಘಟನೆಗಳಿಂದ ತೊಂದರೆ ಉಂಟಾಗದಂತೆ ಸೂಕ್ತ ಭದ್ರತೆಯನ್ನು ನೀಡಬೇಕು. ಜೊತೆಗೆ ಎ ರೀತಿಯ ಮುಂ ಜಗ್ರತ ಕ್ರಮಗಳನ್ನು ಕೈಗೊಂಡು ರಾಜ್ಯ ಸರ್ಕಾರವು ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಜೈನ್ ಸಮಾಜ ಘಟಕವು ಒತ್ತಾ ಯಿಸಿದೆ.
ಈ ಸಭೆಗೆ ಮೊದಲು ಪ್ರತಿಭ ಟನಾಕಾರರು ಹಳೇ ನಗರದ ಜೈನ್ ಮಂದಿರದಿಂದ ಮೆರವಣಿಗೆ ಹೊರ ಟು ಮಾಧವಚಾರ್ ಸರ್ಕಲ್, ಸಿಎನ್ ರಸ್ತೆ, ತಂಗಪ್ಪ ಸರ್ಕಲ್ ಮೂಲಕ ಹಾದು ತಾಲ್ಲೂಕು ಕಚೇರಿಯನ್ನು ತಲುಪಿತು.
ಅಧ್ಯಕ್ಷ ರತನ್ ಚಂದ್ ಜೈನ್, ದಿಲೀಪ್ ಕುಮಾರ್ ಮೇಹ್ತಾ, ಹಿತೇಶ್ ಕುಮಾರ್, ಭರತತ ಕುಮಾರ್, ರಾಹುಲ್ ಜೈನ್, ಭರತ್ ಜೈನ್, ಅಮಿತ್ ಜೈನ್, ಗೌತಮ್ ಚಂದ್, ಸುರೇಶ್ ಕುಮಾರ್ ವಿಹಿಂಪ ನ ಹಾ. ರಾಮಪ್ಪ, ಕಾ.ರಾ.ನಾಗರಾಜ್, ಬಿಜೆಪಿ ಮುಖಂಡರುಗಳಾದ ಬಿ.ಕೆ.ಶ್ರೀನಾಥ್, ಅಧ್ಯಕ್ಷ ಜಿ. ಧರ್ಮ ಪ್ರಸಾದ್, ಮಂಗೋಟೆ ರುದ್ರೇಶ್, ವಿ.ಕದಿರೇಶ್, ನಾರಾ ಯಣಪ್ಪ, ಎನ್.ಮಂಜುನಾಥ್ ಜಿ.ಆನಂದ, ಶ್ರೀನಾಥ್ ಅಚಾರ್ ಹಾಗೂ ರೀತು, ಸಂಗೀತ, ಪಾರೋಲ್, ಕಾಂಚನ್, ಸುನೀತಾ, ಯೋಚನಾ, ಲೀನಾ, ಸರಸ್ವತಿ, ಕಿರಣ್, ರಾಜಕುಮಾರಿ, ಸುನೀತಾ, ಲೇಖನಾ, ಅನಿತಾ ಸೇರಿದಂತೆ ಜೈನ್ ಸಮಾಜ ಮಹಿಳೆಯರು ಇತರರು ಪ್ರತಿಭಟನಾ ಸಭೆಯಲ್ಲಿ ಭಗವಹಿಸಿದ್ದರು.