ಹಿಜಾಬ್ ಎಳೆದು ಅವಮಾನಿಸಿದ ಸಿಎಂ ನಿತೀಶ್‌ವಿರುದ್ದ ಪ್ರತಿಭಟನೆ
ಶಿವಮೊಗ್ಗ: ಬಿಹಾರ್ ಸಿಎಂ ನಿತೀಶ್‌ಕುಮಾರ್ ಅವರು ಆಯುಷ್ ಮಹಿಳಾ ವೈದ್ಯರ ಪ್ರಮಾಣಪತ್ರ ವಿತರಣೆ ಸಂದರ್ಭ ದಲ್ಲಿ ಮಹಿಳೆಯ ಧಾರ್ಮಿಕ ವಸ್ತ್ರವಾದ ಹಿಜಬನ್ನು ಸಾರ್ವಜನಿಕವಾಗಿ ವೇದಿಕೆಯಲ್ಲಿ ಎಳೆದು ಅವಮಾನಿಸಿರುವುದನ್ನು ಖಂಡಿಸಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಇಂದು ಜಿ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ವಿಭಾಗದ ವತಿಯಿಂದ ಡಿಸಿ ಕಛೇರಿ ಎದುರು ಪ್ರತಿಭಟನೆ ನಡೆಸಿ ಜಿಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ನಿತೀಶ್‌ಕುಮಾರ್ ಅವರು ಸಾರ್ವಜನಿಕ ವೇದಿಕೆಯಲ್ಲಿಯೇ ಧಾರ್ಮಿಕ ವಸ್ತ್ರ ಹಿಜಬನ್ನು ಕೈಯಿಂದ ಎಳೆದು ಅವಮಾನಿಸಿ zರೆ. ಈ ಘಟನೆ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಮತ್ತು ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ ಸಂವಿಧಾನ ಕಲಂ ೧೪, ೧೫, ೨೧ ಮತ್ತು ೨೫ಗಳಿಗೆ ವಿರುದ್ಧವಾಗಿದೆ. ಮಹಿಳೆಯ ಗೌರವ, ಸ್ವಾತಂತ್ರ್ಯ ಹಾಗೂ ಧಾರ್ಮಿಕ ಹಕ್ಕುಗಳ ಮೇಲೆ ಗಂಭೀರ ದಾಳಿಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಒಬ್ಬ ಮುಖ್ಯಮಂತ್ರಿಯಾಗಿ ಸಂವಿಧಾನಾತ್ಮಕ ಹುzಯಲ್ಲಿದ್ದರೂ ಕೂಡ ಒಬ್ಬ ಮಹಿಳೆಯ ಮೇಲೆ ಈ ರೀತಿ ವರ್ತಿಸಿ ಅವಮಾನಿಸಿರು ವುದು ಅತ್ಯಂತ ಖಂಡನೀಯ ವಾಗಿದೆ. ಭಾರತ ಧರ್ಮನಿರಪೇಕ್ಷ ಮತ್ತು ಪ್ರಜಸತ್ತಾತ್ಮಕ ರಾಷ್ಟ್ರವಾಗಿದೆ. ಈ ರೀತಿ ನಡೆದುಕೊಂಡಿರುವುದು ಘೋರ ಅಪರಾಧವಾಗಿದೆ. ಆದ್ದರಿಂದ ಈ ಘಟನೆಯ ಬಗ್ಗೆ ಸಂಪೂರ್ಣ ಸ್ವಾತಂತ್ರ್ಯ ತನಿಖೆಗೆ ಆದೇಶಿಸಬೇಕು ಮತ್ತು ನಿತೀಶ್ ಕುಮಾರ್ ಅವರು ಸಾರ್ವಜನಿಕ ಕ್ಷಮೆ ಕೇಳಬೇಕು. ಸಂವಿಧಾನ ಉಲ್ಲಂಘನೆಯ ಹಿನ್ನಲೆಯಲ್ಲಿ ಅವರ ವಿರುದ್ಧ ಅಗತ್ಯ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಪ್ರತಿಭಟನೆಯಲ್ಲಿ ಜಿ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸೈಯದ್ ವಾಹಿದ್ (ಅಡ್ಡು) ಪ್ರಮುಖರಾದ ಕಲೀಂಪಾಷಾ, ನಾಗರಾಜ್, ಎಂ.ಎಸ್. ಸಿದ್ಧಪ್ಪ, ಭಾಗ್ಯಮ್ಮ ಎಸ್., ಅಕ್ರಂಶರೀಫ್, ಸ್ಟೆ ಮಾರ್ಟಿನ್, ರಿಯಾಜ್ ಅಹ್ಮದ್, ಜಫ್ರು, ನೂರು, ಖಲೀಂವು, ಫಾಮೀದಾಬೇಗಂ ಸೇರಿದಂತೆ ಹಲವರಿದ್ದರು.

